Leelavathi: ನಮ್ಮ ಅತ್ತೆಯವರನ್ನು ನೋಡಿ ಜೀವನದಲ್ಲಿ ತುಂಬಾನೇ ಕಲಿತಿದ್ದೇನೆ, ಅತ್ತೆಯನ್ನು ನೆನೆದು ಕಣ್ಣೀರು ಹಾಕಿದ ಸೊಸೆ

Leelavathi ಸ್ನೇಹಿತರೆ 1940ರ ಸಮಯದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ತಮ್ಮ ಅಮೋಘ ನಟನೆ ಹಾಗೂ ಮುದ್ದಾದ ಸೌಂದರ್ಯದ ಮೂಲಕ ನೂರಾರು ಪಾತ್ರಗಳಿಗೆ ಬಣ್ಣ ಹಚ್ಚುತ್ತಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಉತ್ತುಂಗದ ಶಿಖರದಲ್ಲಿ ಮೆರೆದಂತಹ ಲೀಲಾವತಿ (Leelavathi) ಅಮ್ಮನವರು ಕಳೆದ ಕೆಲವು ದಿನಗಳ ಹಿಂದೆ ನಮ್ಮೆಲ್ಲರಿಂದ ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ.

ಹೌದು ಗೆಳೆಯರೇ 86 ವರ್ಷದ ಲೀಲಾವತಿ (Leelavathi) ಅಮ್ಮನವರು ಹಲವು ತಿಂಗಳಿಂದ ವಯೋಸಹಜ ಕಾಯಿ+ಲೆಯಿಂದ ಬಳಲುತ್ತಿದ್ದರು. ಅವರನ್ನು ಉಳಿಸಿಕೊಳ್ಳಲು ಮಗ ವಿನೋದ್ ರಾಜ್ ಅವರು ನಾನಾ ರೀತಿಯ ಪ್ರಯತ್ನಗಳನ್ನು ಮಾಡಿದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಲೀಲಾವತಿಯಮ್ಮನವರು ಕೊನೆ ಉಸಿರೆಳೆದಿದ್ದಾರೆ. ತಾಯಿಗಾಗಿ ತನ್ನ ಸರ್ವಸ್ವವನೆಲ್ಲ ತ್ಯಾಗ ಮಾಡಿದಂತಹ ವಿನೋದ್ ರಾಜ್(Vinod Raj) ಅವರು ತಮ್ಮ ಹೆಂಡತಿ ಮಕ್ಕಳನ್ನು ಲೀಲಾವತಿ ಅಮ್ಮನವರಿಂದ ದೂರವಿಟ್ಟು, ಅವರನ್ನು ಕಣ್ಣಂಚಿನಲ್ಲಿ ಜೋಪಾನ ಮಾಡಿದಂತಹ ಶ್ರವಣಕುಮಾರ.

ಇನ್ನು ಲೀಲಾವತಿ ಅಮ್ಮನವರ ಅಂತ್ಯದರ್ಶನ ಪಡೆಯಲು ಚೆನ್ನೈನಿಂದ (Chennai) ನೆಲಮಂಗಲದ ಸೋಲದೇವನಹಳ್ಳಿಗೆ ಬಂದಂತಹ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಮಗ ಯುವರಾಜ್, ಮಾಧ್ಯಮದವರ ಜೊತೆಗೆ ಲೀಲಾವತಿ (Leelavathi) ಅಮ್ಮನವರ ಗುಣಗಾನ ಮಾಡಿದ್ದಾರೆ. ಹುಟ್ಟಿದಾಗಿನಿಂದಲೂ ಚೆನ್ನೈನಲ್ಲಿ ಇರುವಂತಹ ವಿನೋದ್ ರಾಜ್(Vinod Raj) ಅವರ ಪುತ್ರ ಯುವರಾಜ್(Yuvaraj) ಅವರು ಕನ್ನಡವನ್ನು ಬಹಳ ಸೊಗಸಾಗಿ ಮಾಧ್ಯಮದವರ ಮುಂದೆ ಮಾತನಾಡುವ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದರೆ,

ಲೀಲಾವತಿ ಅಮ್ಮನವರ ಸೊಸೆ ಅನು(Anu) “ನಾವು ಲೀಲಾವತಿ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅವರು ಎಷ್ಟು ದೊಡ್ಡ ಆಕ್ಟರ್ ಆದ್ರೂ ಕೂಡ ಜೀವನದಲ್ಲಿ ತುಂಬಾ ಡಿಸಪ್ಲಿನ್, ಅದನ್ನೆಲ್ಲ ನಾನು ನನ್ನ ಮಗನಿಗೂ ಹೇಳಿಕೊಟ್ಟಿದ್ದೇನೆ ಎಂದರೆ ಅದೆಲ್ಲವೂ ನಮ್ಮ ಅತ್ತೆಯವರಿಂದಲೇ. ಅವರನ್ನು ನೋಡಿ ನಾನು ಜೀವನದಲ್ಲಿ ತುಂಬಾ ಕಲಿತಿದ್ದೇನೆ ನಿಜಕ್ಕೂ ನನ್ನ ಮಗ ಅವರಂತ ಅಜ್ಜಿ ಪಡೆಯುವುದಕ್ಕೂ, ನಾನು ಅವರಂಥ ಅತ್ತೆಯನ್ನು ಪಡೆಯುವುದಕ್ಕೂ ತುಂಬಾ ಅದೃಷ್ಟವಂತರು. ಅವರ ಎಲ್ಲಾ ಚಿತ್ರಗಳನ್ನು ನಾನು ನೋಡಿದ್ದೇನೆ ಎಲ್ಲವೂ ನನಗೆ ಬಹಳ ಇಷ್ಟ” ಎಂದು ತಮ್ಮ ಅತ್ತೆಯ ಗುಣಗಾನವನ್ನು ಸೊಸೆ ಅನುವರು ಮಾಧ್ಯಮದವರೊಟ್ಟಿಗೆ ಮಾಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!