ವಿಶ್ವದ ಅತೀ ಎತ್ತರದ ಏಂಜೆಲ್ಸ್ ಫಾಲ್ಸ್ ಏರಲು ಹೋರಾಟ ಜ್ಯೋತಿರಾಜ್ ಈಗ ಏನ್ ಮಾಡ್ತಿದಾರೆ ಗೊತ್ತೇ?

ಕನ್ನಡದ ಸ್ಪೖಡರ್ ಮ್ಯಾನ್ ಎಂದೇ ಹೆಸರಾದ ಚಿತ್ರದುರ್ಗದ ಜ್ಯೋತಿರಾಜ್ ಎಂತಹ ಕಠಿಣ ಜಲಪಾತ, ಗೋಡೆ ಗಳನ್ನು ಸುಲಭವಾಗಿ ಏರುವ ಸಾಮರ್ಥ್ಯ ಹೊಂದಿದ ಅಪರೂಪದ ಪ್ರತಿಭೆ. ಈ ಕಾರಣಗಳಿಂದ ಗಮನ ಸೆಳೆದ ಜ್ಯೋತಿರಾಜ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು ಜಗತ್ತಿನ ಅತೀ ಎತ್ತರವಾದ ಏಂಜಲ್ ಜಲಪಾತವನ್ನು ಫೆಬ್ರವರಿ 26, 27 ರಂದು ಏರುತ್ತೇನೆ ಎಂದು ಜ್ಯೋತಿ ರಾಜ್ ಅವರೇ ಒಂದೆರೆಡು ತಿಂಗಳ ಹಿಂದೆ ತಿಳಿಸಿದ್ದರು.

ಅದನ್ನು ಮೊದಲೆ ತಿಳಿದಿದ್ದ ಜನರು ಅವರು ಅನೇಕ ಜಲಪಾತಗಳನ್ನು ಏರುತ್ತಿರುವ ವಿಡಿಯೋವನ್ನು ವೈರಲ್ ಮಾಡಿದ್ದರು. ಅಷ್ಟೇ ಅಲ್ಲದೆ ಇವರ ಸಾಹಸಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದರು.ಆದರೆ ಇದೆಲ್ಲದರ ನಡುವೆ ಜ್ಯೋತಿರಾಜ್ ಆಪ್ತ ಸ್ನೇಹಿತ ಬಸವರಾಜ್ ಮಾಧ್ಯಮದೆದುರು ಮಾತನಾಡಿದ್ದು. ಈ ಸಾಹಸ ಇನ್ನು ನಡೆದಿಲ್ಲ ಎಂಬ ಮಾಹಿತಿಯನ್ನ ನೀಡಿದ್ದಾರೆ.

ಈ ಸಾಹಸ ಮಾಡಲು ಅವರ ದೇಹದ ತೂಕ ಹೆಚ್ಚಾಗಿರುವುದರಿಂದ ಈ ಸಾಹಸಕ್ಕೆ ಇನ್ನೂ ಕೈ ಹಾಕಿಲ್ಲ. ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಉತ್ತರ ಕನ್ನಡದಲ್ಲಿ ಆರ್ಯುವೇದಿಕ್ ಔಷಧಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಶೀಘ್ರದಲ್ಲಿ ಅವರೇ ಬಂದು ಮಾಧ್ಯಮದೆದುರು ಸುದ್ದಿಗೋಷ್ಠಿ ನಡೆಸಿ ಏಪ್ರಿಲ್ ನಲ್ಲಿ ಈ ಸಾಧನೆಗೆ ತೆರಳಲಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

Leave A Reply

Your email address will not be published.

error: Content is protected !!