ಬೆಟ್ಟಿಂಗ್ ವಿಚಾರಕ್ಕೆ ಕೋಪಿಸಿಕೊಂಡು ಸುರ ಸುಂದರಾಂಗಿ ಹೆಂಡತಿಯ ಪ್ರಾಣವನ್ನೇ ತೆಗೆದ ಪಾಪಿ ಗಂಡ

ಇತ್ತೀಚಿಗೆ ಜನರಿಗೆ ರಾತ್ರಿ ಹೇಗಾದರೂ ಹಣ ಸಂಪಾದಿಸಬೇಕು, ಹೇಗಾದರೂ ಶ್ರೀಮಂತರಾಗಬೇಕು ಎನ್ನುವ ಅಭಿಲಾಷೆ ಇರುತ್ತೆ. ಇದು ಅಭಿಲಾಷೆ ಅಲ್ಲ, ಖಂಡಿತವಾಗಿಯೂ ದುರಾಸೆ. ನ್ಯಾಯವಾಗಿ ದುಡಿದ ಹಣವೇ ಕೈ ಸೇರುವುದಿಲ್ಲ ಅಂತದ್ರಲ್ಲಿ ಅನ್ಯಾಯದ ದಾರಿ ಹಿಡಿದರೆ ಆ ಹಣ ಕೈ ಸೇರೋದಕ್ಕೆ ಸಾಧ್ಯನಾ! ಹೀಗೆ ಒಬ್ಬ ತಾನು ಕೋಟ್ಯಾಧಿಪತಿಯಾಗಬೇಕು, ಹಣ ಸಂಪಾದಿಸಬೇಕು ಎನ್ನುವ ನಿಟ್ಟಿನಲ್ಲಿ ಬೆಟ್ಟಿಂಗ್ ಮಾಡಲು ಹೋಗಿ ಕೊನೆಗೆ ಎಲ್ಲವನ್ನೂ ಕಳೆದುಕೊಂಡು ಮಾತ್ರವಲ್ಲದೆ ಸ್ವತಃ ಹೆಂಡತಿಯನ್ನು ಮೃತ್ಯುವಿನ ಪಾಶಕ್ಕೆ ನೂಕಿದ್ದಾನೆ.

ಈ ಘಟನೆ ನಡೆದಿರುವುದು ಹಾಸನದಲ್ಲಿ. ಮಧು ಎಂಬಾತ ತನ್ನ ಹೆಂಡತಿ ತೇಜಸ್ವಿನಿ ಅವರನ್ನು ಕೊಂ’ ದ ಪಾ’ ಪಿ ಪತಿ. ಏಳು ವರ್ಷ ಮಧು ಹಾಗೂ ತೇಜಸ್ವಿನಿ ಜೊತೆಗೆ ಸಂಸಾರ ನಡೆಸಿದ್ದಾರೆ 28 ವರ್ಷದ ತೇಜಸ್ವಿನಿ ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದಕ್ಕೆ ಕಾರಣ ಮಧುವಿನ ಜೂಜಾಟ ಎಂದು ಹೇಳಲಾಗುತ್ತಿದೆ. ಮಧು ಬೆಂಗಳೂರಿನ ಟೊಯೋಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಳೆದ ಮೂರು ತಿಂಗಳ ಹಿಂದೆ ಹಾಸನದ ದೊಡ್ಡಮಂಡಿಗನಹಳ್ಳಿಗೆ ಬಂದು ಗಂಡ ಹೆಂಡತಿ ವಾಸವಾಗಿದ್ದರು ಹೇಗಾದರೂ ಮಾಡಿ ಪತಿಯ ಬೆಟ್ಟಿಂಗ್ ಅನ್ನು ಬಿಡಿಸಬೇಕು ಎನ್ನುವ ಕಾರಣಕ್ಕೇ ತೇಜಸ್ವಿನಿ ಗಂಡನನ್ನ ಇಲ್ಲಿಗೆ ಕರೆದುಕೊಂಡು ಬಂದಿದ್ದಳು. ಆದರೆ ಇದೀಗ ಮಧು ತನ್ನಾಕೆಯ ಪ್ರಾಣ ತೆಗೆದಿರುವುದಾಗಿ ಪ್ರಕರಣ ದಾಖಲಾಗಿದೆ.

ಮಧು ತನ್ನ ಪತ್ನಿಯನ್ನು ನೇ’ಣು ಬಿಗಿದು ಕೊ’ಲೆ ಮಾಡಿದ್ದಾನೆ ಎಂದು ಆರೋಪದ ಹಿನ್ನೆಲೆಯಲ್ಲಿ ಸೆಕ್ಷನ್ 302 ಅಡಿಯಲ್ಲಿ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೊ’ ಲೆಯ ಹಿಂದಿನ ಕಾರಣ ಮಧುವಿನ ಬೆಟ್ಟಿಂಗ್ ಹುಚ್ಚು. ಮಧು ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ. ಇದರಲ್ಲಿ ಹಣ ಗಳಿಸಬೇಕು ಎನ್ನುವ ದುರಾಸೆಯಿಂದ ಈವರೆಗೆ ಅಲ್ಲಿ ಇಲ್ಲಿ ಸಾಲ ಮಾಡಿ ಸುಮಾರು 30 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದ.

ಅಲ್ಲದೆ ಮದುವೆಯ ವೇಳೆ ತೇಜಸ್ವಿನಿಯ ಮನೆಯಲ್ಲಿ ಕೊಟ್ಟ 150 ಗ್ರಾಮ್ ಚಿನ್ನವನ್ನು ಕೂಡ ಮಾರಿಕೊಂಡಿದ್ದ. ಇನ್ನು ತೇಜಸ್ವಿನಿಯ ಜೀವ ಕಳೆದುಕೊಂಡಿದ್ದಕ್ಕೆ ಮದುವೆ ಕಾರಣ ಎಂದು ಮೃತಳ ತಾಯಿ ಲಲಿತ ಆರೋಪ ಮಾಡಿದ್ದಾರೆ. ಮೂರು ತಿಂಗಳಿನಿಂದ ಹಾಸನದಲ್ಲಿ ವಾಸವಾಗಿದ್ದ ಮಧು ಹಾಗೂ ತೇಜಸ್ವಿನಿಯ ನಡುವೆ ಬೆಟ್ಟಿಂಗ್ ವಿಚಾರಕ್ಕೆ ಆಗಾಗ ಜಗಳವಾಗುತ್ತಿತ್ತು. ಇದೇ ಕಾರಣಕ್ಕೆ ಹಲವು ಬಾರಿ ಮಧು ತೇಜಸ್ವಿನಿಯ ಅನ್ನು ಹೊಡೆಯುತ್ತಿದ್ದ. ಇದೇ ಕಾರಣಕ್ಕೆ ಜಗಳವಾಗಿ ಕೊನೆಗೆ ಪತ್ನಿಯನ್ನು ಮುಗಿಸಿದ್ದಾನೆ ಎಂದು ತೇಜಸ್ವಿನಿಯ ಮನೆಯವರು ಮಧು ಮೇಲೆ ಆರೋಪ ಮಾಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಈಗಾಗಲೇ ಆರಂಭವಾಗಿದ್ದು, ಆರೋಪಿ ಮಧು ತಲೆಮರೆಸಿಕೊಂಡಿದ್ದಾನೆ. ಇದು ಆತನೇ ತಪ್ಪಿತಸ್ಥ ಎನ್ನುವುದಕ್ಕೆ ಪುಷ್ಟಿ ನೀಡಿದೆ. ಹಾಗಾಗಿ ತಲೆಮರಿಸಿಕೊಂಡಿರುವ ಮಧು ಎಲ್ಲಿದ್ದಾನೆ ಎಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ತಾಯಿಯನ್ನ ಕಳೆದುಕೊಂಡು ಮಗ ಮಾತ್ರ ಅನಾಥವಾಗಿದೆ!

Leave a Comment

error: Content is protected !!