ಅಪ್ಪು ತಮ್ಮ ಮಕ್ಕಳೊಂದಿಗೆ ಇದ್ದ ಆ ಸುಂದರ ಕ್ಷಣಗಳು ಹೇಗಿದ್ದವು ಗೊತ್ತಾ? ನಿಜಕ್ಕೂ ಕಣ್ಣೀರ್ ಬರತ್ತೆ

ಅಪ್ಪು ಎಂದೇ ಖ್ಯಾತಿ ಪಡೆದಿರುವ ಸಾವಿರಾರು ಅಭಿಮಾನಿಗಳಿಂದ ಅಪ್ಪು ಎಂದೇ ಕರೆಯಲ್ಪಡುವ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಪುನೀತ್ ರಾಜಕುಮಾರ್ ಅವರು ಕಳೆದ ಅಕ್ಟೋಬರ್ 29ರಂದು ನಮ್ಮನ್ನೆಲ್ಲ ಅಗಲಿದ್ದಾರೆ ಎಂಬುದು ವಿಷಾದನೀಯ ಸಂಗತಿಯಾಗಿದೆ ಕನ್ನಡ ವರ ನಟ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ಅವರ ಕೊನೆಯ ಸಂತಾನ ಇವರ ಮೂಲ ಹೆಸರು ಲೋಹಿತ್ ಕುಮಾರ್ ತಮ್ಮ ಬಾಲ್ಯದಲ್ಲಿ ಹಲವಾರು ಚಲನಚಿತ್ರಗಳಲ್ಲಿ ನಟನೆ ಮಾಡಿ ಹಾಗೂ ಹಿನ್ನೆಲೆ ಗಾಯಕ ರಾಗಿದ್ದಾರೆ ಜನಮನ್ನಣೆಗಳಿಸಿದ್ದಾರೆ ಇವರ ಸಹೋದರರಾದ ರಾಘವೇಂದ್ರ ರಾಜಕುಮಾರ್ ಮತ್ತು ಶಿವರಾಜ್ ಕುಮಾರ್ ಅವರು ಕೂಡ ಖ್ಯಾತ ನಟರಾಗಿದ್ದಾರೆ.

ಚಿಕ್ಕಂದಿನಲ್ಲಿ ತಮ್ಮ ನಟನಾ ಶಾಲೆಯಿಂದ ರಾಜ್ಯಪ್ರಶಸ್ತಿ ರಾಷ್ಟ್ರಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಇನ್ನು ಅವರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು 1999 ಡಿಸೆಂಬರ್ 1 ರಂದು ಅಶ್ವಿನಿ ಅವರೊಂದಿಗೆ ವಿವಾಹ ಮಾಡಿಕೊಂಡರು. ಅಶ್ವಿನಿ ಅವರನ್ನು ನೋಡಿದ ಮೊದಲ ದಿನವೇ ಪುನೀತ್ ಅವರಿಗೆ ಪ್ರೀತಿ ಆಗಿ ಸುಮಾರು 8 ತಿಂಗಳ ನಂತರ ತಮ್ಮ ಪ್ರೀತಿಯನ್ನು ಅಶ್ವಿನಿ ಅವರಿಗೆ ವ್ಯಕ್ತ ಪಡಿಸಿದ್ದರು.

ಮೊದಮೊದಲು ಅಶ್ವಿನಿ ಮನೆಯವರು ವಿರೋಧ ವ್ಯಕ್ತಪಡಿಸಿದರು ಕೊನೆಗೂ ರಾಜಕುಮಾರ್ ಫ್ಯಾಮಿಲಿ ಒತ್ತಾಯ ಮೇರೆಗೆ ಅವರ ಪ್ರೀತಿಗೆ ಅಸ್ತು ಎಂದಿದ್ದರು ಎರಡೂ ಕುಟುಂಬಗಳ ಆಶೀರ್ವಾದದೊಂದಿದೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರು ಆದರ್ಶ ದಂಪತಿಗಳಾಗಿ ತಮ್ಮ ಜೇವನದ ಮೌಲ್ಯವನ್ನು ತಮ್ಮ ಮಕ್ಕಳಿಗೂ ಪಾಲನೆ ಮಾಡಲು ಕಲಿಸಿದಾರೆ. ಪುನೀತ್ ಅವರು ತಮ್ಮ ನಟನೆ ನಡುವೆ ತಮ್ಮ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ವಿನಿಯೋಗಿಸಿದ್ದಾರೆ.

ತಮ್ಮ ಮಡದಿ ಮತ್ತು ಮಕ್ಕಳಾದ ದೃತಿ ಹಾಗೂ ನಂದಿತಾ ಜೊತೆಗೆ ಅನೇಕ ಜಾಲಿ ಟ್ರಿಪ್ ಎಂಜಾಯ್ ಮಾಡಿದ್ದಾರೆ ಇನ್ನು ಪುನೀತ್ ಅವರ ಮಕ್ಕಳು ಕ್ಯಾಮೆರಾ ಕಣ್ಣಿಗೆ ಕಾಣೋದು ಅತೀ ವಿರಳ ಸದಾ ತಮ್ಮ ಓದಿನ ಕಡೆಗೆ ಗಮನ ಪತ್ನಿ ಮನೆ ಜವಾಬ್ದಾರಿ ಅಚ್ಚು ಕಟ್ಟಾಗಿ ನಿಭಾಯಿಸುತ್ತಾರೆ. ಪುನೀತ್ ರಾಜ್ ಕುಮಾರ್ ಮಕ್ಕಳಿಗೆ ರಾಘವೇಂದ್ರ ರಾಜ್ ಕುಮಾರ್ ಮಗನಾದ ವಿನಯ್ ರಾಜ್ ಕುಮಾರ್ ತುಂಬಾ ಅಚ್ಚು ಮೆಚ್ಚು . ಅವರ ಜೊತೆ ಹಲವಾರು ಫೋಟೋ ಅಲ್ಲಿ ಕಾಣಬಹುದು ಪುನೀತ್ ಅವರ ಅಕಾಲಿಕ ಮರಣ ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ಆ ದೇವರಲ್ಲಿ ಬೇಡೋಣ

Leave A Reply

Your email address will not be published.

error: Content is protected !!