ನಿಮ್ಮ ನೆಚ್ಚಿನ ನಟಿಯರ ನಿಜವಾದ ವಯಸ್ಸೆಷ್ಟು ಗೊತ್ತಾ? ಕೇಳಿದ್ರೆ ನಿಜಕ್ಕೂ ಬೆರಗಾಗ್ತೀರಾ

ಕನ್ನಡ ಚಿತ್ರ ರಂಗವನ್ನ ಆಳುತ್ತಿರೋ ಈ ನಟಿಯರ ವಯಸ್ಸು ಎಷ್ಟು ಅಂತ ಗೊತ್ತಾದ್ರೆ ಅಚ್ಚರಿ ಪಡುತ್ತಿರಾ. ನಮ್ಮನ್ನೆಲ್ಲಾ ರಂಜಿಸುವ ಸ್ಯಾಂಡಲ್ ವುಡ್ ನಟಿಯರು ಯಾವಾಗಲೂ ಕೂಡಾ ಚಿಕ್ಕ ವಯಸ್ಸಿನವರ ಹಾಗೆ ಕಾಣ್ತಾರೆ. ಅಷ್ಟೇ ಅಲ್ಲದೆ ಅವರ ವಯಸ್ಸು ಎಷ್ಟು ಅನ್ನುವುದೇ ತಿಳಿಯುವುದಿಲ್ಲ, ಇನ್ನು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಅನೇಕ ಸೂಪರ್ ನಟಿಯರು ಇದ್ದಾರೆ. ಇವರ ಸೂಪರ್ ಕ್ಯೂಟ್ ಅಭಿನಯದಿಂದ ಸಾಕಷ್ಟು ಅಭಿಮಾನಿಗಳ ಬಳಗವನ್ನು ಕೂಡ ಹೊಂದಿದ್ದಾರೆ.

ನಾನು ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ. ನಿಮ್ಮ ನೆಚ್ಚಿನ ತಾರೆಯರ ಹುಟ್ಟಿದ ದಿನಾಂಕ ಯಾವುದು ಹಾಗೆ ಅವರ ವಯಸ್ಸು ಎಷ್ಟು ಅನ್ನೋದನ್ನು ನೀವು ಕೂಡ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ. ಮಾಹಿತಿಯ ಕೊನೆಯಲ್ಲಿ ನಿಮ್ಮ ನೆಚ್ಚಿನ ತಾರೆ ಯಾರು ಎಂಬುದನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸಿನೆಮಾ ಪರದೆಯ ಮೇಲೆ ಸದಾ ತರುಣಿಯರ ಹಾಗೆ ಕಾಣುವ ಈ ತಾರೆಯರ ಹುಟ್ಟಿದ ದಿನಾಂಕ ಮತ್ತು ಅವರ ಈಗಿನ ವಯಸ್ಸನ್ನು ತಿಳಿಯೋಣ. ಮೊದಲನೆಯದಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಇವರು ಬುಲ್ ಬುಲ್ ಖ್ಯಾತಿಯ ನಟಿಯಾಗಿದ್ದು ಕನ್ನಡ ಇಂಡಸ್ಟ್ರಿಯಲ್ಲಿ ಲಕ್ಕಿ ನಟಿ ಅಂತಾ ಕರೆಸಿಕೊಂಡಿದ್ದಾರೆ. ಇವರ ಪ್ರಸ್ತುತ ವಯಸ್ಸು ಮೂವತ್ತು ವರುಷ, 1992 ಅಕ್ಟೋಬರ್ 2 ತಾರೀಖಿನಂದು ಜನನವಾಗಿದ್ದಾರೆ. ಹರಿಪ್ರಿಯಾ ಇವರು ಕನ್ನಡ ಇಂಡಸ್ಟ್ರಿಯಲ್ಲಿ ಕ್ಯೂಟ್ ನಟಿ ಅಂತಾನೇ ಹೇಳಬಹುದು ಇವರ ವಯಸ್ಸು ಮೂವತ್ತೊಂದು ವರುಷ ಹಾಗೆ ಇವರು ಹುಟ್ಟಿದ ದಿನಾಂಕ ಮತ್ತು ವರ್ಷ ಅಕ್ಟೋಬರ್ 29, 1991. ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಅವರ ಪ್ರಸ್ತುತ ವಯಸ್ಸು ಇಪ್ಪತ್ತಾರು ವರ್ಷ ಹಾಗೆ ಇವರ ಹುಟ್ಟಿದ ವರುಷ ಹಾಗೂ ತಿಂಗಳು ಏಪ್ರಿಲ್ 5, 1996.

ಶ್ರುತಿ ಹರಿಹರನ್ ಇವರ ಪ್ರಸ್ತುತ ವಯಸ್ಸು ಮೂವತ್ತಾಮೂರು ವರ್ಷ ಹಾಗೆ ಇವರು ಜನಿಸಿದ್ದು ಜನವರಿ 1, 1989. ರಾಗಿಣಿ ಅವರು ಕನ್ನಡ ಇಂಡಸ್ಟ್ರಿಯ ಡೈನಮಿಕ್ ಹೀರೋಯಿನ್ ಅಂತಾನೇ ಹೇಳಬಹುದು. ಇವರು 1990 ನೇ ಇಸವಿಯಲ್ಲಿ ಮೇ 24 ನೇ ತಾರೀಖಿನಂದು ಜನಿಸಿರುವ ರಾಗಿಣಿ ರವರಿಗೆ ಮೂವತ್ತೆರಡು ವರ್ಷ. ಅಮೂಲ್ಯ ಚೆಲುವಿನ ಚಿತ್ತಾರದಿಂದ ಸಖತ್ ಫೇಮಸ್ ಆದ ಅಮೂಲ್ಯ ರವರ ವಯಸ್ಸು ಇಪ್ಪತ್ತೊಂಬತ್ತು ಹಾಗೆ ಇವರು ಜನಿಸಿದ್ದು ಸೆಪ್ಟೆಂಬರ್ 14, 1993. ಸಂಯುಕ್ತ ಹೆಗಡೆ ಇವರು ಕೂಡಾ ಕಿರಿಕ್ ಪಾರ್ಟಿ ಚಲನಚಿತ್ರದಿಂದ ಸಖತ್ ಫೇಮಸ್ ಆದರೂ ಇದೀಗ ಇವರಿಗೆ ಇಪ್ಪತ್ನಾಲ್ಕು ವರುಷ ಇವರು ಜುಲೈ 1998, 17 ನೇ ತಾರೀಖಿನಂದು ಜನಿಸಿದರು. ರಾಧಿಕಾ ಪಂಡಿತ್ ಇವರು ಮಾರ್ಚ್ 7, 1984 ರಲ್ಲಿ ಜನಿಸಿದ್ದು ಇವರಿಗೆ ಇದೀಗ ಮೂವತ್ತೆಂಟು ವರ್ಷ.

ಮೋಹಕ ತಾರೆ ರಮ್ಯಾ ಇವರ ಪ್ರಸ್ತುತ ವಯಸ್ಸು ಮೂವತ್ತೈದು ವರ್ಷ ಹಾಗೆ ಇವರು ಜನಿಸಿದ್ದು ಸೆಪ್ಟೆಂಬರ್ 29, 1987. ಕೃತ್ತಿಕಾ ಕರಬಂಧ ಇವರ ಇವರ ಪ್ರಸ್ತುತ ವಯಸ್ಸು ಮೂವತ್ನಾಲ್ಕು ವರ್ಷ ಇವರು ಅಕ್ಟೋಬರ್ 29, 1988 ನೇ ವರ್ಷದಲ್ಲಿ ಜನಿಸಿದ್ದಾರೆ. ಐಂದ್ರಿತಾ ರೇ ಇವರು ಏಪ್ರಿಲ್ 16 ನೇ ತಾರೀಖು 1985 ನೇ ಇಸವಿಯಲ್ಲಿ ಜನಿಸಿದ್ದು ಇವರಿಗೆ ಪ್ರಸ್ತುತ ಮೂವತ್ತೆಳು ವರ್ಷಗಳು. ಶ್ರದ್ಧಾ ಶ್ರೀನಾಥ್ ಅವರಿಗೆ ಪ್ರಸ್ತುತ ಮೂವತ್ತೆರಡು ವರ್ಷ ಇವರು ಸೆಪ್ಟೆಂಬರ್ 29 1990 ರಂದು ಜನಿಸಿದರು.

ಪೂಜಾ ಗಾಂಧಿ ಇವರ ಪ್ರಸ್ತುತ ವಯಸ್ಸು ಮೂವತ್ತೊಂಬತ್ತು ವರ್ಷ ಇವರು ಅಕ್ಟೋಬರ್ 7 1983 ರಲ್ಲಿ ಜನಿಸಿದ್ದಾರೆ. ಪ್ರಿಯಾಮಣಿ ಪಂಚಭಾಷಾ ತಾರೆಯಾಗಿರುವ ಇವರು ಜೂನ್ 4, 1984 ರಂದು ಜನಿಸಿದ್ದಾರೆ. ಇವರಿಗೆ ಪ್ರಸ್ತುತ ಮೂವತ್ತೆಂಟು ವರ್ಷಗಳು.

ನಾವೆಲ್ಲರೂ ನಮ್ಮ ನೆಚ್ಚಿನ ನಟಿಯರನ್ನು ಪರದೆಯ ಮೇಲೆ ನೋಡುತ್ತಿರುತ್ತೇವೆ ಮತ್ತು ಪ್ರತಿ ನಟಿಯರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯರ ವಯಸ್ಸು ಮತ್ತು ಅವರ ವಯಸ್ಸನ್ನು ತಿಳಿಯಲು ಆಸಕ್ತಿ ಹೊಂದಿದ್ದಾರೆ. ಈ ವಿಷಯದ ಬಗ್ಗೆ ನಿಮಗೆ ಮಾಹಿತಿ ನೀಡುವ ನಮ್ಮ ಸಣ್ಣ ಪ್ರಯತ್ನ ಇಲ್ಲಿದೆ. ನಟಿಯರು ಉತ್ತಮ ಆಹಾರವನ್ನು ಅನುಸರಿಸುವುದರಿಂದ ಮತ್ತು ಅವರ ದೇಹವನ್ನು ಆರೋಗ್ಯಕರವಾಗಿ ಮತ್ತು ಉತ್ತಮವಾಗಿಡಲು ಫಿಟ್‌ನೆಸ್ ವ್ಯಾಯಾಮಗಳನ್ನು ಮಾಡುತ್ತಿರುವುದರಿಂದ ಪರದೆಯ ಮೇಲೆ ಸದಾ ಸುಂದರವಾಗಿ ಕಾಣುತ್ತಿರುತ್ತಾರೆ. ದಯವಿಟ್ಟು ಅವರ ಜನ್ಮದಿನದಂದು ಹಾರೈಸಲು ಮರೆಯಬೇಡಿ.

Leave a Comment

error: Content is protected !!