ಮೈ ಮೇಲೆ ದೆವ್ವ ಬಂದಿದೆ ಅನ್ನೋದು ನಿಜಾನಾ, ಯಾಕೆ ಹಾಗೆ ಆಡ್ತಾರೆ ನೋಡಿ

ಮೈ ಮೇಲೆ ದೇವರು, ದೆವ್ವ ಬರುವುದು ನಿಜಾನಾ ಅಥವಾ ಸುಳ್ಳ ಹಾಗೂ ಹೆಂಗಸರ ಮೇಲೆ ಹೆಚ್ಚು ದೇವರು, ದೆವ್ವ ಬರಲು ಕಾರಣವೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಹಲವು ದೇವಸ್ಥಾನ ಚರ್ಚ್ ಮಸೀದಿಗಳಲ್ಲಿ ದೆವ್ವ ಓಡಿಸುವುದನ್ನು, ಮೈ ಮೇಲೆ ದೇವರು ಬರುವುದನ್ನು ನೋಡುತ್ತೇವೆ. ನಮಗೆ ಗೊತ್ತಿಲ್ಲದೆ ನೆಗೆಟೀವ್ ಎನರ್ಜಿ ನಮ್ಮ ದೇಹವನ್ನು ಪ್ರವೇಶಿಸುತ್ತದೆ. ದೇವಸ್ಥಾನ, ಚರ್ಚ್, ದರ್ಗಾಗಳಂತಹ ಪವಿತ್ರ ಸ್ಥಳಗಳಿಗೆ ಹೋದಾಗ ಅಲ್ಲಿರುವ ಪಾಸಿಟೀವ್ ಎನರ್ಜಿಯಿಂದ ದೇಹದಲ್ಲಿರುವ ನೆಗೆಟೀವ್ ಎನರ್ಜಿ ಹೊರಬರುತ್ತದೆ ಆ ಸಮಯದಲ್ಲಿ ಮನುಷ್ಯರು ವಿಚಿತ್ರವಾಗಿ ವರ್ತಿಸುತ್ತಾರೆ ಎಂದು ವೈಜ್ಞಾನಿಕವಾಗಿ ಪ್ರೂವ್ ಆಗಿದೆ. ದೇವರು ಅಥವಾ ದೆವ್ವ ಬರುವುದು ಎಂದರೆ ನಮ್ಮ ಶರೀರದಲ್ಲಿ ಬರುವ ವೈಬ್ರೇಷನ್. ಲಿಮಿಟ್ ದಾಟಿದ ಮೇಲೆ ನಮ್ಮ ದೇಹ ವೈಬ್ರೇಟ್ ಆಗುತ್ತದೆ. ಊರಿನ ಜಾತ್ರೆಯ ಸಂದರ್ಭದಲ್ಲಿ ತಮಟೆಯ ಶಬ್ಧ, ಕೂಗಾಟ ಇರುತ್ತದೆ ಇದರಿಂದ ಕೆಲವರ ದೇಹದಲ್ಲಿ ವೈಬ್ರೇಷನ್ ಬರುತ್ತದೆ. ಒಬ್ಬ ವ್ಯಕ್ತಿ ಯಾವತ್ತೂ ಡ್ಯಾನ್ಸ್ ಮಾಡದೆ ಇರುವನು ಅವನ ಮುಂದೆ ಸ್ಪೀಕರ್ ತಂದು ಜೋಶ್ ಆಗಿರುವ ಹಾಡನ್ನು ಹಾಕಿದರೆ ಅವನಿಗೆ ಗೊತ್ತಿಲ್ಲದೆ ಅವನು ಡ್ಯಾನ್ಸ್ ಮಾಡುತ್ತಾನೆ ಸೌಂಡ್ ವೈಬ್ರೇಷನ್ ಅನ್ನು ಪ್ರೊಡ್ಯೂಸ್ ಮಾಡುತ್ತದೆ. ವೈಬ್ರೇಷನ್ ನಮ್ಮ ದೇಹವನ್ನು ಜಾಸ್ತಿ ಮೊತ್ತದಲ್ಲಿ ಸ್ಪರ್ಶ ಮಾಡಿದಾಗ ಮೆದುಳಿನಲ್ಲಿರುವ ನ್ಯುರೋಟ್ರಾನ್ಸಮೀಟರ್ ಆಕ್ಟಿವೇಟ್ ಆಗಿ ನಮಗೆ ಗೊತ್ತಿಲ್ಲದೆ ದೇಹದಲ್ಲಿ ಕಂಪನಗಳು ಶುರುವಾಗುತ್ತದೆ. ಈ ವೈಬ್ರೇಷನ್ ಅನ್ನು ದೇವರು, ದೆವ್ವ ಬರುವುದು ಎನ್ನುತ್ತಾರೆ. ಭಾವನಾತ್ಮಕವಾಗಿ ದೃಢವಾಗಿರುವವರಿಗೆ ಈ ರೀತಿ ಆಗುವುದಿಲ್ಲ. ಬಹಳ ಭಕ್ತಿ ಇರುವವರಿಗೆ, ಮಾನಸಿಕವಾಗಿ ಬಳಲಿರುವವರಿಗೆ ದೇವರು ಅಥವಾ ದೆವ್ವ ಬರುತ್ತದೆ. ಗಂಡಸರಿಗಿಂತ ಹೆಂಗಸರಿಗೆ ಹೆಚ್ಚು ಬರುವುದು ಏಕೆಂದರೆ ಗಂಡಸರಿಗಿಂತ ಹೆಂಗಸರು ಎಮೋಷನಲ್ ವೀಕ್ ಆಗಿರುತ್ತಾರೆ. ಈ ರೀತಿ ಎಲ್ಲ ಧರ್ಮಗಳಲ್ಲಿ, ದೇಶಗಳಲ್ಲಿ ನಡೆಯುತ್ತದೆ.

ನಮ್ಮ ದೇಶದ ಹಳ್ಳಿಗಳಲ್ಲಿ ಜಾತ್ರೆಗಳು ನಡೆಯುತ್ತದೆ. ಜಾತ್ರೆಗಳಲ್ಲಿ ಮೈ ಮೇಲೆ ದೇವರು ಬಂದಿದ್ದಾರೆ ಎಂದು ವಿಚಿತ್ರವಾಗಿ ವರ್ತಿಸುತ್ತಾರೆ. ಆಜ್ಞೆಗಳನ್ನು ಕೊಡುತ್ತಾರೆ, ದೇವರು ನನ್ನೊಂದಿಗೆ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಇದನ್ನು ನೋಡಿದ ಜನ ದೇವರಿಗೆ ಭಯ ಬಿದ್ದು ನಮಸ್ಕಾರ ಮಾಡುತ್ತಾರೆ. ಭಕ್ತರು ತಮ್ಮ ಕಷ್ಟಗಳನ್ನು ಹೇಳುತ್ತಾರೆ ಇದಕ್ಕೆಲ್ಲ ಅವರು ಉತ್ತರ ಕೊಡುತ್ತಾರೆ. ಅವರ ಈ ರೀತಿಯ ಪ್ರವರ್ತನೆಗೆ ಕಾರಣ ಅವರ ಮಾನಸಿಕ ಸ್ಥಿತಿ ಸರಿ ಇಲ್ಲದೆ ಇರುವುದು. ಮಾನಸಿಕ ರೋಗದಿಂದ ಬಳಲುತ್ತಿರುವವರು ಹೀಗೆ ಆಡುತ್ತಾರೆ ಇದನ್ನು ಹಿಸ್ಟೀರಿಯಾ ಎನ್ನವರು. ಹಿಸ್ಟೀರಿಯಾ ಇದು ಗ್ರೀಕ್ ಪದ ಹಿಸ್ಟೀರಿಯಾ ಅಂದರೆ ಗರ್ಭಚೀಲ. ಹಿಸ್ಟೀರಿಯಾ ಅಂದರೆ ಮಾನಸಿಕ ಸ್ಥೈರ್ಯ ಇಲ್ಲದೆ ಜಾಸ್ತಿ ಎಮೋಷನ್ ಪ್ರದರ್ಶನ ಮಾಡುವುದು. ಇದು ಜಾಸ್ತಿ ಹೆಂಗಸರಲ್ಲಿ ಬರುವುದರಿಂದ ಇದಕ್ಕೆ ಈ ಹೆಸರನ್ನು ಇಟ್ಟಿದ್ದಾರೆ. ಬಾಲ್ಯವಿವಾಹ, ಸಣ್ಣ ವಯಸ್ಸಿನಲ್ಲಿ ಮಕ್ಕಳಾಗುವುದು, ಮಕ್ಕಳಾಗದೇ ಇರುವುದು, ಈ ರೀತಿಯ ಸಮಸ್ಯೆಗಳಿಂದ ಹೆಂಗಸರು ಮಾನಸಿಕ ಒತ್ತಡಕ್ಕೆ ಒಳಗಾಗಿ ಹಿಸ್ಟೀರಿಯಾ ಭಾದೆಗೆ ಒಳಗಾಗುತ್ತಾರೆ. ಹಿಂದಿನ ಕಾಲದಲ್ಲಿ ಬಾಲ್ಯವಿವಾಹ, ಸೊಸೆಗೆ ಕಷ್ಟ ಕೊಡುತ್ತಿದ್ದರು ಇದರಿಂದ ಅವರು ದೇವರು ಮೈ ಮೇಲೆ ಬರುತ್ತಿದ್ದಾರೆ, ಸತ್ತಿರುವವರು ಮೈ ಮೇಲೆ ಬರುತ್ತಿದ್ದಾರೆ ಎಂದು ಹೇಳುತ್ತಾರೆ. ಕೆಲವರು ತಮಗೆ ಪ್ರತ್ಯೇಕ ಸ್ಥಾನ ಸಿಗಬೇಕು ಅಂತ ಮಾನಸಿಕ ಕಾಯಿಲೆ ಇಲ್ಲದಿದ್ದರೂ ಕಲ್ಪನೆ ಮಾಡಿಕೊಂಡು ಎದುರಿಗಿರುವವರು ಗೌರವ ಕೊಡಬೇಕೆಂದು ವಿಚಿತ್ರವಾಗಿ ವರ್ತಿಸುತ್ತಾರೆ. ಒಟ್ಟಿನಲ್ಲಿ ನಮ್ಮ ದೇಹದಲ್ಲಿ ವೈಬ್ರೇಷನ್ ಬರುವುದು ನಿಜ ಅದು ನಮ್ಮ ದೇಹದಲ್ಲಿ ನಡೆಯುವ ವೈಜ್ಞಾನಿಕ ಪ್ರಕ್ರಿಯೆ. ಭಕ್ತಿ ಇದ್ದಾಗ ಸೌಂಡ್ ನಿಂದ ದೇಹದಲ್ಲಿ ವೈಬ್ರೇಷನ್ ಆಗುವುದು ಆದರೆ ಮೈಮೇಲೆ ದೇವರು ಅಥವಾ ದೆವ್ವ ಬರುವುದು ಸುಳ್ಳು. ಅವರು ವಿಚಿತ್ರವಾಗಿ ವರ್ತಿಸುವುದು ಅವರ ಮಾನಸಿಕ ಒತ್ತಡದಿಂದಾಗಿ ಅಥವಾ ಅವರ ನಟನೆಯಾಗಿರುತ್ತದೆ. ಈ ರೀತಿ ವಿಚಿತ್ರವಾಗಿ ವರ್ತಿಸಿ ಹಣ ಮಾಡುವವರು ಇರುತ್ತಾರೆ.ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Comment

error: Content is protected !!