Kannada Actor Prem: ಭೀಮನ ಅಮಾವಾಸ್ಯೆಯಂದು ಹೆಂಡತಿ ಕೈಯಾರ ಪಾದ ಪೂಜೆ ಮಾಡಿಸಿಕೊಂಡ ನೆನಪಿರಲಿ ಪ್ರೇಮ್!

Kannada Actor Prem: ಸ್ನೇಹಿತರೆ, ಕಳೆದ ಜುಲೈ 17ನೇ ತಾರೀಖಿನಂದು ಭೀಮನ ಅಮಾವಾಸ್ಯೆ ಇದ್ದ ಕಾರಣ ಈ ಒಂದು ಸ್ಪೆಷಲ್ ದಿನದ ಅಂಗವಾಗಿ ಎಲ್ಲಾ ಮಹಿಳೆಯರು ಭೀಮನ ಅಮಾವಾಸ್ಯೆಯನ್ನು ಬಹಳನೇ ಅರ್ಥಪೂರ್ಣವಾಗಿ ಆಚರಿಸಿದರು. ಈ ಒಂದು ಶುಭದಿನದಂದು ವಿವಾಹಿತ ಮಹಿಳೆಯರು ಗಂಡನ ದೀರ್ಘಾಯುಷ್ಯಕ್ಕಾಗಿ(long life) ಪಾದಪೂಜೆ ಮಾಡಿ ಆರತಿ ಬೆಳಗ್ಗೆ ಗಂಡ ನೂರು ಕಾಲ ಸುಖವಾಗಿ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದಂತಹ ದಿನವಾಗಿತ್ತು.

ನಮ್ಮ ಸ್ಯಾಂಡಲ್ವುಡ್ ನಲ್ಲಿಯೂ ಸಾಕಷ್ಟು ಸ್ಟಾರ್ ನಟ ನಟಿಯರು ಭೀಮನ ಅಮಾವಾಸ್ಯೆಯ ಆಚರಣೆ ಮಾಡಿದ್ದು, ಆ ಕೆಲ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ(social media) ಬಾರಿ ವೈರಲ್ ಆಗುತ್ತಿದೆ. ಅದರಲ್ಲೂ ನೆನಪಿರಲಿ ಪ್ರೇಮ್ ದಂಪತಿಗಳ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಇದ್ದರೆ ಇವರ ರೀತಿ ಇರಬೇಕು ಎಂದು ಜೋಡಿಗಳನ್ನು ಹಾಡಿ ಹೊಗಳುತ್ತಿದ್ದಾರೆ.

ಹೌದು ಸ್ನೇಹಿತರೆ, ಹಲವರು ದಶಕಗಳಿಂದ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವಂತಹ ನಟ ಪ್ರೇಮ್ ನೆನಪಿರಲಿ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದು, ಹೆಚ್ಚಿನ ಮಹಿಳಾ ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಇವರ ಲವ್ ಸ್ಟೋರಿ ಯಾವ ಟ್ರಾಜಿಡಿಗೂ ಕಡಿಮೆ ಇಲ್ಲದಂತಿದೆ.

ಆಗಸ್ಟೇ ನಟ ಪ್ರೇಮ್ ಒಂದೆರಡು ಸಿನಿಮಾಗಳನ್ನು ಮಾಡಿ ತಕ್ಕಮಟ್ಟದಲ್ಲಿ ಗುರುತಿಸಿಕೊಂಡಿದ್ದಾಗ ಬಸ್ನಲ್ಲಿ ಪರಿಚಯವಾದಂತಹ ಜ್ಯೋತಿ (jyothi) ಎಂಬುವರೊಟ್ಟಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ಯಾವಾಗ ಜ್ಯೋತಿ ಅವರ ಮನೆಯಲ್ಲಿ ಈ ಮಾಹಿತಿ ತಿಳಿದು ಬೇರೊಬ್ಬರೊಂದಿಗೆ ಮದುವೆ ಮಾಡಲು ಮುಂದಾಗುತ್ತರೋ ಆ ಸಂದರ್ಭದಲ್ಲಿ ಪ್ರೇಮ್ ಪ್ರೀತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಆಂಬುಲೆನ್ಸ್(Ambulance) ನಲ್ಲಿ ಜ್ಯೋತಿಯವರನ್ನು

ಎತ್ತಾಕೊಂಡು ಹೋಗಿ ಆಗಸ್ಟ್ ಒಂದು 2000ನೇ ಇಸ್ವಿಯಲ್ಲಿ ದೇವಸ್ಥಾನ ಒಂದರಲ್ಲಿ ಮದುವೆಯಾದರು. ಅಂದಿನಿಂದ ಇಂದಿನವರೆಗೂ ಬಹಳ ಅನ್ಯೋನ್ಯವಾಗಿ ಬಾಳುತ್ತಿರುವ ಈ ಜೋಡಿಗಳು ಅದೆಷ್ಟೋ ಯುವ ಪ್ರೇಮಿಗಳಿಗೆ ಆದರ್ಶ. ಕಳೆದ ವರ್ಷದಂತೆ ಈ ವರ್ಷವೂ ಪ್ರೇಮ್ ಅವರ ಪತ್ನಿ ಜ್ಯೋತಿ ಗಂಡನ ಪಾದ ಪೂಜೆ (foot worship)ಮಾಡಿ ದೀರ್ಘಾಯುಷ್ಯವನ್ನು ಬೇಡಿಕೊಂಡಿದ್ದು, ಇದರ ವಿಡಿಯೋ ಒಂದನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ Namratha Gowda: ಯಾವುದೋ ಬಾಲಿವುಡ್ ಬ್ಯೂಟಿ ಅಲ್ಲ, ಇದು ನಮ್ಮ ಕನ್ನಡದ ನಾಗಿಣಿ

Leave A Reply

Your email address will not be published.

error: Content is protected !!