ಕಾಜೋಲ್ ಮದುವೆ ಆದಾಗ ತುಂಬಾ ನೊಂದಿದ್ದೆ, ಬಾಲಿವುಡ್ ನಟಿ ಮೇಲೆ ಕಿಚ್ಚನ ಪ್ರೀತಿ

ಸುದೀಪ ಅಥವಾ ಕಿಚ್ಚ ಸುದೀಪ್ 2 ಸೆಪ್ಟೆಂಬರ್ 1973ರಲ್ಲಿ ಜನಿಸಿದರು. ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ, ಕಥೆ, ಚಿತ್ರಕಥೆಗಾರ, ವಿತರಕ, ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ. ಇವರು ಮುಖ್ಯವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಚಿತ್ರಗಳಾದ ಸ್ಪರ್ಶ, ಹುಚ್ಚಾ, ನಂದಿ, ಕಿಚ್ಚಾ, ಸ್ವಾತಿ ಮುತ್ತು, ಮೈ ಆಟೋಗ್ರಾಫ್, ನಂ 73 ಶಾಂತಿ ನಿವಾಸ, ಮುಸ್ಸಂಜೆ ಮಾತು, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ, ತೆಲುಗು-ತಮಿಳು ದ್ವಿಭಾಷಾ ಈಗ ಮತ್ತು ಹಿಂದಿ ಚಲನಚಿತ್ರ ದಬಾಂಗ್ 3. ಹುಚ್ಚಾ, ನಂದಿ ಮತ್ತು ಸ್ವಾತಿ ಮುತ್ತು ಚಿತ್ರಗಳಿಗಾಗಿ ಸತತ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು. 2013 ರಿಂದ, ಅವರು ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ನಿರೂಪಕರಾಗಿದ್ದರೆ. ಅಭಿನವ ಚಕ್ರವರ್ತಿ ಎಂದೇ ಖ್ಯಾತರಾಗಿರುವ ಸುದೀಪ್ ಅವರು ಬಾಲಿವುಡ್ ನಟಿ ಕಾಜೋಲ್ ಜೊತೆ ನಟಿಸುವ ಆಸೆ ಬಗ್ಗೆ ಹೇಳಿಕೊಂಡಿದ್ದಾರೆ. ಆ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಕಿಚ್ಚ ಸುದೀಪ್ ಒಂದೆಲ್ಲಾ ಒಂದು ವಿಚಾರವಾಗಿ ಸದ್ಯ ಸುದ್ದಿಯಲ್ಲಿದ್ದಾರೆ. ಅವರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಗೆ ಸಜ್ಜಾಗಿದೆ. ಅದರ ಲಿರಿಕಲ್ ಹಾಡು ಧೂಳೆಬ್ಬಿಸಿದೆ. ಕಿಚ್ಚ ಸುದೀಪ್ ಸ್ಯಾಂಡಲ್‌ವುಡ್‌ನ ದೊಡ್ಡ ತಾರೆಗಳಲ್ಲಿ ಒಬ್ಬರು. ಜಾಕ್ವೆಲಿನ್ ಫರ್ನಾಂಡೀಸ್ ಜೊತೆಗೆ ವಿಕ್ರಾಂತ್ ರೋಣಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಹಿಂದಿಯಲ್ಲಿ ಸಹ ಈ ಸಿನಿಮಾ ಬಿಡುಗಡೆಯಾಗಲಿದ್ದು, ಸಲ್ಮಾನ್ ಖಾನ್ ಉತ್ತರ ಭಾರತದಲ್ಲಿ ಆ ಚಿತ್ರದ ಜವಾಬ್ದಾರಿಯನ್ನು ಪಡೆದುಕೊಂಡಿದ್ದಾರೆ.

ಇದೀಗ ಕಿಚ್ಚ ಸುದೀಪ್ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಬಾಲಿವುಡ್​ ತಾರೆ ಕಾಜೋಲ್ ವಿಚಾರವಾಗಿ. ಕಿಚ್ಚ ಸುದೀಪ್​ಗೆ ಕಾಜೋಲ್ ಜೊತೆ ಕೆಲಸ ಮಾಡುವ ಆಸೆಯಂತೆ. ಕಾಜೋಲ್ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು. ಅವರು ಸಿನಿರಂಗದಲ್ಲಿ ಕೆಲಸ ಮಾಡಿದ ಅಷ್ಟೂ ವರ್ಷಗಳಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆಕೆಗೆ ಅಪಾರ ನಿಷ್ಠಾವಂತ ಅಭಿಮಾನಿಗಳಿದ್ದಾರೆ ಎಂದರೆ ತಪ್ಪಲ್ಲ.

ಇದಲ್ಲದೆ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಎಂದರೆ ಕಾಜಾಲ್ ಎನ್ನುವ ಮಟ್ಟಿಗೆ ಫೇಮಸ್ ಆಗಿರುವ ಈ ನಟಿ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ಅವರು ಯಾವಾಗಲೂ ತಮ್ಮ ಜೀವನದ ಬಗ್ಗೆ ವಿಚಾರಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಸುದ್ದಿ ಏನೆಂದರೆ ಕಾಜೋಲ್ ಪತಿ ಅಜಯ್ ದೇವಗನ್ ಜೊತೆ ಟ್ವೀಟ್ ವಾರ್ ಆದರು ಸಹ ಕಿಚ್ಚ, ಕಾಜೋಲ್ ಜೊತೆ ಆಕ್ಟ್ ಮಾಡುವ ಆಸೆಯನ್ನು ಬಿಟ್ಟಿಲ್ಲವಂತೆ.

ಕಿಚ್ಚ ಸುದೀಪ್ ಅವರು ರಾಷ್ಟ್ರವ್ಯಾಪಿ ಭಾಷಾ ಚರ್ಚೆಯನ್ನು ಪ್ರಾರಂಭಿಸಿದ್ದರು. ಅದು ಇಂಟರ್ನೆಟ್ ಬಿರುಗಾಳಿ ಸೃಷ್ಟಿಸಿತ್ತು. ಭಾಷಾ ಚರ್ಚೆಯ ನಂತರ ಅದು ಶೀಘ್ರದಲ್ಲೇ ಹಿಂದಿ ಮತ್ತು ದಕ್ಷಿಣ ಚಲನಚಿತ್ರಗಳತ್ತ ತಿರುಗಿತ್ತು. ಆ ಚರ್ಚೆಗೆ ಕಿಚ್ಚ ಸುದೀಪ್ ಅವರಿಗೆ ಅಜಯ್ ದೇವ​ಗನ್ ಟ್ವೀಟ್​ ಮಾಡಿದ್ದರು. ಒಂದು ರೀತಿಯ ಟ್ವಿಟ್ಟರ್ ವಾರ್ ನಡೆದಿತ್ತು. ನಂತರ, ಇಬ್ಬರೂ ಸಮಾಧಾನ ಮಾಡಿಕೊಂಡು ಇಡೀ ವಿವಾದವನ್ನು ತಣ್ಣ ಮಾಡಲಾಗಿತ್ತು.

ಇತ್ತೀಚೆಗೆ ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಕಿಚ್ಚ ಸುದೀಪ್, ಅಜಯ್ ದೇವಗನ್ ಅವರ ಪತ್ನಿ ಕಾಜೋಲ್ ಅವರೊಂದಿಗೆ ಕೆಲಸ ಮಾಡುವ ತಮ್ಮ ಕನಸಿನ ಬಗ್ಗೆ ಮಾತನಾಡಿದ್ದಾರೆ. ನನ್ನ ಮತ್ತು ಅಜಯ್ ಅವರ ನಡುವೆ ಟ್ವೀಟ್​ ವಾರ್ ನಡೆದಿರಬಹುದು. ಆದರೆ, ನಾನು ಕಾಜೋಲ್ ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಅವರ ಸಂದರ್ಶನದಲ್ಲಿ ಅವರು ಮಾಡಿದ್ದ, ಟ್ವೀಟ್‌ಗಳು ವೈರಲ್​ ಆದ ಮೇಲೆ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ನಡೆಸಿದ ಚಾಟ್ ಅನ್ನು ನೆನಪಿಸಿಕೊಂಡಿದ್ದಾರೆ.

ಅಜಯ್ ದೇವಗನ್‌ಗೆ ಪ್ರತಿಕ್ರಿಯಿಸಿದ ಸುದೀಪ್ ಘನತೆಯನ್ನು ಕಾಪಾಡಿಕೊಂಡ ರೀತಿಯನ್ನು ನಿರ್ದೇಶಕರು ಶ್ಲಾಘಿಸಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೇ ಸುದೀಪ್, ವರ್ಮಾ ಅವರಿಗೆ ಇಲ್ಲ ಸರ್, ನಾನು ಕಾಜೋಲ್ ಮೇಡಮ್ ಅವರೊಂದಿಗೆ ಕೆಲಸ ಮಾಡುವ ಈ ದೊಡ್ಡ ಕನಸನ್ನು ಹೊಂದಿದ್ದೇನೆ. ಅದು ಎಂದಾದರೂ ಆಗುತ್ತದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಎನ್ನುವ ಮೂಲಕ ಕಾಜೋಲ್ ಜೊತೆ ಕೆಲಸ ಮಾಡುವ ನನ್ನ ಆಸೆಯನ್ನು ನಾನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದಿದ್ದರಂತೆ.

Leave a Comment

error: Content is protected !!