ಜೀವನದಲ್ಲಿ ಸೋತವರಿಗೆ ಈ ಹೆಣ್ಣುಮಗಳ ಕಥೆ ಸ್ಪೂರ್ತಿದಾಯಕ.!

ಈ ಹಳ್ಳಿಮನೆ ಮೊಬೈಲ್ ಕ್ಯಾಂಟೀನ್ ನ ಮಾಲೀಕರಾದ ಶಿಲ್ಪ ಅವರು ಮೂಲತಃ ಹಾಸನದವರು. ಮದುವೆಯಾಗಿ ಕೆಲವು ದಿನಗಳಲ್ಲಿ ಇವರ ಗಂಡ ಅಚಾನಕ್ ಆಗಿ ಕಾಣೆ ಆಗುತ್ತಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಕೆಲಸ ಮಾಡಲು ಸಹಕರಿಸದ ಇವರ ಬೆರಳುಗಳು ಇವರನ್ನು ಕಂಗಾಲು ಮಾಡಿ ಮತ್ತಷ್ಟು ಕುಗ್ಗಿಸಿತ್ತು. ಇದರಿಂದಾಗಿ ಎದೆಷ್ಟೋ ಕರಾಳ ದಿನಗಳನ್ನು ಕಳೆದಿದ್ದಾರೆ ಆದರೂ ಛಲ ಬಿಡದೆ ಕೊನೆಗೆ ಪ್ರಾರಂಭಿಸಿದ್ದೇ “ಹಳ್ಳಿ ಮನೆ ರೊಟ್ಟಿ”.

ಇವರ ಜೀವನ ಯುದ್ಧದ ಸ್ಥಿತಿಯನ್ನು ಗಮನಿಸಿದ ಬೆಂಗಳೂರು ಮಿರರ್ ನ ದೀಪ್ತಿ ಎಂಬುವವರು ಶಿಲ್ಪಾ ಅವರ ಬಗ್ಗೆ ಹಾಗೂ ಅವರ ಕ್ಯಾಂಟೀನ್ ಬಗ್ಗೆ ಒಂದು ಲೇಖನ ಬರೀತಾರೆ ಇದರಿಂದಾಗಿ ಶಿಲ್ಪಾ ಅವರ ಬಗ್ಗೆ ಎಲ್ಲಾ ನ್ಯೂಸ್ ಪೇಪರ್ ಗಳಲ್ಲಿ ಮತ್ತು ಚಾನಲ್ ಗಳಲ್ಲಿ ಸುದ್ಧಿ ಹರಡಿತು.

ಟ್ವಿಟರ್ ನಲ್ಲಿ ಕೂಡ “ಹಳ್ಳಿಮನೆ ರೊಟ್ಟಿಯ ಶಿಲ್ಪಾ ಅವರ ಬಗ್ಗೆ ಬಹಳಷ್ಟು ಪ್ರಚಾರ ಆಯಿತು ಇದನ್ನ ಮಹೇಂದ್ರ ಕಂಪನಿಯ ಆನಂದ್ ಮಹೇಂದ್ರ ಅವರು ಗಮನಿಸಿ, ದೆಹಲಿಯಲ್ಲಿ ನಡೆಯುವ ಒಂದು ಕಾರ್ಯಕ್ರಮಕ್ಕೆ ಶಿಲ್ಪಾ ಅವರನ್ನು ಆಹ್ವಾನಿಸಿ ಮೊಬೈಲ್ ಕ್ಯಾಂಟೀನ್ ಗೆ ಬೇಕಾದಂತಹ ವ್ಯವಸ್ಥೆ ಮಾಡಿಕೊಟ್ಟು ಒಂದು ವಾಹನವನ್ನು ನೀಡಿದರು. ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದ ಶಿಲ್ಪಾ ಹಳ್ಳಿಮನೆ ರೊಟ್ಟಿ ಇಂದ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದರು.

ಹಳ್ಳಿಮನೆ ರೊಟ್ಟಿಯ ವಿಶೇಷ ಏನು ಅಂದ್ರೆ ಇಲ್ಲಿ ಎಲ್ಲ ರೊಟ್ಟಿಗಳನ್ನು ಎಣ್ಣೆ ಬಳಸದೆ ಕಾವಲಿಯ ಮೇಲೆ ತಯಾರಿಸುತ್ತಾರೆ. ಇಲ್ಲಿ ಅಕ್ಕಿ ರೊಟ್ಟಿ, ಜೋಳದ ರೊಟ್ಟಿ, ರಾಗಿ ರೊಟ್ಟಿ, ತಟ್ಟೆ ಇಡ್ಲಿ, ದೊನ್ನೆ ಬಿರ್ಯಾನಿ, ಚಿಕನ್ ಗ್ರೇವಿ, ರಾಗಿ ಮುದ್ದೆ ಬಸ್ಸಾರು, ಬಿಸಿಬೇಳೆ ಬಾತ್ ಇವು ಅಲ್ಲಿನ ವಿಶೇಷತೆಗಳು. ಶಿಲ್ಪಾ ಹಳ್ಳಿಮನೆ ರೊಟ್ಟಿ ಮೊಬೈಲ್ ಕ್ಯಾಂಟೀನ್ ಮೂಲಕ ಪ್ರಸಿದ್ಧಿ ಹೊಂದಿ ಜೀವನದಲ್ಲಿ ಗೆಲುವು ಸಾಧಿಸಿದ್ದಾರೆ.

Leave a Comment

error: Content is protected !!