ಇವೆರಡನ್ನೂ ತಿಂದ್ರೆ ಮೂತ್ರಕೋಶದಲ್ಲಿ ಕಲ್ಲಗೋದಿಲ್ಲ, ಇದ್ರು ಕರಗುತ್ತೆ

ಇತ್ತೀಚಿನ ದಿನದಲ್ಲಿ ಮೂತ್ರಕೋಶಗಳಲ್ಲಿ ಕಲ್ಲಾಗುವ ಸಮಸ್ಯೆ ಹೆಚ್ಚಾಗಿದ್ದು, ಇದಕ್ಕೆ ಶಸ್ತ್ರ ಚಿಕಿತ್ಸೆಯ ಮೂಲಕ ಪರಿಹಾರ ಕಂಡು ಕೊಳ್ಳುತ್ತಾರೆ, ಇನ್ನು ಕೆಲವರು ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಪರಿಹಾರ ಕಾಣಬೇಕು ಅನ್ನೋ ಅಸೆ ಇರತ್ತೆ. ನಾವುಗಳು ಸೇವನೆ ಮಾಡುವಂತ ಆಹಾರ ಗಾಳಿ ನೀರು, ಅಷ್ಟೇ ಅಲ್ದೆ ನಮ್ಮ ಸುತ್ತಮುತ್ತಲಿನ ವಾತಾವರಣ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.

ಇವಿಷ್ಯಕ್ಕೇ ಬರೋಣ ಮೂತ್ರಕೋಶದಲ್ಲಿ ಉಪ್ಪಿನ ಗಡ್ಡೆಗಳು ಅದ್ರೆ ಮೂತ್ರ ಕೋಶದಲ್ಲಿ ಕಲ್ಲಾಗುವಂತದ್ದು, ಇದನ್ನು ಆಂಗ್ಲ ಭಾಷೆಯಲ್ಲಿ (ಕಿಡ್ನಿ ಸ್ಟೋನ್) ಎಂಬುದಾಗಿ ಕರೆಯಲಾಗುತ್ತದೆ. ಇದನ್ನು ಕೆಲವು ಆಹಾರ ಪದ್ಧತಿಗಳಿಂದ ಕೂಡ ನಿವಾರಣೆ ಮಾಡಿಕೊಳ್ಳಬಹದು, ಅದು ಹೇಗೆ ಅಂದ್ರೆ ಊಟದ ಜೊತೆಗೆ ಈರುಳ್ಳಿ ಹಾಗು ಹುರುಳಿ ಹೆಚ್ಚಾಗಿ ಬಳಸಬೇಕು ಅದನ್ನು ಸೇವಿಸಬೇಕು.

ಹೌದು ಈರುಳ್ಳಿ ಪಲ್ಯ ಹಾಗು ಹುರುಳಿ ಕಟ್ಟಿನ ಸಾರು ಮಾಡಿ ಸೇವಿಸುವುದರಿಂದ ಮೂತ್ರಕೋಶದಲ್ಲಿ ಕಲ್ಲುಗಳು ಆಗುವುದಿಲ್ಲ, ಮೂತ್ರ ಕೋಶದಲ್ಲಿ ಬೆಳವಣಿಗೆಯಾಗುವಂತ ಕಲ್ಲುಗಳನ್ನು ನಿವಾರಿಸುತ್ತದೆ. ಇನ್ನು ಆರೋಗ್ಯದ ದೃಷ್ಟಿಯಿಂದ ಇದನ್ನು ವಾರದಲ್ಲಿ ೩- ೪ ಬಾರಿಯಾದ್ರು ಸೇವಿಸೋದು ಉತ್ತಮ.

ಇನ್ನು ಕಿಡ್ನಿ ಸ್ಟೋನ್ ನಿವಾರಣೆಗೆ ಸಾವಿರಾರು ರೂಪಾಯಿ ಆಸ್ಪತ್ರೆಗೆ ಖರ್ಚು ಮಾಡುವ ಬದಲು ಈ ವಿಧಾನಗಳನ್ನು ಅನುಸರಿಸೋದು ಉತ್ತಮ ಅಲ್ಲವೇ? ಪ್ರತಿದಿನ ಹೆಚ್ಚು ಅಂದರೆ 4 ರಿಂದ 5 ಲೀಟರ್ ನೀರು ಕುಡಿಯಬೇಕು ಹಾಗು ಹುರುಳಿಕಾಳನ್ನು ನೆನಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಹಿಡಿಯಷ್ಟು ಪ್ರತಿದಿನ ತಿನ್ನುತ್ತಾ ಬಂದ್ರೆ ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಸಹಕಾರಿಯಾಗುತ್ತದೆ. ಇನ್ನು ಸರ್ವ ರೋಗಗಳನ್ನು ನಿವಾರಿಸುವಂತ ಗುಣ ಎಳನೀರು ಹೊಂದಿದೆ, ಪ್ರತಿದಿನ ಎಳನೀರು ಕುಡಿಯೋದ್ರಿಂದ ದೇಹಕ್ಕೆ ಎನರ್ಜಿ ದೊರೆಯುವ ಜೊತೆಗೆ ಉತ್ತಮ ಅರೋಗ್ಯ ವೃದ್ಧಿಯಾಗುತ್ತದೆ.

Leave a Comment

error: Content is protected !!