ಗಲ್ಲಾಪೆಟ್ಟಿಗೆಯಲ್ಲಿ KGF-2 ಗಳಿಸಿದ್ದು ಎಷ್ಟು ಕೋಟಿ ಗೊತ್ತಾ? ಇದು ಕನ್ನಡಗರ ಗತ್ತು

ರಾಕಿಂಗ್ ಸ್ಟಾರ್ ಎಂದೇ ಪ್ರಖ್ಯಾತಿ ಪಡೆದಿರುವ ಯಶ್ ಅವರು ಸ್ಯಾಂಡಲ್ ವುಡ್ನಲ್ಲಿ ಬಹು ಪ್ರಖ್ಯಾತಿ ಹಾಗೂ ಅತ್ಯಂತ ಬೇಡಿಕೆಯ ನಟ ಎಂದರೆ ತಪ್ಪಾಗಲಾರದು ಕೆಜಿಎಫ್ 1 ಸಿನಿಮಾ ಬಾಕ್ಸ್ ಆಫೀಸ್ ಅಲ್ಲಿ ಧೂಳೆಬ್ಬಿಸಿದ ಸಿನಿಮಾ ನಂತರ ಕೆಜಿಎಫ್ ಮುಂದುವರಿದ ಎರಡನೇ ಭಾಗವನ್ನು ಜನರು ನೋಡಲು ಬಹು ಕಾತುರತೆ ಇಂದ ಕಾಯುತಲಿದ್ದರು ಕೊನೆಗೂ ಅಭಿಮಾನಿಗಳ ನೀರಿಕ್ಷೆಯಂತೆ ಏಪ್ರಿಲ್ 14 ರಂದು ರಾಜ್ಯ ದೇಶ ಹಾಗೂ ವಿದೇಶಗಳಲ್ಲೂ ಬಿಡುಗಡೆ ಆಗಿದ್ದು ಕನ್ನಡ ಹಿಂದಿ ತಮಿಳು ಹಾಗೂ ತೆಲುಗು ರಂಗದಲ್ಲಿ ಧೂಳೆಬ್ಬಿಸಿದ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾದ ಸಿನಿಮವಾಗಿದೆ.

ಪ್ರಶಾಂತ್ ನೀಲ್ ಎಂಬ ಗಾರುಡಿಗನ ಕೈಚಳಕದಲ್ಲಿ ಮೂಡಿ ಬಂದ ಸಿನಿಮಾ ಆಗಿದ್ದು ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದೆ ನಿಜ ಕಾಲಿವುಡ್ ಟಾಲಿವುಡ್ ಹಾಗೂ ಬಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆದು ನಿಂತಿರುವ ಸಿನಿಮಾ ಆಗಿದ್ದು ಒಂದು ದಿನದ ಕಲೆಕ್ಷನ್ ಸುಮಾರು 100 ಕೋಟಿಯಷ್ಟು ಇನ್ನೂ ಹದಿನೈದು ದಿನದಲ್ಲಿ ದೇಶದಾದ್ಯಂತ ಸರಾಸರಿ ಸುಮಾರು 1006 ಕೋಟಿಯಷ್ಟು ರೊಕ್ಕವನ್ನು ತನ್ನ ಜೋಳಿಗೆಗೆ ಹಾಕಿಕೊಂಡ ಸಿನಿಮಾ ಇನ್ನೂ ಕನ್ನಡ ಸಿನಿ ರಂಗದಲ್ಲಿ ಕೂಡ ಇಂಥ ಒಂದು ಸಿನಿಮಾ ಮಾಡಬಹುದು ಎಂದು ಪ್ರಶಾಂತ್ ನೀಲ್ ಅವರು ನಿರೂಪಿಸಿದ್ದಾರೆ ಇದು ಬೇರೆ ರಂಗದವರು ಕೂಡ ಹುಬ್ಬೇರಿಸುವಂತೆ ಮಾಡಿದೆ

ಯಶ್ ಅವರ ಈ ಯಶಸ್ಸಿನ ನಂತರ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ . ಕೆಜಿಎಫ್ ಯಶಸ್ಸಿನ ನಂತರ ಇಂಡಿಯಾ ಪಾನ್ ಮಸಾಲ ಅವರು ಯಶ್ ಅವರಿಗೆ ನೂರಾರು ಕೋಟಿಯ ಜಾಹೀರಾತು ಆಫರ್ ನೀಡಿದ್ದಾರೆ ಆದರೆ ಯಶ್ ಅವರು ತಮ್ಮ ಅಭಿಮಾನಿಗಳ ಪ್ರೀತಿ ವಿಶ್ವಾಸದ ಬಗ್ಗೆ ಯೋಚಿಸಿ ಅಷ್ಟು ದೊಡ್ಡ ಆಫರ್ ಅನ್ನು ನಿರಾಕರಿಸಿದ್ದಾರೆ ಕಾರಣ ಏನೆಂದರೆ ತಮ್ಮ ಅಭಿಮಾನಿಗಳ ಹಿತವೇ ಮುಖ್ಯ ಈ ಜಾಹೀರಾತಿನಿಂದ ಜನರಿಗೆ ಹಾನಿ ಸಂಭವಿಸುವ ಸಾಧ್ಯತೆ ಜಾಸ್ತಿ ಹಾಗಾಗಿ ನಂಗೆ ಇದರಲ್ಲಿ ನಟಿಸಲು ಒಪ್ಪಿಗೆ ಇಲ್ಲ ಎಂದು ನೇರವಾಗಿ ಹೇಳಿಕೆ ನೀಡಿದ್ದು ಇದರಿಂದ ಯಶ್ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ

ಬಾಲಿವುಡ್ ಅಲ್ಲಿ ನಟ ಶಾರುಕ್ ಖಾನ್ ನಟ ಅಜಯ್ ದೇವಗನ್ ಮತ್ತು ನಟ ಅಕ್ಷಯ ಕುಮಾರ್ ಅವರಿಗೆ ನೇರವಾಗಿ ನೀವು ಕೂಡ ಯಶ್ ಅವರನ್ನು ನೋಡಿ ಕಲಿಯಿರಿ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ ಇದು ಸುಮಾರು 50 ಕೋಟಿಯಷ್ಟು ಪ್ರೊಜೆಕ್ಟ್ ಆಗಿದ್ದು ಯಾವುದೇ ವ್ಯಕ್ತಿ ಆದರೂ ಕೂಡ ಕೋಟಿ ಸಿಗುತ್ತೆ ಅಂದರೆ ಬೇಡ ಅನ್ನುವ ಜಾಯಮಾನ ಇಲ್ಲ ಹಾಗಾಗಿ ಯಶ್ ಅವರ ನಿರ್ಧಾರಕ್ಕೆ ಒಂದು ಮೆಚ್ಚುಗೆ . ಇನ್ನು ಹೊಂಬಾಳೆ ಫಿಲ್ಮ್ಸ್ ಅವರು ಕೆಜಿಎಫ್ ಸಿನಿಮಾದ ಪೂರ್ತಿ ಹಣ ಗಳಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಅನ್ನು ಸದ್ಯದಲ್ಲೇ ಲೀಕ್ ಮಾಡಲಿದ್ದಾರೆ…

Leave a Comment

error: Content is protected !!