ಮೇಷ ರಾಶಿಯವರಿಗೆ ಅಕ್ಟೋಬರ್ ತಿಂಗಳು ಹೇಗಿರಲಿದೆ ನೋಡಿ

ಮೇಷ ರಾಶಿಯವರಿಗೆ ಅಕ್ಟೋಬರ್ ತಿಂಗಳಿನ ಭವಿಷ್ಯ ಹೇಗೆ ಇದೆ, ಸಮಸ್ಯೆಗಳಿದ್ದರೆ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ.

ಮೇಷ ರಾಶಿಯ, ರಾಶ್ಯಾಧಿಕಾರಿಯಾದ ಕುಜನು ರಾಶಿಯಲ್ಲಿ ಸ್ಥಿತನಾಗಿ , ಪರಮಶಿವನಾದ ಗುರು ಭಾಗ್ಯಸ್ಥನಾಗಿ ಅದನ್ನು ವೀಕ್ಷಿಸುತ್ತಿದ್ದಾನೆ. ನೈಸರ್ಗಿಕ ಶುಭನಾದ ಬುಧನು ಮೇಷ ರಾಶಿಯನ್ನು ವೀಕ್ಷಿಸುತ್ತಾನೆ ಇದರಿಂದ ಆರೋಗ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ ಆದರೆ ಅಷ್ಟಮ ಸ್ಥಾನದಲ್ಲಿ ಕೇತು ಇರುವುದರಿಂದ ಸ್ಕಿನ್ ಸಮಸ್ಯೆ, ಅಸಿಡಿಟಿ ಸಮಸ್ಯೆಗಳು ಕಂಡುಬರುತ್ತದೆ. ದ್ವಿತೀಯಾಧೀಶನಾದ ಶುಕ್ರನು ಪಂಚಮ ಭಾವದಲ್ಲಿದ್ದು ರಾಹು ಬಂದು ಸ್ಥಿತನಾಗುತ್ತಾನೆ ಇದರಿಂದ ಈ ರಾಶಿಯವರು ಒತ್ತಡಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ, ಹಾಗೂ ಮಾತನಾಡುವಾಗ ಯೋಚಿಸಿ ಮಾತನಾಡಬೇಕು ಇಲ್ಲದಿದ್ದರೆ ಸಂಘರ್ಷ ಉಂಟಾಗುತ್ತದೆ, ಸಾಂಸಾರಿಕ ಜೀವನದಲ್ಲಿ ವಿರಸ ಕಂಡುಬರುವ ಸಾಧ್ಯತೆ ಇರುತ್ತದೆ, ಸಣ್ಣ ಸಣ್ಣ ವಿಷಯಕ್ಕೆ ಜಗಳ ಸಂಭವಿಸಬಹುದು. ಮಂಗಳವಾರ ಸುಬ್ರಮಣ್ಯ ದೇವಸ್ಥಾನ ಹಾಗೂ ಗಣೇಶನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯುವುದರಿಂದ ಒಳ್ಳೆಯದಾಗುತ್ತದೆ. ತ್ರತೀಯಾಧೀಶ ಬುಧನು ಸಪ್ತಮದಲ್ಲಿದ್ದು ತ್ರತೀಯಕ್ಕೆ ಪರಮಶಿವನಾದ ಗುರುವಿನ ದೃಷ್ಟಿಯಿದೆ. ಸೋದರಿಕಾರಕ ಬುಧನು ಕೇಂದ್ರ ಸ್ಥಾನ ತುಲಾ ರಾಶಿಯಲ್ಲಿರುತ್ತಾನೆ. ಸೋದರಕಾರಕನಾದ ಕುಜನು ಲಗ್ನ ಸ್ಥಿತಿಯಲ್ಲಿರುತ್ತಾನೆ. ಆದ್ದರಿಂದ ಒಡಹುಟ್ಟಿದವರೊಂದಿಗೆ ಉತ್ತಮ ಸಂಬಂಧ ಇರುತ್ತದೆ. ಈ ರಾಶಿಯವರಿಗೆ ಕಾನೂನು ವಿವಾದಗಳಿದ್ದರೆ ಉತ್ತಮ ಫಲಿತಾಂಶ ಬರುತ್ತದೆ. ವಿದ್ಯಾರ್ಜನೆ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಸಕಾಲವಿದೆ. ಈ ರಾಶಿಯವರು ಪ್ರಾಪರ್ಟಿ ಖರೀದಿಸುವುದಿದ್ದರೆ ಈ ಸಮಯದಲ್ಲಿ ಖರೀದಿಸಬಹುದು ಪ್ರಯತ್ನ ಪಟ್ಟರೆ ಒಳ್ಳೆಯದಾಗುತ್ತದೆ.

ಈ ರಾಶಿಯವರು ಮಕ್ಕಳ ಯೋಗಕ್ಷೇಮ, ಮಕ್ಕಳಿಂದ ಪ್ರೀತಿ, ವಾತ್ಸಲ್ಯವನ್ನು ಪಡೆದುಕೊಳ್ಳುತ್ತಾರೆ. ಮೇಷ ರಾಶಿಯ ಉನ್ನತ ಶಿಕ್ಷಣ ಆಕಾಂಕ್ಷಿಗಳಿಗೆ ಈ ತಿಂಗಳು ಸಕಾಲವಾಗಿದೆ ಹಾಗೂ ಯಶಸ್ಸನ್ನು ಪಡೆಯುತ್ತಾರೆ. ಈ ರಾಶಿಯವರು ಕುಲದೀಪಕರಾದ ಸಂತಾನ ಪಡೆಯಲು ಗುರು, ಶುಕ್ರ, ರವಿ ಗ್ರಹಗಳು ಕಾರಣವಾಗುತ್ತವೆ. ಈ ರಾಶಿಯವರಿಗೆ ಶತ್ರುಗಳು ನಾಶವಾಗುತ್ತಾರೆ ಅವರು ಧಾಳಿ ಮಾಡುವುದಿಲ್ಲ ಹಾಗೂ ಉತ್ತಮರು ಸ್ನೇಹಿತರಾಗಿ ಸಿಗುತ್ತಾರೆ. ಈ ರಾಶಿಯವರಿಗೆ ನವೆಂಬರ 20 ರವರೆಗೆ ಗುರುಬಲವಿರುತ್ತದೆ. ಪೂರ್ಣ ಪ್ರಮಾಣದ ಗುರು ಅನುಗ್ರಹ ಪಡೆಯಲು 2021 ಏಪ್ರಿಲ್ 6ನೇ ತಾರೀಖವರೆಗೂ ಕಾಯಬೇಕು. ನಿಶ್ಚಯವಾಗಿದ್ದ ಮದುವೆ ಯಾವುದೇ ಸಂಕಷ್ಟವಿಲ್ಲದೆ ನಡೆಯುತ್ತದೆ. ತಾಯಿಯ ತಾಯಿ ಇಂತಹ ಹಿರಿಯರು ಅನಾರೋಗ್ಯಕ್ಕೆ ಒಳಗಾಗಿ ಸಾಕಷ್ಟು ನೋವನ್ನು ಅನುಭವಿಸಬೇಕಾಗುತ್ತದೆ. ವಯಕ್ತಿಕವಾಗಿ ಸಣ್ಣ ಪ್ರಮಾಣದ ಅನಾರೋಗ್ಯಕ್ಕೆ ಒಳಗಾಗಬಹುದು ಈ ರಾಶಿಯವರು ವಿಘ್ನೇಶ್ವರನನ್ನು ಆರಾಧಿಸಬೇಕು ಇದರಿಂದ ಕೇತುವಿನ ಕೆಟ್ಟ ಪ್ರಭಾವ ಕಡಿಮೆಯಾಗಬಹುದು. ಈ ರಾಶಿಯವರು ಈ ತಿಂಗಳು ಯಾವುದೇ ಭಾಗ್ಯವನ್ನು ನಿರೀಕ್ಷೆ ಮಾಡಬಹುದಾಗಿದೆ. ಶನಿ ಉತ್ತಮ ಸ್ಥಾನದಲ್ಲಿ ಇರುವುದರಿಂದ ಉದ್ಯೋಗ ವಿಷಯ ಉತ್ತಮವಾಗಿರುತ್ತದೆ. ಈ ರಾಶಿಯವರಿಗೆ ಸಂಪತ್ತು, ಒಡವೆ, ಲಾಭ ಬರುವ ಸಾಧ್ಯತೆಗಳಿವೆ. ಈ ತಿಂಗಳಿನಲ್ಲಿ ಒಳ್ಳೆ ಕೆಲಸಕ್ಕೆ ಧನ ವಿನಿಯೋಗ ಆಗುತ್ತದೆ ಹೊರತು ಕೆಟ್ಟ ಕೆಲಸಕ್ಕೆ ಧನ ವಿನಿಯೋಗ ಆಗುವುದಿಲ್ಲ. ಒಟ್ಟಿನಲ್ಲಿ ಮೇಷ ರಾಶಿಯವರಿಗೆ ಈ ತಿಂಗಳು ಉತ್ತಮವಾಗಿದೆ.

Leave A Reply

Your email address will not be published.

error: Content is protected !!