
ದಣಿವು ಸುಸ್ತು ನಿವಾರಿಸುವ ಜೊತೆಗೆ ವಾಂತಿ, ಪಿತ್ತ ಒಡೆದೋಡಿಸುವ ನಿಂಬೆ ಏಲಕ್ಕಿ
ಪ್ರತಿ ಮನುಷ್ಯನಿಗೆ ಒಂದಲ್ಲ ಒಂದು ದೈಹಿಕ ಸಮಸ್ಯೆ ಅನ್ನೋದು ಕಾಡುತ್ತಲೇ ಇರುತ್ತದೆ ಇಂತಹ ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಪ್ರತಿದಿನ ಔಷದಿ ಮಾತ್ರೆಗಳನ್ನು ಸೇವಿಸಿದರೆ ದೇಹಕ್ಕೆ ಅಡ್ಡ ಪರಿಣಾಮ ಬೀರಬಹದು ಆಗಾಗಿ ಯಾವುದೇ ಅಡ್ಡ ಪರಿಣಾಮವಿಲ್ಲದೆ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುವ ಜೊತೆಗೆ, ಹಲವು ಸಮಸ್ಯೆಗಳನ್ನು ನಿಯಂತ್ರಿಸುವಂತ ಒಂದಿಷ್ಟು ಮನೆಮದ್ದುಗಳನ್ನು ಈ ಮೂಲಕ ತಿಳಿದುಕೊಳ್ಳೋಣ.
ಮೊದಲನೆಯದಾಗಿ ದೇಹದ ದಣಿವು ಸುಸ್ತು ಎಂಬುದಾಗಿ ಪ್ರತಿದಿನ ಔಷದಿ ಮಾತ್ರೆಗಳನ್ನು ಸೇವಿಸುವ ಬದಲು ಮನೆಯಲ್ಲೇ ತಯಾರಿಸಿಕೊಳ್ಳಿ ಈ ಪ್ರಯೋಜನಕಾರಿ ಮನೆಮದ್ದು, ನಿಂಬೆ ರಸಕ್ಕೆ ಏಲಕ್ಕಿ ಪುಡಿ, ಕುಂಕುಮ ಕೇಸರಿ ಮತ್ತು ಸಕ್ಕರೆ ಬೆರೆದ ಪಾನಕವನ್ನು ಬೆಳಗ್ಗೆ ಹಾಗೂ ಸಂಜೆ ಸೇವಿಸಿದರೆ ದೇಹದ ದಣಿವು ಹಾಗೂ ಸುಸ್ತು ನಿವಾರಣೆಯಾಗುವುದು, ಇದರ ಜೊತೆಗೆ ಅತಿಯಾದ ಬಾಯಾರಿಕೆ, ವಾಂತಿ ಪಿತ್ತ ಮುಂತಾದ ತೊಂದರೆಗಳು ಶಮನವಾಗುದು.
ಅತಿಯಾಗಿ ತಲೆ ನೋವಿನಿಂದ ತಲೆ ಸಿಡಿತ ಆಗುತ್ತಿದ್ದರೆ ಕವಡೆಯನ್ನು ನಿಂಬೆರಸದಲ್ಲಿ ತೇಯ್ದು ಹಣೆಗೆ ಲೇಪಿಸಿದರೆ ತಲೆ ಸಿಡಿತ ನಿವಾರಣಾಗುವುದು. ಇನ್ನು ಹುಳಿತೇಗು ಹಾಗೂ ಎದೆಯುರಿ ಇಂತಹ ಸಮಸ್ಯೆಗೆ ಎರಡರಿಂದ ನಾಲ್ಕು ಚಮಚದಷ್ಟು ನಿಂಬೆ ರಸವನ್ನು ಸ್ವಲ್ಪ ನೀರಿಗೆ ಬೆರಸಿ ಕುಡಿದರೆ ಎದೆಯುರಿ ಹುಳಿ ತೇಗು ನಿವಾರಣೆಯಾಗುತ್ತದೆ.
ಬಾಯಿಹುಣ್ಣು ಮನೆಮದ್ದು: ದೇಹದ ಅತಿಯಾದ ಉಷ್ಣಾಂಶದಿಂದ ಬಾಯಿ ಹುಣ್ಣು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದಕ್ಕೆ ಸುಲಭ ಮಾರ್ಗ ಏನು ಅಂದರೆ ಅತಿಯಾಗಿ ನೀರು ಕುಡಿಯಬೇಕು ಹಾಗೂ ಇದಕ್ಕೆ ಮನೆಮದ್ದು ಮನೆಯಲ್ಲಿಯೇ ಇದೆ ಅದೇನು ಅನ್ನೋದನ್ನ ನೋಡುವುದಾದರೆ ನಿಂಬೆ ರಸ ಹಾಗೂ ಅಡುಗೆ ಉಪ್ಪನ್ನು ನೀರಿಗೆ ಬೆರಸಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ನಿವಾರಣೆ ಆಗುತ್ತದೆ. ಈ ಉಪಯುಕ್ತ ವಿಚಾರ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಮರೆಯದೆ ಹಂಚಿಕೊಳ್ಳಿ.