ನಟಿ ಅನುಪ್ರಭಾಕರ ಅವರ ಮುದ್ದಾದ ಕುಟುಂಬ ಎಷ್ಟು ಚಂದವಾಗಿದೆ

ಚಂದನವನದ ಖ್ಯಾತ ನಟಿಯರಲ್ಲಿ ಅನುಪ್ರಭಾಕರ್ ಕೂಡಾ ಒಬ್ಬರು. ಇವರು ಚಿಕ್ಕ ವಯಸಿನಲ್ಲಿಯೇ ಚಪಲ ಚೆನ್ನಿಗರಾಯ, ಶಾಂತಿ ಕ್ರಾಂತಿ ಚಿತ್ರದಲ್ಲಿ ಅಭಿನಹಿಸಿದ್ದಾರೆ. 1999 ರಲ್ಲಿ ಬಿಡುಗಡೆಗೊಂಡ ಹೃದಯ ಹೃದಯ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗದ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಇವರು ಡಾ.ವಿಷ್ಣುವರ್ಧನ್ ಅವರ ಜೊತೆಯಲ್ಲಿ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ, ಸಹೋದರಿಯ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಅನು ಪ್ರಭಾಕರ್ ಅವರು ಮಾರ್ಚ್ ೨೦೦೨ರಲ್ಲಿ ನಟಿ ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಅವರನ್ನು ವಿವಾಹವಾದರು.ಇವರ ನಡುವೆ ಭಿನ್ನಾಭಿಪ್ರಾಯಗಳನ್ನು ಉದಾಹರಿಸಿ, ಅನು ಅವರು ಜನವರಿ ೨೦೧೪ರಲ್ಲಿ ವಿಚ್ಛೇದನ ಪಡೆದರು. ನಂತರ ಏಪ್ರಿಲ್ ೨೦೧೬ರಲ್ಲಿ ನಟ ರಘು ಮುಖರ್ಜಿ ಅವರನ್ನು ವಿವಾಹವಾದರು.ಅವರಿಗೆ ನಂದನ ಎಂಬ ಪುತ್ರಿ ಇದ್ದಾರೆ . ಅನು ಅವರ ವಿವಿಧ ಚಿತ್ರಗಳ ಅಭಿನಯಕ್ಕಾಗಿ ಬೆಂಗಳೂರಿನ ಕೊಳದ ಮಠವು ‘ಅಭಿನಯ ಸರಸ್ವತಿ’ ಎಂಬ ಪ್ರಶಸ್ತಿನ್ನು ನೀಡಿ ಗೌರವಿಸಲಾಯಿತು.ಕನ್ನಡ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ೨೦೦೦-೦೧ ಮತ್ತು ಸಿನೆಮಾ ಎಕ್ಸ್ ಪ್ರೆಸ್ ಅತ್ಯುತ್ತಮ ನಟಿ ಮುಂತಾದ ಪ್ರಶಸ್ತಿಗಳನ್ನು ಇವರು ಗೆದ್ದಿದ್ದಾರೆ.

ನಟಿ ಅನು ಪ್ರಭಾಕರ್​ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ. ಸದಾ ತಮ್ಮ ಹಾಗೂ ಕುಟುಂಬದ ಕುರಿತಾಗಿ ಅಪ್ಡೇಟ್​ ಕೊಡುವ ಅನು ಪ್ರಭಾಕರ್,​ ಒಂದೇ ಫ್ರೇಮಿನಲ್ಲಿ ಮೂರು ತಲೆಮಾರಿನವರು ಇರುವ ಫೋಟೋ ಹಂಚಿಕೊಂಡಿದ್ದಾರೆ. ನಟಿ ಅನು ಪ್ರಭಾಕರ್​ ತಮ್ಮ ಅಮ್ಮ ಗಾಯತ್ರಿ ಪ್ರಭಾಕರ್​ ಹಾಗೂ ಮಗಳು ನಂದನಾ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಸೆಲೆಬ್ರಿಟಿ ಕುಟುಂಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಅನುಪ್ರಭಾಕರ್ ಅವರು ಕೆಲವು ಕಿರುತೆರೆ ಕಾರ್ಯಕ್ರಮಗಳನ್ನು ಕೂಡಾ ನಡೆಸಿಕೊಟ್ಟಿದ್ದಾರೆ.

ಅನು ಪ್ರಭಾಕರ್ ಅವರು ನಡೆಸಿಕೊಟ್ಟ ಕಿರುತೆರೆ ಕಾರ್ಯಕ್ರಮಗಳು ಇಂತಿವೆ.. ಬಾಳೆ ಬಂಗಾರ, ಹೋಮ್ ಮಿನಿಸ್ಟರ್, ಶ್ರೀಮತಿ ಕರ್ನಾಟಕ ,ಮಂಜು ಮುಸುಕಿದ ಹಾದಿ, ನೂರು ದಿನಗಳು ಮತ್ತು ತ್ರಿವೇಣಿ ಸಂಗಮ. ಇತ್ತೀಚೆಗೆ ಇವರು ತಮ್ಮ ಹುಟ್ಟುಹಬ್ಬದಂದು ಹಂಚಿಕೊಂಡ ಕುಟುಂಬದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಅನುಪ್ರಭಾಕರ್ ಹಾಗೂ ರಘು ಮುಖರ್ಜಿ ಇಬ್ಬರ ಅಭಿಮಾನಿಗಳಿಗೂ ಸಂತಸ ತಂದಿದೆ.

Leave a Comment

error: Content is protected !!