ಮಿಥುನ ರಾಶಿಯವರಿಗೆ 2021 ರಲ್ಲಿ ಹಲವು ಅವಕಾಶಗಳು ಕೈ ಬಿಸಿ ಕರೆಯುತ್ತವೆ? ಇವರ ಅದೃಷ್ಟ ಸಂಖ್ಯೆ ಹೀಗಿದೆ.!

ನಮ್ಮ ಭಾರತೀಯ ಪಂಚಾಂಗದಲ್ಲಿ ಒಟ್ಟಾರೆಯಾಗಿ ಹನ್ನೆರಡು ರಾಶಿಗಳು ಇವೆ. ಒಂದು ರಾಶಿಗೆ ಇಂತಹ ನಕ್ಷತ್ರ ಎಂದು ಜೋಡಿಸಲಾಗಿದೆ. ಆದ್ದರಿಂದ ಒಂದೊಂದು ರಾಶಿಗಳು ಬೇರೆ ಬೇರೆ ನಕ್ಷತ್ರಗಳನ್ನು ಹೊಂದಿರುತ್ತವೆ. ಹಾಗೆಯೇ ಒಂದೊಂದು ರಾಶಿಗಳು ಒಂದೊಂದು ರೀತಿಯ ಭವಿಷ್ಯವನ್ನು ಹೊಂದಿರುತ್ತವೆ. ನಾವು ಇಲ್ಲಿ 2021ರ ಮಿಥುನ ರಾಶಿಯ ಬಗ್ಗೆ ವರ್ಷದ ಭವಿಷ್ಯವನ್ನು ತಿಳಿಯೋಣ.

ಮಿಥುನ ರಾಶಿಯು ಹನ್ನೆರಡು ರಾಶಿಗಳಲ್ಲಿ ಒಂದು. ವರ್ಷಗಳು ಹೇಗೆ ಬದಲಾವಣೆ ಇರುತ್ತವೆಯೋ ಹಾಗೆಯೇ ಭವಿಷ್ಯಗಳು ಬದಲಾಗುತ್ತಾ ಹೋಗುತ್ತವೆ. ಮಿಥುನ ರಾಶಿಗೆ ಮೃಗಶಿರಾ ನಕ್ಷತ್ರ ಮೂರು ಮತ್ತು ನಾಲ್ಕನೇ ಪಾದ, ಆರ್ದ್ರಾ ನಕ್ಷತ್ರ, ಪುನರ್ವಸು ನಕ್ಷತ್ರ ಒಂದು ಮತ್ತು ಎರಡು ಮತ್ತು ಮೂರನೇ ಪಾದದವರದ್ದು ಬರುತ್ತದೆ. ಈ ರಾಶಿಯವರು ಯಾವಾಗಲೂ ಎತ್ತರದ ವಿಚಾರವನ್ನು ಯೋಚಿಸುತ್ತಿರುತ್ತಾರೆ. ಈ ಎತ್ತರವಾದ ಯೋಚನೆಯಿಂದ ಎತ್ತರಕ್ಕೆ ಬೆಳೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಇವರನ್ನು ಕೆಲವರು ಅಸಡ್ಡೆ ಮಾಡಿದ್ದಾರೆ. ಅಂತಹವರ ಜೊತೆ ನಯ ವಿನಯದಿಂದ ಮತ್ತೆ ಒಳ್ಳೆಯ ಸಂಬಂಧ ರೂಪುಗೊಳ್ಳಲಿದೆ.

ಈ ರಾಶಿಯವರು ಮಾಡುವ ಪ್ರಯತ್ನ, ಆಲೋಚನೆಗಳು ಸಕಾರಾತ್ಮಕವಾಗಿ ಯಶಸ್ಸನ್ನು ನೀಡುತ್ತವೆ. ಇವರ ಪ್ರಾಮಾಣಿಕತೆಯ ಫಲವಾಗಿ ಒಳ್ಳೆಯ ಸ್ನೇಹಿತರನ್ನು ಸಂಪಾದಿಸಿಕೊಳ್ಳುತ್ತಾರೆ. ಇನ್ನು ಮುಂದೆ ಬರುವ ಅದೃಷ್ಟ ಕಳೆದ ವರ್ಷಗಳ ಹಿಂದಿನಿಗಿಂತ ಹೆಚ್ಚಾಗಿ ಬರುತ್ತದೆ. ಬೇರೆಯವರ ತಪ್ಪನ್ನು ಹುಡುಕುವ ದೋಷವನ್ನು ದೂರ ಮಾಡಿಕೊಳ್ಳಬೇಕು. ಅಂದಿನ ಕೆಲಸವನ್ನು ಅಂದೇ ಮುಗಿಸುವ ಹಾಗೆ ನೋಡಿಕೊಳ್ಳಬೇಕು. ಏಕೆಂದರೆ ನಾಳೆ ಎಂದವನ ಮನೆ ಹಾಳು ಎಂಬ ಮಾತಿದೆ.

ಅಂದುಕೊಂಡ ಯೋಜನೆಗಳನ್ನು ಇನ್ನು ಮುಂದೆ ಪೂರೈಸಿಕೊಂಡರೆ ಒಳ್ಳೆಯದು. ಬೇರೆಯವರನ್ನು ಎಂತಹ ಪರಿಸ್ಥಿತಿ ಬಂದರೂ ಅವಮಾನಿಸಬೇಡಿ. ಹಾಗೆಯೇ ಹಿತಶತ್ರುಗಳಿಂದ ಸಾಧ್ಯವಾದಷ್ಟು ದೂರ ಇದ್ದರೆ ಬಹಳ ಒಳ್ಳೆಯದು. ಎಲ್ಲಾ ಕೆಲಸದಲ್ಲೂ ಧನಾತ್ಮಕ ಭಾವನೆಯಿಂದ ಇರುತ್ತೀರಿ. ಹಳೆಯ ವ್ಯಾಜ್ಯಗಳು ಇದ್ದರೆ ಪರಿಹಾರವಾಗುತ್ತವೆ. ಹಾಗೆಯೇ ಸದಾವಕಾಶಗಳು ಕೈ ಬೀಸಿ ಕರೆಯುತ್ತವೆ. ಪರೋಪಕಾರಾರ್ಥಮಿದಂ ಶರೀರಮ್ ಎನ್ನುವ ಹಾಗೆ ಮನದಣಿಯುವ ತನಕ ನೆರೆ ಹೊರೆಯವರಿಗೆ ಸಹಾಯ ಮಾಡುತ್ತಾರೆ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು. ಈ ರಾಶಿಯ ಶುಭಸಂಖ್ಯೆ 3, 5, 6. ಶುಭ ದಿನ ಬುಧವಾರ ಮತ್ತು ಗುರುವಾರ ಮತ್ತು ಶುಕ್ರವಾರ ಆಗಿದೆ. ಶುಭ ಬಣ್ಣ ಹಸಿರು ಮತ್ತು ಹಳದಿ ಆಗಿದೆ.

Leave A Reply

Your email address will not be published.

error: Content is protected !!