ರಕ್ತದೊತ್ತಡ, ಮಧುಮೇಹ ಮುಂತಾದ ಸಮಸ್ಯೆಗಳಿಗೆ ನುಗ್ಗೆ ಸೊಪ್ಪಿನಲ್ಲಿದೆ ಔಷಧಿ

ನುಗ್ಗೆ ಸೊಪ್ಪು ಮತ್ತು ನುಗ್ಗೆ ಕಾಯಿ ಎಲ್ಲರಿಗೂ ತಿಳಿದಿರುವ ಒಂದು ಬಗೆಯ ತರಕಾರಿ. ಆದರೆ ಇದು ತರಕಾರಿ ಅಷ್ಟೇ ಅಲ್ಲದೆ ನುಗ್ಗೆಕಾಯಿ ಅದರ ಸೊಪ್ಪು ಔಷಧೀಯ ಗುಣಗಳನ್ನು ಸಹ ಹೊಂದಿದೆ ಎಂಬುವುದು ಎಷ್ಟೋ ಜನರಿಗೆ ತಿಳಿಯದ ವಿಷಯ. ಹಾಗಾಗಿ ನುಗ್ಗೆಕಾಯಿ ಸೊಪ್ಪು ಹೂವು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಇವುಗಳಿಂದ ಆರೋಗ್ಯಕ್ಕೆ ಏನು ಲಾಭ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ

ತೆಂಗಿನ ಮರದಂತೆಯೇ ನುಗ್ಗೆ ಗಿಡದ ಪ್ರತಿಯೊಂದು ಭಾಗವೂ ಕೂಡ ಔಷಧೀಯ ಗುಣಗಳನ್ನು ಹೊಂದಿದ್ದು ಪ್ರಯೋಜನಕ್ಕೆ ಬರುತ್ತದೆ. ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ. ಮಧುಮೇಹಿಗಳಿಗೆ ಸಹ ನುಗ್ಗೆಸೊಪ್ಪನ್ನು ಔಷಧವಾಗಿ ಬಳಸಲಾಗುತ್ತದೆ.

ನುಗ್ಗೆಸೊಪ್ಪಿನ ತೊಗಟೇ ಹಲ್ಲುಗಳನ್ನು ವಸಡುಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ಅದರ ಹೂವು ದೇಹಕ್ಕೆ ಬೇಕಾದ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ. ಅಲ್ಲದೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ನುಗ್ಗೆ ಎಲೆಗಳ ಖಾದ್ಯಗಳನ್ನು ದಿನಕ್ಕೆರಡು ಬಾರಿಯಂತೆ ವಾರದಲ್ಲಿ ನಾಲ್ಕು ದಿನ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಇನ್ನು ಇದರಲ್ಲಿ ಸಕ್ಕರೆ ಅಂಶ ಇಲ್ಲದೆ ಇರುವುದರಿಂದ ಮಧುಮೇಹಿಗಳಿಗೆ ಉಪಯೋಗಕಾರಿ. ನುಗ್ಗೆ ಸೊಪ್ಪುಸಿಗುವಷ್ಟು ದಿನ ಅದರ ಖಾದ್ಯಗಳನ್ನು ಮಿತ ಪ್ರಮಾಣದಲ್ಲಿ ಸೇವಿಸಿದರೆ ಮಧುಮೇಹವನ್ನು ನಿಯಂತ್ರಿಸಬಹುದು. ಅಷ್ಟೇ ಅಲ್ಲದೆ ಅಧಿಕ ರಕ್ತದೊತ್ತಡಕ್ಕೆ ಸಹ ನುಗ್ಗೆಸೊಪ್ಪು ಸಹಕಾರಿ ಆಗಿದೆ.ಒಂದು ಮುಷ್ಟಿ ನುಗ್ಗೆ ಸೊಪ್ಪನ್ನು ಉಗುರು ಬೆಚ್ಚಗಿನ ನೀರಲ್ಲಿ ನೆನೆಸಿಟ್ಟು ನಂತರ ನೀರನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇನ್ನು ನುಗ್ಗೆ ಎಲೆಗಳಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿರುವುದರಿಂದ ಮೂಳೆಗಳ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ ಅಲ್ಲದೆ ಮೂಳೆಗಳ ಸವೆತವನ್ನು ತಡೆಯುತ್ತದೆ.

ನುಗ್ಗೆ ಎಲೆಗಳಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ಕೆಂಪುರಕ್ತಕಣಗಳು ಹೆಚ್ಚಾಗಲು ಸಹಾಯ ಮಾಡುತ್ತದೆಗರ್ಭಿಣಿ ಸ್ತ್ರೀಯರು ಮತ್ತು ಬಾಣಂತಿಯರಿಗೆ ಎದೆಹಾಲು ಹೆಚ್ಚಿಸುವ ಸಲುವಾಗಿ ನುಗ್ಗೆ ಸೊಪ್ಪಿನ ರಸವನ್ನು ನೀಡುತ್ತಾರೆ. ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಗೆ ಸಹಾಯಕಾರಿ ಮತ್ತು ಜೀರ್ಣಕ್ರಿಯೆಗೆ ಸಹಕಾರಿ ಆಗುತ್ತದೆ. ನುಗ್ಗೆ ಸೊಪ್ಪಿನ ರಸವನ್ನು ಎಳನೀರಿನ ಜೊತೆ ಸೇರಿಸಿ ಕುಡಿಯುವುದರಿಂದ ಅತಿಸಾರವನ್ನು ನಿಯಂತ್ರಿಸುತ್ತದೆ.

ಚರ್ಮದ ರಂದ್ರದ ಕೊಳೆಯನ್ನು ತೆಗೆದು ಮುಖ ಕಾಂತಿಯುತವಾಗಿ ಹೊಳೆಯುವಂತೆ ಸಹಾಯಮಾಡುತ್ತದೆ. ದಿನನಿತ್ಯದ ಆಹಾರದಲ್ಲಿ ನುಗ್ಗೆ ಸೊಪ್ಪನ್ನು ಬಳಸುವುದರಿಂದ ದೇಹದಲ್ಲಿ ಕಲ್ಮಶಗಳನ್ನು ಹೊರಹಾಕಲು ಸಹಕಾರಿಯಾಗುತ್ತದೆ. ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಇ ಇರುವುದರಿಂದ ಮೆದುಳಿನ ಸವೆತವನ್ನು ತಡೆಗಟ್ಟಿ ಮೆದುಳಿನ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ. ಅಧಿಕ ಕೊಬ್ಬನ್ನು ತಡೆಗಟ್ಟುತ್ತದೆ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಇವು ನಾವು ಅಡುಗೆಗೆ ಬಳಸುವ ನುಗ್ಗೆ ಕಾಯಿ ಮತ್ತು ಅದರ ಸೊಪ್ಪಿನ ಉಪಯೋಗಗಳು. ಇದನ್ನು ಬಳಸಿಕೊಂಡು ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳೋಣ

Leave A Reply

Your email address will not be published.

error: Content is protected !!