6 ವರ್ಷಗಳ ನಂತರ ಒಂದಾದ ತಾಯಿ ಮಗ. ಅದೆಂಗೆ ಗೊತ್ತಾ? ಇಲ್ಲಿದೆ ನೋಡಿ ತಾಯಿ ಮಗನ ಇಂಟರೆಸ್ಟಿಂಗ್ ಸ್ಟೋರಿ

ಸ್ವಂತ ಅಮ್ಮ – ಮಗ ದೂರವಾಗುವುದು ಹಲವು ವರ್ಷಗಳ ನಂತರ ಒಂದಾಗೋದು ಇಂಥ ಘಟನೆಗಳು ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕಾಣ ಸಿಗುತ್ತವೆ. ಆದರೆ ಇದೀಗ ಇಂತಹದ್ದೊಂದು ನೈಜ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಾರ್ವತಮ್ಮ ಎಂಬ ಮಹಿಳೆ ತರಕಾರಿಯನ್ನು ಮಾರಿ ಜೀವನ ಸಾಗಿಸುತ್ತಿದ್ದಳು. ಈಕೆಗೆ ಭರತ್ ಎಂಬ 12 ವರ್ಷದ ಮಗನಿದ್ದ. ಈ ಮಗನಿಗೆ ಮಾತು ಬರುತ್ತಿರಲಿಲ್ಲ ಮೂಗನಾಗಿದ್ದ. ಹಾಗೆ ಕಿವಿ ಕೇಳಿಸುತ್ತಿರಲಿಲ್ಲ.

ಪಾರ್ವತಮ್ಮನವರ ಜೊತೆ ಭರತ್ ಪ್ರತಿದಿನ ತರಕಾರಿ ಮಾರಲು ಜೊತೆಗೆ ಹೋಗುತ್ತಿದ್ದ. ಒಂದು ದಿನ ತರಕಾರಿ ಸಂತೆಯಲ್ಲಿ ಭರತ್ ಕಾಣೆಯಾಗುತ್ತಾನೆ. ಗಾಬರಿಯಾದ ಪಾರ್ವತಮ್ಮ ತನ್ನ ಮಗನನ್ನು ಯಾರೋ ಕಿ ಡ್ನಾಪ್ ಮಾಡಿದ್ದಾರೆ ಎಂದು ಅಂದುಕೊಳ್ಳುತ್ತಾಳೆ. ನಂತರ ತಕ್ಷಣ ಯಲಹಂಕ ಪೊಲೀಸ್ ಠಾಣೆಗೆ ಹೋಗಿ ದೂರು ಕೂಡ ದಾಖಲು ಮಾಡಿದ್ದಾಳೆ. ಮಾತು ಬರದ ಮಗು ಕಾಣೆಯಾಗಿತ್ತು ಪಾರ್ವತಮ್ಮ ಗೆ ದೊಡ್ಡ ಶಾಕ್ ಆಗುತ್ತೆ ಕೈಕಾಲು ಆಡುವುದಿಲ್ಲ

ಭರತ್ ಕಳೆದುಹೋಗಿತ್ತು 2016 ರಲ್ಲಿ. ತದನಂತರ ಸತತ 6 ವರ್ಷಗಳ ಕಾಲ ಪಾರ್ವತಮ್ಮ ತನ್ನ ಮಗನನ್ನು ಪ್ರತಿದಿನ ಹುಡುಕಾಡಿದ್ದಾರೆ. ಆದರೆ ತನ್ನ ಮಗನ ಪತ್ತೆ ಸಿಗಲಿಲ್ಲ. ಇದೀಗ ವರ್ಷಗಳು ಕಳೆದ ನಂತರ 2022 ರಲ್ಲಿ ತಾಯಿಯನ್ನು ಹುಡುಕಿಕೊಂಡು ಮಗ ಬಂದಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ. 6 ವರ್ಷಗಳ ನಂತರ ಭರತ್ ಗೆ ಪಾರ್ವತಮ್ಮ ಇರುವ ಜಾಗ ಗೊತ್ತಾಗಿದ್ದು ಹೇಗೆ ? ಇಷ್ಟು ವರ್ಷ ಭರತ್ ಏನು ಮಾಡುತ್ತಿದ್ದ? ಎನ್ನುವುದು ನಮಗೆ ಕಾಡುವ ಪ್ರಶ್ನೆ.

ಯಲಹಂಕದ ತರಕಾರಿ ಸಂತೆಯಿಂದ ಕಳೆದುಹೋಗಿದ್ದ 12 ವರ್ಷದ ಬಾಲಕ ಭರತ್ ಮಹಾರಾಷ್ಟ್ರದ ನಾಗ್ಪುರಕ್ಕೆ ಹೋಗಿ ಸೇರಿದ್ದ. ಕಳೆದು ಹೋಗಿರುವ ಭರತ್ ನನ್ನು ನಾಗ್ಪುರದ ಪೊಲೀಸರು ಅಲ್ಲಿನ ಕೇಂದ್ರ ಸರ್ಕಾರದ ರೈಲ್ವೆ ಡಿಪಾರ್ಟ್ ಮೆಂಟ್ ನ ಹಾಸ್ಟೆಲ್ ಗೆ ಸೇರಿಸುತ್ತಾರೆ. ಮಾತು ಬಾರದ ಕಿವಿ ಕೇಳಿಸದ ಭರತ್ ಅನಾಥ ಮಗು ಎಂದು ಹಾಸ್ಟೆಲ್ ನ ವಾರ್ಡನ್ ಅಂದುಕೊಳ್ಳುತ್ತಾನೆ. ಈ ಕಡೆ ಪಾರ್ವತಮ್ಮ ಪೇಪರ್ ನಲ್ಲಿ ಟಿವಿಯಲ್ಲಿ ತನ್ನ ಮಗ ಕಳೆದು ಹೋಗಿದ್ದಾನೆ ಎಂಬ ಸುದ್ದಿಯನ್ನೂ ಇದ್ದರೂ ಸಹ ಒಂದು ಚಿಕ್ಕ ಮಾಹಿತಿ ಕೂಡ ಸಿಗುವುದಿಲ್ಲ.

ತದನಂತರ ಒಂದು ದಿನ ಭರತ್ ನ ಹಾಸ್ಟೆಲ್ ವಾರ್ಡನ್ ಭರತ್ ಗೆ ಹೊಸ ಆಧಾರ್ ಕಾರ್ಡ್ ಮಾಡಿಸಲು ಹೋಗುತ್ತಾನೆ. ಆಗ ಭರತ್ ಗೆ ಹೊಸ ಆಧಾರ್ ಕಾರ್ಡ್ ಮಾಡಿಸಲು ಸಾಧ್ಯವಿಲ್ಲ ಎಂದು ತಿಳಿಯುತ್ತದೆ ಯಾಕೆಂದರೆ ಬರಕ್ಕೆ ಅದಾಗಲೇ ಪಾರ್ವತಮ್ಮ ಆಧಾರ್ ಕಾರ್ಡನ್ನು ಮಾಡಿಸಿ ಇಟ್ಟಿದ್ದಳು. ಆಗ ಹಾಸ್ಟೆಲ್ ವಾರ್ಡನ್ ತಕ್ಷಣ ಹಳೇ ಆಧಾರ್ ಕಾರ್ಡ್ ನಲ್ಲಿದ್ದ ವಿಳಾಸವನ್ನು ತಿಳಿದುಕೊಳ್ಳುತ್ತಾನೆ. ತದನಂತರ ಹಾಸ್ಟೆಲ್ ವಾರ್ಡನ್ ಬೆಂಗಳೂರು ಪೊಲೀಸ್ ರಿಗೆ ಈ ಮಾಹಿತಿಯನ್ನು ತಿಳಿಸುತ್ತಾನೆ.

ತದನಂತರ ಪೊಲೀಸರು ಭರತ್ ಮತ್ತು ಆತನನ್ನು ಅಮ್ಮನನ್ನು ಒಂದು ಮಾಡುವ ಕೆಲಸವನ್ನು ಮಾಡಿದ್ದಾರೆ. 6 ವರ್ಷಗಳ ಬಳಿಕ ತನ್ನ ಮಗನನ್ನು ನೋಡಿದ ತಾಯಿಗೆ ಮಾತುಗಳೇ ಮರದಿಂದ ಕಣ್ಣಿನಲ್ಲಿ ಆನಂದ ಬಾಷ್ಪವು ತುಂಬಿತ್ತು ಮಗನನ್ನು ಅಪ್ಪಿಕೊಂಡು ಪಾರ್ವತಮ್ಮ ಅತ್ತು ಬಿಟ್ಟಿದ್ದಾಳೆ. ನೋಡಿ ಗೆಳೆಯರೇ ಆಧುನಿಕ ಮತ್ತು ಡಿಜಿಟಲ್ ತಂತ್ರಜ್ಞಾನವಾದ ಆಧಾರ್ ಕಾರ್ಡ್ ನಿಂದ ಇಂದು ತಾಯಿ ಮತ್ತು ಮಗನ ಸಂಬಂಧ ಮತ್ತೆ ಒಂದಾಗುವ ಕಾಲ ಬಂದಿರುವುದು ನಿಜಕ್ಕೂ ಅದ್ಭುತ ಮತ್ತು ಖುಷಿ ತರುವ ವಿಚಾರ.

Leave A Reply

Your email address will not be published.

error: Content is protected !!