ಪಿತ್ತನಾಶಕ ಕೋಕಮ್ ಹಣ್ಣು ಹತ್ತಾರು ಲಾಭಗಳನ್ನ ಹೊಂದಿದೆ

ಪುನರ್ಪುಳಿ ಅಥವಾ ಕೋಕಮ್ ಎಂಬುದಾಗಿ ಕರೆಯಲ್ಪಡುವ ಈ ಹಣ್ಣನ್ನು ಹತ್ತಾರು ರೋಗಗಳಿಗೆ ಔಷಧಿಯಾಗಿ ಹಾಗೂ ಅಡುಗೆ ಖಾದ್ಯಗಳಲ್ಲಿ ಬಳಸುತ್ತಾರೆ, ಇನ್ನು ಈ ಕೋಕಮ್ ಎಷ್ಟೆಲ್ಲ ಪ್ರಯೋಜನಕಾರಿ ಅನ್ನೋದನ್ನ ಈ ಮೂಲಕ ತಿಳಿಯೋಣ.

ಕೋಕಮ್ ಗಿಡ ದೊಡ್ಡ ಮರವಾಗಿ ಬೆಳೆಯುತ್ತದೆ ದಟ್ಟ ಹಸುರು ಬಣ್ಣದ ಎಲೆಗಳಿಂದ ಕೊಡಿರುವಂತ ಈ ಮರ ಕೆಂಪು ಮಿಶ್ರೀತವಾಗಿರುತ್ತದೆ, ಇನ್ನು ಹಣ್ಣು ಗದ ನೇರಳೆ ಅಥವಾ ಕಪ್ಪು ಬಣ್ಣದಾಗಿದ್ದು, ಅಂಟು ಅಂಟಾಗಿರುತ್ತದೆ ಇದನ್ನು ಅರ್ಧ ಕತ್ತರಿಸಿ ಬೀಜ ತಗೆದು ಸಿಪ್ಪೆಯನ್ನು ಒಣಗಿಸುತ್ತಾರೆಮ್ ಹೀಗೆ ಒಣಗಿದ ಹಣ್ಣು ಅಡುಗೆಮನೆಗೆ ಪ್ರಶಸ್ತ, ಸಾರು ಕಡಿ ಕಷಾಯ ಮಾಡಲು ಪೂರಕವಾಗುತ್ತದೆ.

ಈ ಕೋಕಮ್ ಪುನರ್ಪುಳಿ ಔಷಧಿಯಾಗಿ ಹೇಗೆ ಕೆಲಸ ಮಾಡುತ್ತದೆ ಅನ್ನೋದನ್ನ ತಿಳಿಯುವುದಾದರೆ, ಮೊದಲನೆಯದಾಗಿ ಈ ಹಣ್ಣು ತಂಪು ಗುಣವನ್ನು ಹೊಂದಿದೆ ಈ ಹಣ್ಣಿನ ಸಿಪ್ಪೆಯನ್ನು ತಿಕ್ಕಿದರೆ ಗುಳ್ಳೆ ಕಜ್ಜಿ ಗುಣವಾಗುತ್ತದೆ. ಹಣ್ಣಿನ ರಸವನ್ನು ಸುಟ್ಟ ಗಾಯ ಗಾಯಗೊಂಡ ಚರ್ಮ ಮುಂತಾದವುಗಳ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಕೋಕಮ್ ಬೀಜದಲ್ಲಿ ಶೇ. ೨೩ ರಿಂದ ೨೬ ರಸ್ತು ತೈಲಾಂಶವಿದೆ ಇದನ್ನು ಔಷಧಿಗಳಲ್ಲಿ ಬಳಸುತ್ತಾರೆ.

ಕೋಕಮ್ ಸಿಪ್ಪೆಯ ಕಷಾಯವನ್ನು ಕುಡಿದರೆ ಆಹಾರ ಚನ್ನಾಗಿ ಜೀರ್ಣವಾಗುತ್ತದೆ, ಕೋಕಮ್ ಪಾನಕವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡೆ ಹೆಚ್ಚಾಗಿ ಬಳಸುತ್ತಾರೆ, ಈ ಪಾನಕವನ್ನು ಹೇಗೆ ಮಾಡೋದು ಅನ್ನೋದನ್ನ ತಿಳಿಯೋಣ. ಮೊದಲು ಕೋಕಮ್ ಹಣ್ಣುಗಳ ಬೀಜವನ್ನು ತಗೆದು ಸಣ್ಣಗೆ ಹಚ್ಚಿ ಅಷ್ಟೇ ಪ್ರಮಾಣದ ಸಕ್ಕರೆ ಬೆರಸಿ,ಬಳಿಕ ಇದನ್ನು ಅಗಲವಾದ ಪಾತ್ರೆಗೆ ಹಾಕಿ, ಶುಚಿಯಾದ ತೆಳು ಬಟ್ಟೆಯಿಂದ ಮುಚ್ಚಿ. ಸುಮಾರು ಒಂದು ವಾರದವರೆಗೆ ದಿಡೀರ್ ಪಾನಕ ತಯಾರಿಸಬಹದು.

ಹೇಗೆ ತಯಾರಿಸೋದು ಅನ್ನೋದನ್ನ ನೋಡುವುದಾದರೆ ಸುಮಾರು ಒಂದು ಗ್ಲಾಸ್ ನೀರಿಗೆ ಒಂದು ಚಮಚದಷ್ಟು ಕೋಕಮ್ ಚೂರುಗಳನ್ನು ಹಾಕಿ ಕಲಕಬೇಕು. ಆ ನೀರನ್ನು ಸೋಸಿ ಸಾಕಷ್ಟು ಸಕ್ಕರೆ, ರುಚಿಗಷ್ಟು ಏಲಕ್ಕಿ ಪುಡಿ ಬೆರೆಸಿದರೆ ಪಾನಕ ರೆಡಿಯಾಗುತ್ತದೆ. ಈ ಪಾನಕ ದೇಹಕ್ಕೆ ತಂಪು ನೀಡುತ್ತದೆ.

Leave A Reply

Your email address will not be published.

error: Content is protected !!