ಈ ಲಕ್ಷಣಗಳು ಇದ್ದರೆ ಲಿವರ್ (ಯಕೃತ್ತು)ಸಮಸ್ಯೆ ಇದೆ ಎಂದರ್ಥ

ಮನುಷ್ಯನು ಆರೋಗ್ಯವಾಗಿರಲು ದೇಹದ ಎಲ್ಲಾ ಅಂಗಾಗಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಇಂತಹ ಅಂಗಾಗಗಳಲ್ಲಿ ಲಿವರ್ (ಯಕೃತ್ತು) ಕೂಡ ಒಂದು ಭಾಗವಾಗಿದೆ. ಈ ಅಂಗಾಗವು ದೇಹದ ಚಯಾಪಚಯ ಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಆರೋಗ್ಯ ವಾಗಿರಲು ಲಿವರ್ ಕೂಡ ಆರೋಗ್ಯವಾಗಿರಬೇಕಾಗುತ್ತದೆ.ಇಲ್ಲದಿಂದ್ದರೆ ಮಾರಣಾಂತಿಕ ಸಮಸ್ಯೆಗಳು ಕಾಡುತ್ತವೆ.

ಲಿವರ್ ಹರ್ಮೋನ್ ಗಳ ಉತ್ಪಾದನೆ ಹಾಗೂ ದೇಹದ ವಿಷಕಾರಿ ಅಂಶಗಳನ್ನು ತೆಗೆದು ಹಾಕುವ ಕಾರ್ಯ ಮಾಡುತ್ತದೆ. ಹೀಗಾಗಿ ಲಿವರ್ ಅನ್ನು ದೇಹದ ಪ್ರಮುಖ ಅಂಗ ಎಂದು ಪರಿಗಣಿಸಲಾಗುತ್ತದೆ. ಆದರೆ ದೇಹದಲ್ಲಿ ಕೆಲ ಲಕ್ಷಣಗಳು ಕಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಏಕೆಂದರೆ ಕೆಲವು ಲಕ್ಷಣಗಳು ಹಲವು ರೋಗಗಳಿಗೆ ಕಾರಣವಾಗಿರುತ್ತದೆ.ಲಿವರ್ ಸಮಸ್ಯೆಯ ಐದು ಲಕ್ಷಣಗಳು ಹೀಗಿವೆ.

ಹೊಟ್ಟೆನೋವು: ನಿಮ್ಮಲ್ಲಿ ನಿರಂತರ ಹೊಟ್ಟೆ ನೋವು ಕಾಡುತ್ತಿದ್ದರೆ.ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಿ. ಏಕೆಂದರೆ ಇಂತಹ ಸಮಸ್ಯೆಯಿದ್ದರೆ ಲಿವರ್ ಸಂಬಂಧಿತ ರೋಗಗಳು ಕಾಡುತ್ತವೆ. ಈ ಸಮಯದಲ್ಲಿ ಹೊಟ್ಟೆ ನೋವು ನಿರ್ಲಕ್ಷಿಸುವುದು ಅಪಾಯಕಾರಿ.

ಕೀಲು ನೋವು: ನಿಮ್ಮಲ್ಲಿ ಕೀಲು ನೋವು, ಶೀತ, ಕೆಮ್ಮು ಕಂಡು ಬರುತ್ತಿದ್ದರೆ ಅದು ಕೂಡ ಲಿವರ್ ಸಮಸ್ಯೆಗೆ ಕಾರಣವಾಗುತ್ತದೆ. ಈ ರೀತಿ ಸಮಸ್ಯೆಯಿದ್ದರೆ ವೈದ್ಯರನ್ನ ಭೇಟಿ ಮಾಡುವುದು ಉತ್ತಮ.

ಸದಾ ಗೊಂದಲ: ನೀವು ಪ್ರತಿ ಬಾರಿ ಗೊಂದಲಕ್ಕಿಡಾಗುತ್ತಿದ್ದರೆ ಅದು ಕೂಡ ಲಿವರ್ ಹಾನಿಯಾಗಿರುವ ಲಕ್ಷಣ. ರೋಗ ಪೀಡಿತ ಲಿವರ್ ರಕ್ತದಲ್ಲಿ ಸರಾಕೋಪರ್ ಅಂಶವನ್ನು ಉತ್ಪತ್ತಿ ಮಾಡುತ್ತದೆ.ಇದರಿಂದ ಮಿದುಳಿನ ಕ್ರಿಯೆಯಲ್ಲಿ ವ್ಯತ್ಯಾಸಉಂಟಾಗಿ ಗೊಂದಲಕ್ಕಿಡಾಗುತ್ತೀರಿ. ಈ ರೀತಿಯ ಸಮಸ್ಯೆ ಕಂಡು ಬಂದರೆ ವೈದರನ್ನ ಸಂಪರ್ಕಿಸಿ.

ಚರ್ಮದ ಮೇಲೆ ರಕ್ತದ ಗುರುತು: ಪಿತ್ತಜನಕಾಂಗ ಅಥವಾ ಲಿವರ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ. ರಕ್ತ ಹೆಪ್ಪುಗಟ್ಟುತ್ತದೆ.ಇದರಿಂದ ಚರ್ಮದ ಮೇಲೆ ರಕ್ತದ ಗುರುತುಗಳು ಕಾಣಿಸಿಕೊಳ್ಳುತ್ತವೆ.ಈ ರೀತಿಯ ಲಕ್ಷಣಗಳಿದ್ದರೆ ಲಿವರ್ ಅನ್ನು ಪರಿಕ್ಷಿಸಿಕೊಳ್ಳಿ.

ಹಳದಿ ಕಣ್ಣು ಮತ್ತು ಚರ್ಮ: ಲಿವರ್ ನಲ್ಲಿ ಸಮಸ್ಯೆಇದ್ದರೆ ಕಣ್ಣು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಸಮಸ್ಯೆಯೂ ಉಲ್ಬಣವಾದಂತೆ ರೋಗಕ್ಕೆ ತುತ್ತಾಗ ಬೇಕಾಗುತ್ತದೆ. ಚರ್ಮದ ಬಣ್ಣಗಳಲ್ಲಿ ವ್ಯತ್ಯಾಸವಾಗುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ.

Leave A Reply

Your email address will not be published.

error: Content is protected !!