ಭುವಿಯನ್ನು ಮೂರೇ ತಿಂಗಳಲ್ಲಿ ಮನೆಯಿಂದ ಹೊರಗೆ ಓಡಿಸ್ತೀನಿ. ಶುರುವಾಯಿತು ವರುಧಿನಿ ಹೊಸ ಪ್ಲಾನ್

ಪ್ರೇಕ್ಷಕರ ಬಹು ನಿರೀಕ್ಷಿತ ಹರ್ಷ ಹಾಗೂ ಭುವಿಯ ಮದುವೆ ಕೊನೆಗೂ ನೆರವೇರಿದೆ. ಸಾಕಷ್ಟು ಅಡೆಚಣೆಗಳ ನಡುವೆಯೂ ಹರ್ಷಭುವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಮದುವೆ ನೆರವೇರುತ್ತೋ ಇಲ್ಲವೋ ಎನ್ನುವುದು ಪ್ರೇಕ್ಷಕರ ಆತಂಕವಾಗಿತ್ತು. ಆ ಮಟ್ಟಿಗೆ ಕುತೂಹಲವನ್ನು ಹುಟ್ಟುಹಾಕಿತ್ತು ಕನ್ನಡತಿ ಧಾರಾವಾಹಿ.

ಹೌದು, ಕನ್ನಡ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ಧಾರವಾಹಿ ಎನಿಸಿಕೊಂಡಿರುವುದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ. ಕನ್ನಡತಿಯನ್ನು ನೋಡದೆ ಇರುವ ಪ್ರೇಕ್ಷಕರ ಇಲ್ಲ. ಕನ್ನಡತಿ ಆರಂಭದಿಂದಲೂ ಹಲವಾರು ಟ್ವಿಸ್ಟ್ ಗಳನ್ನ ಕಂಡು ಜನರ ಮೆಚ್ಚಿನ ಧಾರಾವಾಹಿ ಎನಿಸಿದೆ. ಆದರೆ ಇತ್ತೀಚೆಗೆ ಕನ್ನಡತಿಯ ಎಪಿಸೋಡ್ ಗಳಲ್ಲಿ ಹರ್ಷ ಹಾಗೂ ಭುವಿ ಮದುವೆ ವಿಚಾರದಲ್ಲಿ ಪ್ರೇಕ್ಷಕರಿಗೆ ಅವರ ಮದುವೆ ಆಗುತ್ತದೋ ಇಲ್ಲವೋ ಎನ್ನುವ ಆತಂಕ ಮನೆ ಮಾಡಿತ್ತು. ಸಾನಿಯಾ ಹಾಗೂ ವರು ಹರ್ಷ ಮತ್ತು ಭುವಿಯ ಮದುವೆಯನ್ನು ತಪ್ಪಿಸುವುದಕ್ಕೆ ಬಂದಿಲ್ಲೊಂದು ಪ್ಲಾನ್ ಮಾಡುತ್ತಲೇ ಇದ್ದರು. ತಾವು ಮಾಡಿದ ಯಾವುದೇ ಪ್ಲಾನ್ ವರ್ಕ್ ಔಟ್ ಆಗದೇ ಇದ್ದಾಗ, ಕೊನೆಗೆ ವರು ಸಾಯುವ ನಿರ್ಧಾರವನ್ನೇ ಮಾಡಿದ್ದಳು.

ಆದರೆ ಕೊನೆಗೂ ಜಯಗಳಿಸಿದ್ದು ಹರ್ಷ ಹಾಗೂ ಭುವಿಯ ಪ್ರೀತಿ. ಆಸ್ಪತ್ರೆಯಲ್ಲಿಯೂ ಹರ್ಷನ ಬಳಿ ತನ್ನನ ಮದುವೆಯಾಗುವಂತೆ ಮರುದಿನ ಬೇಡಿಕೊಂಡಿದ್ದಳು. ಕೊನೆಗೆ ಆಸ್ಪತ್ರೆಯಲ್ಲಿ ಮದುವೆ ಸೆಟಪ್ ಕೂಡ ಹಾಕಿದ್ದು ಧಾರವಾಹಿ ತಂಡ. ಈ ಸಂದರ್ಭದಲ್ಲಿ ಹರ್ಷ ಭುವಿಯನ್ನು ಮದುವೆಯಾಗುತ್ತಾನೋ ಅಥವಾ ವರುಧಿನಿಯನ್ನೋ ಎನ್ನುವ ಕೌತುಕ ಮೂಡಿತ್ತು. ಇನ್ನು ಆಸ್ಪತ್ರೆಯಲ್ಲೇ ನಡೆಯಲಿರುವ ಮದುವೆಗೆ ಅಮ್ಮಮ್ಮ ವಿರೋಧ ವ್ಯಕ್ತಪಡಿಸಿದ್ದರೂ ಕೊನೆಗೆ ವೈದ್ಯರೂ ಒಪ್ಪಿಗೆ ಕೊಟ್ಟಮೇಲೆ ಅವರೂ ಒಪ್ಪಿಗೆ ಸೂಚಿಸಿದರು. ರಾಮಾಚಾರಿ ಧಾರವಾಹಿಯ ನಾಯಕನಟ ರಾಮಾಚಾರಿ ಬಂದು ಮಂತ್ರ ಹೇಳಿದ್ದು ವಿಶೇಷವಾಗಿತ್ತು. ಕೊನೆಗೂ ಆಸ್ಪತ್ರೆಯಲ್ಲಿ ಹರ್ಷ ಹಾಗೂ ಭೂಮಿ ಒಂದಾಗಿದ್ದಾರೆ. ಮದುವೆಗಾಗಿ ಹಾಕಿದ ದೊಡ್ಡ ಸೆಟ್ಟನಲ್ಲಿ ಸಪ್ತಪದಿಯನ್ನು ತುಳಿದಿದ್ದಾರೆ ಹವಿ ಜೋಡಿ.

ಈ ನಡುವೆ ಅಮ್ಮಮ್ಮ ಅತಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ಸೇರುವಂತಾಗಿದೆ. ಅಮ್ಮಮ್ಮ ಆಸ್ಪತ್ರೆಯಿಂದ ಹಿಂತಿರುಗುತ್ತಾರೋ ಅಥವಾ ಈ ಕ್ಯಾರೆಕ್ಟರ್ ನ ಕೊನೆಗೊಳಿಸುತ್ತಾರೋ ಗೊತ್ತಿಲ್ಲ. ಮತ್ತೆ ಮದುವೆ ಮನೆಗೆ ವರು ಹಿಂತಿರುಗಿದ್ದಾಳೆ. ಸಾನಿಯಾ ಬಳಿ ಹರ್ಷ ಹಾಗೂ ಭೂಮಿಯನ್ನು ಇನ್ನು ಮೂರೇ ತಿಂಗಳಿನಲ್ಲಿ ಬೇರೆ ಮಾಡುವುದಾಗಿ ಶಪಥ ಮಾಡಿದ್ದಾಳೆ. ತನ್ನ ಹೀರೋಗೆ ಭುವಿ ಸೆಟ್ ಆಗುವುದೇ ಇಲ್ಲ, ಅವರಿಬ್ಬರೂ ಹೇಗೆ ಮದುವೆಯಲ್ಲಿ ಎಂಬುದನ್ನು ನಾನು ಪತ್ತೆ ಹಚ್ಚುತ್ತೇನೆ ಎಂದು ಬರುವುದೇ ಹಠ ಹಿಡಿದು ಕುಳಿತಿದ್ದಾಳೆ. ಇನ್ನು ತಾನು ತನ್ನ ಹೀರೋ ಜೊತೆಗೆ ಮದುವೆಯಾಗುತ್ತೇನೆ ಅಂತ ಕನಸು ಕಾಣುತ್ತಿರುವವ ವರುಧಿನಿ ಇದಕ್ಕಾಗಿ ಯಾವೆಲ್ಲ ಪ್ಲಾನ್ ಮಾಡುತ್ತಾಳೆ, ವರುಧಿನಿಯ ಈ ಕೆಟ್ಟ ಆಲೋಚನೆಗೆ ಸಾನಿಯಾ ಹೇಗೆ ಕೈಜೋಡಿಸುತ್ತಾಳೆ,

ಇವರಿಬ್ಬರ ನಡುವೆ ಸಿಲುಕಿಕೊಂಡ ಭುವಿ ಹರ್ಷನೊಂದಿಗೆ ಹೇಗೆ ಸಂಸಾರ ನಡೆಸುತ್ತಾಳೆ ಎನ್ನುವುದನ್ನು ಕಾದು ನೋಡಬೇಕು. ಕನಡತಿ ಧಾರಾವಾಹಿ ಹೆಸರಿಗೆ ತಕ್ಕಹಾಗೆ ಕನ್ನಡವನ್ನ ಎತ್ತಿ ಹಿಡಿಯುವ ಪ್ರಯತ್ನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹರ್ಷ ಹಾಗೂ ಭುವಿಯ ಮದುವೆಯನ್ನು ಕನ್ನಡದಲ್ಲಿಯೇ ನೆರವೇರಿಸಲಾಗಿದೆ. ಪ್ರತಿ ಶಾಸ್ತ್ರ ಸಂಪ್ರದಾಯಕ್ಕೂ ಕನ್ನಡದಲ್ಲಿ ಅರ್ಥವನ್ನು ಹೇಳುತ್ತಾ ಮದುವೆ ಮಾಡಿದ್ದು ತುಂಬಾನೇ ವಿಶೇಷವಾಗಿತ್ತು.

Leave A Reply

Your email address will not be published.

error: Content is protected !!