ಮದುವೆ ಸಮಾರಂಭಗಳಿಗೆ ಸೀರೆಯಲ್ಲಿ ಮೇಕಪ್ ಮಾಡುವ ಸುಲಭ ವಿಧಾನ ಟ್ರೈ ಮಾಡಿ

ಪಾರ್ಟಿಗಳಿಗೆ ಎಲ್ಲರೂ ಹೋಗುತ್ತಾರೆ. ಕೆಲವರಿಗೆ ಅಷ್ಟೊಂದು ಚೆನ್ನಾಗಿ ತಯಾರಿ ಆಗುವ ಆಸಕ್ತಿ ಇರುವುದಿಲ್ಲ. ಆದರೆ ಕೆಲವರಿಗೆ ಮೇಕಪ್ ಮಾಡುವುದರಲ್ಲಿ ಆಸಕ್ತಿ ಬಹಳ. ಆದರೆ ಹೇಗೆ ಮೇಕಪ್ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ತಿಳಿದಿರುವುದಿಲ್ಲ. ಆದ್ದರಿಂದ ನಾವು ಇಲ್ಲಿ ಪಾರ್ಟಿಗೆ ಹೋಗುವಾಗ ಹೇಗೆ ಮೇಕಪ್ ಮಾಡಿಕೊಂಡು ಹೋಗಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲು ಮುಖಕ್ಕೆ ಪ್ರೈಮರ್ ಹಚ್ಚಬೇಕು. ಇದರಿಂದ ಮುಖಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಇದನ್ನು ಚೆನ್ನಾಗಿ ಹಚ್ಚಬೇಕು. ನಂತರ ಲಿಕ್ವಿಡ್ ಫೌಂಡೇಶನ್ ಹಚ್ಚಬೇಕು. ನಂತರ ಬ್ಯೂಟಿ ಬ್ಲಂಡರ್ ತೆಗೆದುಕೊಂಡು ಅದನ್ನು ಮುಖಕ್ಕೆ ಚೆನ್ನಾಗಿ ಸವರಬೇಕು. ಹಾಗೆಯೇ ಹೆಚ್ಚಾಗಿ ಕೆಲವರಿಗೆ ಕಣ್ಣಿನ ಕೆಳಗಡೆ ಕಪ್ಪು ವರ್ತುಲಗಳು ಇರುತ್ತವೆ. ಹಾಗಾಗಿ ಅಂತಹ ಜಾಗದಲ್ಲಿ ಕನ್ಸಿಲರ್ ಸ್ಟಿಕ್ ನ್ನು ಬಳಸಬೇಕು.

ಇದನ್ನು ಕಪ್ಪು ವರ್ತುಲಗಳು ಇದ್ದಲ್ಲಿ ಮಾತ್ರ ಹಚ್ಚಿದರೆ ಸಾಕಾಗುತ್ತದೆ. ನಂತರ ಲ್ಯಾಕ್ಮೇ ಅವರ ಕಾಂಪ್ಯಾಕ್ಟ್ ಪೌಡರ್ ತೆಗೆದುಕೊಳ್ಳಬೇಕು. ಅದನ್ನು ಮುಖಕ್ಕೆ ಹಚ್ಚಬೇಕು. ಫೌಂಡೇಶನ್ ಸ್ಟಿಕ್ ನ್ನು ಅವರವರ ಮುಖಕ್ಕೆ ಹೊಂದಾಣಿಕೆ ಆಗುವಂತೆ ತೆಗೆದುಕೊಳ್ಳಬೇಕು. ಹಾಗೆಯೇ ಅದನ್ನು ಹಚ್ಚಬೇಕು. ನಂತರ ಮೇಕಪ್ ಕಿಟ್ ತೆಗೆದುಕೊಂಡು ಅದರಲ್ಲಿ ತಿಳಿಗುಲಾಬಿ ಬಣ್ಣವನ್ನು ಹಚ್ಚಬೇಕು.

ನಂತರ ಕಣ್ಣಿಗೆ ಐಲೇನರ್ ಪೆನ್ಸಿಲ್ ನ್ನು ಹಚ್ಚಬೇಕು. ನಂತರ ಕಣ್ಣಿನ ರೆಪ್ಪೆಗೆ ಲ್ಯಾಕ್ಮೇ ಅವರ ಕರ್ಲಿಂಗ್ ಮಸ್ಕಾರಾ ಹಚ್ಚಬೇಕು. ಇದರಿಂದ ಕಣ್ಣು ಬಹಳ ಆಕರ್ಷಕವಾಗಿ ಕಾಣುತ್ತದೆ. ಹಾಗೆಯೇ ಕೊನೆಯದಾಗಿ ಲಿಫ್ ಸ್ಟಿಕ್ ಹಚ್ಚಬೇಕು. ಇದನ್ನು ಒಳ್ಳೆಯ ಕಂಪನಿಯದನ್ನೇ ಬಳಸಬೇಕು. ಹಾಗೆಯೇ ಇದರಲ್ಲಿ ಬಹಳಷ್ಟು ರೀತಿಯ ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಹಣೆಗೆ ಬಿಂದಿಗೆ ಹಚ್ಚಿದರೆ ಮೇಕಪ್ ಮುಗಿಯಿತು. ಹೀಗೆ ಮಾಡಿಕೊಂಡು ಪಾರ್ಟಿಗೆ ಹೋದರೆ ಎಲ್ಲರ ಮುಂದೆ ಬಹಳ ಆಕರ್ಷಕವಾಗಿ ಕಾಣಬಹುದು.

Leave A Reply

Your email address will not be published.

error: Content is protected !!