ಶಿವನಿಗೆ ಬಿಲ್ವಪತ್ರೆ ಅಂದ್ರೆ ತುಂಬಾನೇ ಇಷ್ಟವಾದದ್ದು ಯಾಕೆ ಅನ್ನೋ ಸತ್ಯ ನಿಮಗೆ ಗೊತ್ತೇ

ಪ್ರತಿ ಹಿಂದೂ ದೇವರುಗಳು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತವೆ, ಅದೇ ನಿಟ್ಟಿನಲ್ಲಿ ಶಿವನಿಗೆ ಬಿಲ್ವ ಪತ್ರೆ ಅನ್ನೋದು ಯಾಕೆ ಅಷ್ಟೊಂದು ಪ್ರಿಯವಾದದ್ದು ಅನ್ನೋದನ್ನ ತಿಳಿಯುವುದರ ಹಿಂದಿದೆ ಒಂದು ಪೌರಾಣಿಕ ಹಿನ್ನಲೆ ಅಷ್ಟಕ್ಕೂ ಅದು ಏನು ಅನ್ನೋದನ್ನ ಈ ಮೂಲಕ ತಿಳಿಯೋಣ. ಶಿವಾನಿ ಹಲವು ಹೆಸರುಗಳಿಂದ ಕರೆಯಲ್ಪಡಲಾಗುತ್ತದೆ ಶಿವ ಈಶ್ವರ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಈ ದೇವರಿಗೆ ಬಿಲ್ವ ಪತ್ರೆ ಅಂದ್ರೆ ಯಾಕೆ ಅಷ್ಟೊಂದು ಇಷ್ಟ? ಈ ಬಿಲ್ವ ಪತ್ರೆಗೆ ಒಂದು ದಂಟಿನಲ್ಲಿ ಮೂರು ಎಲೆಗಳಿರುವುದು ಸಾಮಾನ್ಯ. ಬಿಲ್ವಪತ್ರೆಯ ಮೂರು ದಳಗಳಲ್ಲಿ ಎಡಗಡೆಯಿರುವುದು ಬ್ರಹ್ಮ, ಬಲಗಡೆಯಿರುವುದು ವಿಷ್ಣು ಮತ್ತು ಮಧ್ಯದಲ್ಲಿರುವುದು ಸದಾಶಿವನೆಂದು ಪುರಾಣ ಹೇಳುತ್ತದೆ.

ಇನ್ನು ಈ ಬಿಲ್ವಪತ್ರೆಯ ಮುಂಭಾಗದಲ್ಲಿ ಅಮೃತ, ಹಿಂಭಾಗದಲ್ಲಿ ಯಕ್ಷರು ಇರುತ್ತಾರೆ. ಈ ಬಿಲ್ವಪತ್ರೆ ಮರ ಕಾಶಿ ಕ್ಷೇತ್ರಕ್ಕೆ ಸರಿಸಮಾನ ಎಂಬ ನಂಬಿಕೆ ಶಿವ ಭಕ್ತರಿಗಿದೆ ಸ್ಕಂದ ಪುರಾಣದ ಪ್ರಕಾರ ಬಿಲ್ಪಪತ್ರೆ ಮರ ಪಾರ್ವತಿಯ ಬೆವರ ಹನಿಗಳಿಂದ ಹುಟ್ಟಿಕೊಂಡಿತಂತೆ, ಹೌದು ಒಮ್ಮೆ ಪಾರ್ವತಿಯ ಬೆವರ ಹನಿಗಳು ಮಂದಾರ ಪರ್ವತದ ಮೇಲೆ ಬಿದ್ದಾಗ, ಹುಟ್ಟಿದ ಮರವಿದು ಪಾರ್ವತಿ ದೇವಿಯು ಗಿರಿಜೆಯಾಗಿ ಈ ಮರದ ಬೇರುಗಳಲ್ಲಿ ನೆಲೆಸಿರುತ್ತಾಳಂತೆ.

ಅಷ್ಟೇ ಅಲ್ಲದೆ ಈ ಬಿಲ್ವ ಪತ್ರೆಯ ಕಾಂಡದಲ್ಲಿ ಮಹೇಶ್ವರಿಯಾಗಿ ಕಾಂಡದಲ್ಲಿ ದಾಕ್ಷಾಯಣಿಯಾಗಿ ಕೊಂಬೆಯಲ್ಲಿ ಪಾರ್ವತಿಯಾಗಿ ಎಲೆಗಳಲ್ಲಿ ಕಾತ್ಯಾಯನಿಯಾಗಿ ಹಣ್ಣಿನಲ್ಲಿ ಮತ್ತು ಗೌರಿಯಾಗಿ ಹೂವುಗಳಲ್ಲಿ ನೆಲೆಸಿರುತ್ತಾಳಂತೆ. ಈ ಎಲ್ಲಾ ಶಕ್ತಿ ಸ್ವರೂಪಿಣಿಯರ ಜೊತೆಗೆ ಲಕ್ಷ್ಮೀ ದೇವಿಯೂ ಈ ಮರದಲ್ಲಿ ನೆಲೆಸಿರುತ್ತಾಳಂತೆ. ಪಾರ್ವತಿ ದೇವಿಯ ಆವಾಸ ಸ್ಥಾನವಾಗಿರುವುದರಿಂದ ಇದು ಶಿವನಿಗೆ ಪ್ರೀತಿ ಪಾತ್ರವಾಗಿರುವ ಮರ. ಅದರಲ್ಲೂ ಸ್ವತಃ ಪಾರ್ವತಿಯೇ ಈ ಮರದ ಎಲೆಗಳಾಗಿರುವುದರಿಂದ ಆ ಎಲೆಗಳೆಂದರೆ ಶಿವನಿಗೆ ಇನ್ನೂ ಅಚ್ಚು ಮೆಚ್ಚು.

ಇನ್ನೊಂದು ವಿಶೇಷವಾದ ನಂಬಿಕೆ ಏನು ಅಂದ್ರೆ ಯಾರು ಈ ಬಿಲ್ಪಪತ್ರೆ ಅಥವಾ ಮರವನ್ನು ಸ್ಪರ್ಶಿಸುತ್ತಾರೋ, ಅವರ ಎಲ್ಲಾ ಪಾಪ ಕರ್ಮಗಳೂ ನಿವಾರಣೆಯಾಗುತ್ತವೆ, ಎಂಬ ನಂಬಿಕೆಯೂ ಇದೆ. ಅಷ್ಟೇ ಅಲಲ್ದೆ ಬಿಲ್ವ ಪತ್ರೆಯನ್ನು ಹಲವು ಔಷದಿಯ ಬಳಕೆಗೆ ಬಳಸಲಾಗುತ್ತದೆ, ಇದರಲ್ಲಿ ಹಲವು ದೈಹಿಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಗುಣವಿದೆ ಅನ್ನೋದನ್ನ ಈಗಾಗಲೇ ಆಯುರ್ವೇದ ಖಚಿತ ಪಡಿಸಿದೆ. ಈ ಬಿಲ್ವ ಪತ್ರೆ ಮರ ಬರಿ ಆಧ್ಯಾತ್ಮಿಕವಾಗಿ ಅಲ್ಲದೆ ಹಲವು ರೋಗಗಳನ್ನು ನಿವಾರಿಸುವ ಔಷದಿ ಗುಣಗಳನ್ನು ಹೊಂದಿದೆ.

Leave A Reply

Your email address will not be published.

error: Content is protected !!