ಕರ್ಬೂಜ ಹಣ್ಣಿನ ಸೇವನೆಯಿಂದ ಶರೀರಕ್ಕೆ ಎಷ್ಟೊಂದು ಲಾಭಗಳಿವೆ ಗೊತ್ತೇ

ಕರ್ಬೂಜ ಹಣ್ಣು ದೇಹಕ್ಕೆ ತಂಪು ಕೊಡುವ ಹಣ್ಣು. ಬೆಸಿಗೆ ಕಾಲದಲ್ಲಿಯೇ ಬೆಳೆಯುವ ಈ ಹಣ್ಣು ಹಲವು ರೀತಿಯ ಪ್ರಯೋಜನಗಳನ್ನು ಹೊಂದಿದೆ. ಸಮಯಕ್ಕೆ ಸರಿಯಾಗಿ ಆಹಾರ ಪದಾರ್ಥಗಳ ಸೇವನೆ ಮಾಡದೇ ಇದ್ದರೆ ಆಸಿಡಿಟಿಯಿಂದ ಪಿತ್ತ ಹೆಚ್ಚಾಗುತ್ತದೆ ಇದರ ನಿವಾರಣೆಗೆ ಈ ಹಣ್ಣಿನ ಸೇವನೆ ಉತ್ತಮ.

ಶೀತ ಕಾಲದಲ್ಲಿ ಈ ಹಣ್ಣಿನ ಸೇವನೆ ಮಾಡಿದರೆ ಅಲರ್ಜಿ, ಕಫ, ಅಸ್ತಮ,ನೆಗಡಿ ರೋಗಗಳು ಉಲ್ಬಣವಾಗುವ ಸಾಧ್ಯತೆಗಳಿವೆ ಹಾಗಾಗಿ ಋತುಗಳಿಗೆ ಅನುಸಾರವಾಗಿ ಹೇರಳವಾಗಿ ದೊರೆಯುವ ಹಣ್ಣುಗಳ ಸೇವನೆ ಮಾಡಿದ್ದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಪಿತ್ತದಿಂದ ಬರವಂತಹ ಚರ್ಮವ್ಯಾಧಿ, ಮುಖದ ಮೇಲೆ ನರಿಗೆಗಳು, ಸನ್ ಬರ್ನ್, ತಲೆ ಕೂದಲು ಉದುರುವುದು, ಹೊಟ್ಟೆಯಲ್ಲಿ ಉರಿ, ಕಣ್ಣಲ್ಲಿ ಉರಿ, ಮಲಬದ್ಧತೆ ಕಾಯಿಲೆಗಳನ್ನು ಹತೋಟಿ ಗೆ ತರಲು ಕರ್ಬೂಜ ಹಣ್ಣನ್ನು ಸರಿಯಾದ ಪ್ರಮಾಣದಲ್ಲಿ ತಿನ್ನುವುದರಿಂದ ಪರಿಹಾರ ಸಿಗುತ್ತದೆ.

ಕರ್ಬೂಜ ಹಣ್ಣನ್ನು ಯಾವುದೇ ವಯಸ್ಸಿನ ಮೀತಿಯಿಲ್ಲದೆ ಸೇವಿಸಬಹುದು ಆದರೆ ಎತ್ತೆಚ್ಚವಾಗಿ ಅಸ್ತಮ ಅಲರ್ಜಿ, ಕೆಮ್ಮು ಇರುವವರು ಸ್ವಲ್ಪ ಹಿತಮಿತಿವಾಗಿ ಈ ಹಣ್ಣನ್ನು ಬಳಸಬಹುದು. ಅತಿಯಾಗಿ ಸೇವಿದರೆ ಕಫ ಅಧಿಕವಾಗುವ ಸಾಧ್ಯತೆ ಇರುತ್ತದೆ.

ಕರ್ಬೂಜ ಹಣ್ಣಿನ ಬೀಜಗಳಿಂದಲೂ ಇದೆ ಹಲವು ಪ್ರಯೋಜನ: ಕರ್ಬೂಜ ಹಣ್ಣಿನಲ್ಲಿರುವ ಬೀಜಗಳನ್ನು ಬೇಡವೆಂದು ಬಿಸಾಡುತ್ತೇವೆ. ಆದರೆ ಈ ಬೀಜಗಳು ದೇಹಕ್ಕೆ ಉಪಯುಕ್ತಕಾರಿಯಾಗಿವೆ. ಕರ್ಬೂಜ ಹಣ್ಣಿನ ಬೀಜವನ್ನ ತೆಗೆದು ಒಣಗಿಸಿ ಆದರ ಮೇಲಿನ ಸಿಪ್ಪೆ ತೆಗೆದು ಬಳಸುವುದರಿಂದ ಉತ್ತಮ ಆರೋಗ್ಯ ಕರ ಅಂಶಗಳನ್ನ ಪಡೆಯಬಹುದು. ಕರ್ಬೂಜ ಹಣ್ಣಿನ ಬೀಜದಿಂದ ಅಸ್ಥಿಧಾತುವಿನ ಪೋಷಣೆಯಾಗುತ್ತದೆ, ಹೇರಳವಾಗಿ ಕ್ಯಾಲ್ಸಿಯಂ ಪಡೆಯಬಹುದು. ಅಲ್ಲದೆ ನಮ್ಮ ಶರೀರದ ಧೃಡತೆಗೆ ಕರ್ಬೂಜ ಹಣ್ಣು ಸಹಕಾರಿಯಾಗಬಲ್ಲದು.

Leave a Comment

error: Content is protected !!