
ಚಂದ್ರಶೇಖರ್ ಗುರೂಜಿಯವರನ್ನು ಮುಗಿಸಿದ ಮಹಾಂತೇಶ್ ಮತ್ತು ಮಂಜುನಾಥ್ ತನಿಖೆ ವೇಳೆ ಎಳೆ ಎಳೆಯಾಗಿ ಬಹಿರಂಗ ಪಡಿಸಿದ ಸ್ಫೋಟಕ ಮಾಹಿತಿಗಳು ಕಹಾನಿಗೆ ಮತ್ತೊಂದು ಟ್ವಿಸ್ಟ್
ವಾಸ್ತು ತಜ್ಞ, ಸರಳ ವಾಸ್ತು, ಸರಳ ಜೀವನ ವಾಹಿನಿಯ ನಿರ್ಮಾಪಕ ಚಂದ್ರಶೇಖರ್ ಗುರೂಜಿ ಅವರ ಹ’ತ್ಯೆ ಕಳೆದು ಮೂರು ದಿನವಾಗಿದೆ. ಅವರ ಕುಟುಂಬಸ್ಥರು ಮೂರನೆಯ ದಿನದ ಕಾರ್ಯಗಳನ್ನು ನೆರವೇರಿಸಿದ್ದಾರೆ ಇನ್ನು ಈ ಕೃತ್ಯಕ್ಕೆ ಸಂಬಂಧಪಟ್ಟಂತೆ ಪೊಲೀಸರು ಈಗಾಗಲೇ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಈ ಕೃತ್ಯಕ್ಕೆ ಕಾರಣ ಏನು ಅನ್ನೋದನ್ನ ಆರೋಪಿಗಳಿಂದ ಬಾಯಿ ಬಿಡಿಸುವುದರಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ದಿನವೂ ಕೆಲವು ಸತ್ಯಗಳನ್ನು ಆರೋಪಿಗಳು ಬಾಯಿ ಬಿಡುತ್ತಿದ್ದಾರೆ.
ಈ ಹಿಂದೆ ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಮಾಡಲು ಬೇನಾಮಿ ಆಸ್ತಿಯೇ ಕಾರಣ ಎಂದಷ್ಟೇ ಹೇಳಲಾಗಿತ್ತು. ಆದರೆ ಇದೀಗ ಈ ಕೃತ್ಯದ ಹಿಂದೆ ಇರುವ ಇನ್ನಷ್ಟು ಸ್ಪೋಟಕ ಮಾಹಿತಿಗಳು ಹೊರಬಂದಿವೆ. ಚಂದ್ರಶೇಖರ್ ಗುರೂಜಿ ಅವರನ್ನು ಮುಗಿಸಿದ ಪ್ರೆಸಿಡೆಂಟ್ ಹೋಟೆಲ್ ಬಳಿ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದರು. ಜೊತೆಗೆ ಆರೋಪಿಗಳನ್ನು ಕೂಡ ಕರೆದುಕೊಂಡು ಹೋದ ಪೊಲೀಸರು ಸ್ಥಳದ ಮಹಜರು ಮಾಡಿಸಿದರು. ಇನ್ನು ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳು ಕೆಲವು ಮಹತ್ವದ ವಿಚಾರಗಳನ್ನು ಹೊರಹಾಕಿದ್ದಾರೆ.
ಗುರೂಜಿಯ ಕೃತ್ಯ ಮಾಡಿದ ಹಂತಕರು ಅವರ ಬಳಿಯೇ ಹತ್ತು-ಹನ್ನೆರಡು ವರ್ಷ ಕೆಲಸ ಮಾಡಿದ್ದವರು. ಈ ಬಗ್ಗೆ ಆರೋಪಿಗಳು ಹೇಳಿರುವ ಹೇಳಿಕೆಯಲ್ಲಿ, ನಾವು 2016ರಲ್ಲಿ ಕೆಲಸ ಬಿಟ್ಟಿದ್ದೆವು ಅಲ್ಲಿಂದ ಹೊರಗೆ ಬಂದು ನಮ್ಮ ಪಾಡಿಗೆ ನಾವು ಸ್ವಂತ ಉದ್ಯೋಗ ಮಾಡಿ ಜೀವನ ನಡೆಸುತ್ತಿದ್ದೆವು. ರಿಯಲ್ ಎಸ್ಟೇಟ್ ಮೊದಲಾದ ಉದ್ಯೋಗದಲ್ಲಿ ನಾವು ತೊಡಗಿಕೊಂಡಿದ್ದೇವೆ. ಆದರೆ ನಾವು ಗುರೂಜಿಯವರಿಂದ ದೂರ ಬಂದರು ಅವರು ಮಾತ್ರ ನಮ್ಮನ್ನು ಬಿಡಲಿಲ್ಲ. ನಮ್ಮ ಎಲ್ಲಾ ಕೆಲಸದಲ್ಲಿಯೂ ಗುರೂಜಿ ಕಲ್ಲು ಹಾಕುತ್ತಿದ್ದರು. ಅಲ್ಲದೆ ನಮಗೆ ಸಾಕಷ್ಟು ಕಿರುಕು-ಳವನ್ನು ಕೊಟ್ಟಿದ್ದಾರೆ. ಎಂದು ಹೇಳಿಕೆಯಲ್ಲಿ ಆರೋಪಿಗಳು ಬಹಿರಂಗ ಪಡಿಸಿದ್ದಾರೆ. ಅಲ್ಲದೆ ಗುರೂಜಿಯವರ ಬಗ್ಗೆ ಇನ್ನಷ್ಟು ವಿಷಯಗಳನ್ನು ಹೇಳಿದ ಆರೋಪಿಗಳು ಗುರೂಜಿ ನಮಗೆ ಮಾನಸಿಕವಾಗಿ ಬಹಳಷ್ಟು ತೊಂದರೆ ನೀಡಿದ್ದಾರೆ.
ಯಾವುದೇ ವ್ಯಾಪಾರ ಮಾಡುವುದಿದ್ದರೂ ಅದನ್ನು ತಪ್ಪಿಸಲು ಗುರೂಜಿ ಪ್ರಯತ್ನಿಸುತ್ತಿದ್ದರು. ನಾವು ಎಲ್ಲಿಂದ ಎಲ್ಲಿಗೆ ಹೋದರು ಹಿಂಬಾಲಕರಂತೆ ಚಂದ್ರಶೇಖರ್ ಗುರೂಜಿ ನಮಗೆ ತೊಂದರೆಯನ್ನು ನೀಡುತ್ತಿದ್ದರು. ಆ ಕಾರಣಕ್ಕೆ ಸಿಟ್ಟಿಗೆದ್ದು ನಾವು ಗುರೂಜಿ ಅವರನ್ನು ಮಾಡಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ. ಇನ್ನು ಚಂದ್ರಶೇಖರ್ ಗುರೂಜಿ ಅವರನ್ನು ಮುಗಿಸಿದ್ದು ಫ್ರೀ ಪ್ಲಾನ್ ಅನ್ನುವುದು ಈಗಾಗಲೇ ಸಾಬೀತಾಗಿದೆ. ಕೃತ್ಯ ಮಾಡಿದ ಮಹಾಂತೇಶ್ ಹ-ತ್ಯೆ ಮಾಡುವುದಕ್ಕೂ ಐದು ದಿನಗಳ ಹಿಂದೆ ದ್ವೇಷ ಹಾಗೂ ನ್ಯಾಯಕ್ಕೆ ಸಂಬಂಧಪಟ್ಟ ಪೋಸ್ಟ್ ಒಂದನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದ. ಹತ್ಯೆ ಮಾಡಲು ಜುಲೈ ಮೂರರಂದು ಹಂತಕರು ಪ್ಲಾನ್ ಮಾಡಿದ್ದರು.
ಹೊಸೂರು ವೃತದ ಬಳಿ ಇರುವ ಕೆನರಾ ಹೋಟೆಲ್ನಲ್ಲಿ ರೂಮು ಮಾಡಿಕೊಂಡಿದ್ದ ಮಂಜುನಾಥ ಮತ್ತು ಮಹಾಂತೇಶ್, ಗುರೂಜಿಯವರ ಬಳಿ ತಮ್ಮ ನಡುವೆ ಇರುವ ವ್ಯಾಜ್ಯದ ಸಂದಾನವನ್ನು ಮಾಡಿಕೊಳ್ಳುವುದಕ್ಕೆ ಒಪ್ಪಿಸಿದ್ದಾರೆ. ಕೆಲವು ಕಾಗದ ಪತ್ರಗಳನ್ನು ಹಿಡಿದುಕೊಂಡು ಬಂದ ಹಂತಕರು ಅದರ ನಡುವೆಯೇ ಚಾಕು ಇಟ್ಟುಕೊಂಡು ಬಂದು ಕೊನೆಗೆ ಅದರಿಂದಲೇ ಗುರೂಜಿಯನ್ನು ಇರಿದು ಮುಗಿಸಿದ್ದಾರೆ. ಕಸದ ರಾಶಿಯಲ್ಲಿ ಚಾಕುವನ್ನು ಎಸೆದಿದ್ದ ಹಂತಕರು ಕೊನೆಗೆ ಪೊಲೀಸರ ಕೈಗೆ ಈ ಚಾಕು ದೊರೆತಿದೆ. ಒಟ್ಟಿನಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ತನಿಖೆಗಳನ್ನ ಪೊಲೀಸರು ಕೈಗೊಂಡಿದ್ದಾರೆ.