ಸಂಗೀತ ಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಠಿಸಿದ ವಿಜಯ್ ಪ್ರಕಾಶ್, ಅವರ ಮನೆಗೆ ಹೇಗಿದೆ ನೋಡಿ ಮೊದಲ ಬಾರಿಗೆ

ಸಂಗೀತ ಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಠಿಸಿದವರು ವಿಜಯ್ ಪ್ರಕಾಶ್. ಭಾರತೀಯ ಹಿನ್ನೆಲೆ ಗಾಯಕರೆಂದು ಗುರುತಿಸುತ್ತಾರೆ. ಇವರು ತಮ್ಮ ಸುಮಧುರ ಗಾಯನದಿಂದ ಜನಮನ ಗೆದ್ದಿದ್ದಾರೆ. ಇವರ ಗಾಯನಕ್ಕೆ ದೇಶೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬಂದಿದೆ. ಪ್ರತಿಷ್ಠಿತ ಮನೋರಂಜನಾ ಚಾನೆಲ್ ಝೀ ಕನ್ನಡದಲ್ಲಿ ಪ್ರಸಾರವಾಗುವ ಸ ರಿ ಗ ಮ ಪ ಕಾರ್ಯಕ್ರಮದ ಒಬ್ಬ ಜಡ್ಜ್ ಆಗಿ ಜನಪ್ರಿಯರು ಇವರು. ಹಾಗೂ ಇವರು ವಿ ಪಿ ಎಂದೇ ಪ್ರಸಿದ್ಧರು.

ವಿಜಯ್ ಪ್ರಕಾಶ್ ಅವರು ಮೈಸೂರಿನಲ್ಲಿ ಹುಟ್ಟಿ ಬೆಳೆದವರು. ಅವರ ತಂದೆಯವರೂ ಸಹ ಸಂಗೀತ ಪಂಡಿತರು. ತಂದೆಯ ಮಾರ್ಗದರ್ಶನದಲ್ಲಿ ಶಾಸ್ತ್ರೀಯ ಸಂಗೀತವನ್ನು ಮೈಗೂಡಿಸಿಕೊಂಡ ವಿಜಯಪ್ರಕಾಶ್ ಮುಂದೆ ಪಾಶ್ಯಾತ್ಯ ಸಂಗೀತವನ್ನೂ ಕಲಿತರು. ವಿದೇಶದಲ್ಲೂ ಕನ್ನಡ ಸಂಗೀತದ ಕಂಪನ್ನು ಪಸರಿಸಿದರು.

ವಿಜಯ್ ಪ್ರಕಾಶ್ ಹುಟ್ಟಿದ ಊರು ಮೈಸೂರು, ಜನನ ಫೆಬ್ರವರಿ 21, 1976 ತಂದೆ ಎಲ್.ರಾಮಶೇಷು, ತಾಯಿ ಆರ್.ಲೋಪಮುದ್ರಾ, ತಾತ ಕರ್ನಾಟಕದ ಕಲಾತಿಲಕ ಲಕ್ಷ್ಮಿಪತಿ ಭಾಗವತರ್, ಅಣ್ಣ ಫಣೇಂದ್ರ ಕುಮಾರ್ ಪತ್ನಿ ಮಹತಿ, ಮಗಳು ಕಾವ್ಯ. ಚಿಕ್ಕವಯಸ್ಸಿಂದ ಸಂಗೀತ ಅಂದ್ರೆ ಪ್ರಾಣ. ಅವರ ಸ್ನೇಹಿತರೊಬ್ಬರು ಲಂಡನ್ ಗೆ ಹೋಗಿದ್ದಾಗ ವಾದ್ಯವೊಂದನ್ನು ಖರೀದಿಸಿದ್ದರು. ಅದನ್ನ ನೋಡಿ ನನಗೂ ತೆಗೆದುಕೊಡಮ್ಮ ಅಂತ ಕೇಳಿದ್ದರು. ನಾವು ಆಗಿದ್ದ ಪರಿಸ್ಥಿತಿಯಲ್ಲಿ ಬರೀ ಸಂಗೀತದಲ್ಲಿ ಮಕ್ಕಳನ್ನ ಸಾಕ್ತಾಯಿದ್ದದ್ದು. ಆಗ ತೆಗೆದುಕೊಡೋಕೆ ಆಗ್ಲಿಲ್ಲ. ಇವತ್ತಿಗೂ ನನ್ನ ಮನಸ್ಸಲ್ಲಿ ಅದು ಕೊರೆಯುತ್ತಿದೆ. ಕ್ಷಮಿಸು ಮಗನೇ ಎಂದಿದ್ದರು ಅವರ ತಾಯಿ ಲೋಪಮುದ್ರ.

ಸೈಂಟ್ ಥಾಮಸ್ ಶಾಲೆಯ ವಿದ್ಯಾರ್ಥಿ. ಚಿಕ್ಕಂದಿನಿಂದಲೂ ಇವರಿಗೆ ಸಂಗೀತವೆಂದರೆ ಅಚ್ಚು-ಮೆಚ್ಚು.
ವಿಜಯ್ ಚಿಕ್ಕವರಿದ್ದಾಗ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಮೊದಲ ಬಾರಿಗೆ ವೇದಿಕೆಯಲ್ಲಿ ಲಂಬೋಧರ ಹಾಡನ್ನು ಹಾಡಿದ್ದರು. ಆಗ ಅವರಿಗೆ ದೊರೆತ ಬಹುಮಾನ ಗ್ಲಾಸ್. ವಿಪಿ ಇಂದಿಗೂ ಅದನ್ನು ಜೋಪಾನವಾಗಿಟ್ಟು ಕೊಂಡಿದ್ದಾರೆ.

ಇಂಜಿನಿಯರಿಂಗ್ ಸೇರಿದ್ದ ವಿಪಿ ಜೀವನದಲ್ಲಿ ಏನನ್ನಾದರೂ ಸಾಧಿಸುವ ಹಂಬಲ ಹೊಂದಿದ್ದರು. ಸಂಗೀತದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅವರು ವಿದ್ಯಾಭ್ಯಾಸದಲ್ಲಿ ಗಮನ ಹರಿಸಲಾಗದೆ ಬಹಳ ದೊಡ್ಡ ತೀರ್ಮಾನ ತೆಗೆದುಕೊಂಡರು. ಏಕೆ ಹೋಗುತ್ತಿದ್ದೇನೆ, ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೂ ಗೊತ್ತಿಲ್ಲದೆ, ತಂದೆ-ತಾಯಿಗೆ ಪತ್ರ ಬರೆದಿಟ್ಟು ಕೈಯಲ್ಲಿ 700 ರೂಪಾಯಿ, ಬ್ಯಾಗ್ ನಲ್ಲಿ ಒಂದುಜೊತೆ ಬಟ್ಟೆ ಹಾಕಿಕೊಂಡು ಹೊರಟರು. ಮೈಸೂರಿನಿಂದ ಬೆಂಗಳೂರಿಗೆ ಬಂದ ವಿಪಿ ಅಲ್ಲಿಂದ ತಿರುಪತಿಗೆ ಹೋದರು. ಅಂದಿನಿಂದ ಇಂದಿನವರೆಗೂ ವಿಜಯ್ ಪ್ರತಿವರ್ಷ ತಿರುಪತಿಗೆ ಹೋಗಿ ಬಾಲಾಜಿಯ ದರ್ಶನ ಮಾಡುತ್ತಾರೆ. ತಿರುಪತಿಯಿಂದ ಬಾಂಬೆಗೆ ಪ್ರಯಾಣ ಬೆಳೆಸಿದ ವಿಪಿ ಜೀವನ ಮುಂದೆ ಬಹಳ ಕಷ್ಟಕರವಾಗಿತ್ತು. ತಿನ್ನಲು ಏನೂ ಇರದ ಅವರಿಗೆ ರೈಲ್ವೇ ನಿಲ್ದಾಣವೇ ಮಲಗುವ ತಾಣವಾಗಿತ್ತು.

ಇವರ ಕಂಠವನ್ನು ಇಷ್ಟಪಟ್ಟವರು ಜಾಹಿರಾತುಗಳಿಗೆ ಇವರ ಧ್ವನಿ ನೀಡಬಹುದು ಎಂದು ವರ್ಡ್ಸ್ ಅಂಡ್ ವಾಯ್ಸಸ್ ಎಂಬ ಕಂಪನಿಗೆ ಕಳುಹಿಸಲಾಗುತ್ತದೆ. ಆದರೆ ಅಂದು ವಿಜಯ್ ಅವರಿಗೆ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ಅಷ್ಟಾಗಿ ಮಾತನಾಡಲು ಬರುತ್ತಿರಲಿಲ್ಲ. ಬದುಕಲು ಬೇಕಾದ ಸಂದರ್ಭ, ಆದ ಕಾರಣ ಕಷ್ಟ ಪಟ್ಟು ಜಾಹೀರಾತನ್ನು ಮಾಡುತ್ತಾರೆ. ಜಾಹಿರಾತುಗಳಿಗೆ ಹಾಡುವ ಮುಖಾಂತರ ಅವರ ವೃತ್ತಿ ಜೀವನ ಪ್ರಾರಂಭವಾಯಿತು. ಅವರು ಮೊದಲು ಪಡೆದ ಸಂಭಾವನೆ 2,700 ರೂಪಾಯಿ. ನಂತರ ರೇಡಿಯೋಗಳಲ್ಲಿ ಹಾಡಲು ಪ್ರಾರಂಭಿಸಿದರು. ವಾಯ್ಸ್ ಓವರ್ಗಳಲ್ಲಿ ಹೆಸರುವಾಸಿಯಾಗಿದ್ದ ಮಹತಿ ಅವರನ್ನು ವಿಪಿ ಭೇಟಿ ಮಾಡಿದ್ದು ರೇಡಿಯೋ ವಾಣಿ ಸ್ಟುಡಿಯೋದಲ್ಲೇ. ತೆಲುಗು ಸೀರಿಯಲ್‍ಗೆ ಹಾಡಿಗಾಗಿ ವಿಪಿ ಮತ್ತು ಮಹತಿ ಒಟ್ಟಾಗಿ ಹಾಡಿದರು. ಕೆಲದಿನಗಳ ನಂತರ ಅವರಿಬ್ಬರ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಯಿತು. ನಂತರ 2001ರಲ್ಲಿ ತಿರುಪತಿಯಲ್ಲಿ ಅವರು ವಿವಾಹವಾಗುತ್ತಾರೆ. ಕಾವ್ಯ ಪ್ರಕಾಶ್ ಎಂಬ ಮುದ್ದು ಮುಖದ ಚಲುವೆ ಈ ಸುಂದರ ದಂಪತಿಯ ಪುತ್ರಿ.

ಹಿಂದಿ, ಕನ್ನಡ, ತಮಿಳ್, ತೆಲುಗು, ಮಲೆಯಾಳಂ, ಮರಾಠಿ, ಇಂಗ್ಲೀಷ್ ಮತ್ತು ಉರ್ದು ಭಾಷೆಗಳಲ್ಲಿ ವಿಪಿ ಹಾಡಿದ್ದಾರೆ. 1997ರಲ್ಲಿ ಸಂಗೀತ ಲೋಕಕ್ಕೆ ಕಾಲಿಟ್ಟು ಜಾಹಿರಾತು ಮತ್ತು ಹಿನ್ನೆಲೆ ಗಾಯಕರಾಗಿ ಹಾಡುತ್ತಿದ್ದ ವಿಜಯ್ ಪ್ರಕಾಶ್, 2004ರಲ್ಲಿ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆಯ ಸ್ವದೇಸ್ ಎಂಬ ಹಿಂದಿ ಚಿತ್ರದಲ್ಲಿ “ಪಲ್ ಪಲ್ ಹಾಯ್ ಭಾರಿ” ಗೀತೆಗೆ ಮೊದಲ ಬಾರಿಗೆ ಹಾಡಿದರು. 2008ರಲ್ಲಿ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆಯ “ಜೈ ಹೋ” ಹಾಡಿನಲ್ಲಿ ಸಹ ಗಾಯಕರಾಗಿ ಹಾಡುವ ಮೂಲಕ ಪ್ರಪಂಚದಾದ್ಯಂತ ಹೆಸರುವಾಸಿಯಾದರು.

ಅದೇ ವರ್ಷ ಗಾಳಿಪಟ ಚಿತ್ರದ ‘ಕವಿತೆ, ಕವಿತೆ’ ಹಾಡಿನ ಮೂಲಕ ಮೊದಲ ಬಾರಿಗೆ ಕನ್ನಡದ ಚಿತ್ರದಲ್ಲಿ ಹಾಡಿದರು. ಇವರ ಸಂಗೀತ ಸಾಧನೆಗೆ ಹಲವಾರು ಪ್ರಶಸ್ತಿಗಳು ದೊರೆತಿದೆ. 2017ರಲ್ಲಿ ಕಿರಿಕ್ ಪಾರ್ಟಿ ಚಿತ್ರಕ್ಕಾಗಿ ಹಾಡಿದ “ಬೆಳಗೆದ್ದು ಯಾರಾ ಮುಖವ” ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಫಿಲಂ ಫೇರ್ ಪ್ರಶಸ್ತಿಗೆ ವಿಜಯ್ ಪ್ರಕಾಶ್ ಭಾಜನರಾಗಿದ್ದಾರೆ.

ಗಾಳಿಪಟ’ ಚಿತ್ರದ ‘ಕವಿತೆ’ ಹಾಡು ವಿಜಯ್ ಪ್ರಕಾಶ್ ಮೊದಲು ಕನ್ನಡದಲ್ಲಿ ಹಾಡಿದ್ದು.
ಈ ಹಾಡು ಖ್ಯಾತವಾಗುತ್ತಿದ್ದಂತೆ ಇಳೆಯರಾಜ ಅವರು ಇವರನ್ನು ಕರೆಸಿ ಒಂದು ಹಾಡನ್ನು ಹಾಡಲು ಅವಕಾಶ ಮಾಡಿಕೊಡುತ್ತಾರೆ. ನಂತರ ತೆಲುಗಿನಲ್ಲಿ ಕೂಡ ಹಾಡಿದ ವಿಜಯ್ ಪ್ರಕಾಶ್ ಅವರು ಇದೀಗ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲ ಭಾಷೆಯಲ್ಲೂ ಬೇಡಿಕೆಯ ಗಾಯಕನಾಗಿ ಚಿತ್ರರಂಗಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ತಿನ್ನಲು ಊಟ ಕೂಡ ಇಲ್ಲದೆ ಜೀವನ ನಡೆಸುತ್ತಿದ್ದ ವಿಜಯ್ ಪ್ರಕಾಶ್ ಅವರು ಇದೀಗ ಲಕ್ಷಾಂತರ ಜನಕ್ಕೆ ಊಟ ಹಾಕುವಷ್ಟು ಹಣವನ್ನು ಗಳಿಸಿದ್ದಾರೆ ಇದೇ ಅಲ್ಲವೇ ಸಾಧನೆ.

ವಿಜಯ ಪ್ರಕಾಶ್ ಅವರು ಹೀಗೆ ಹಿನ್ನಲೆ ಗಾಯಕರಾಗಿ ಜನಮನ್ನಣೆ ಯಶಸ್ಸನ್ನು ಗಳಿಸಿದ್ದಾರೆ. ಅವರು ತಮ್ಮ ಅಭಿರುಚಿಗೆ ತಕ್ಕಂತೆ ಆಧುನಿಕ ಶೈಲಿಯಲ್ಲಿ ಸುಂದರವಾದ ಮನೆಯನ್ನು ಕಟ್ಟಿಸಿದ್ದಾರೆ. ತಮ್ಮ ಕುಟುಂಬದೊಂದಿಗೆ ಸುಂದರ ಜೀವನವನ್ನು ನಡೆಸುತ್ತಿದ್ದಾರೆ. ಜೈ ಹೋ ಗೀತೆಯ ಮೂಲಕ ಮನೆಮಾತಾದ ನಮ್ಮ ಕರುನಾಡ ಮಲ್ಲಿಗೆ ನಗರಿ ಮೈಸೂರಿನ ವಿಜಯ್ ಪ್ರಕಾಶ್ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂಬುದೇ ಎಲ್ಲರ ಆಶಯ.

Leave a Comment

error: Content is protected !!