
ತಂದೆ ತಾಯಿ ಜೊತೆ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತೀದ ಹುಡುಗ ಇಂದು ಕೋಟಿ ಆದಾಯ ಗಳಿಸುತ್ತಿರುವ ದೊಡ್ಡ ಬಿಸಿನೆಸ್ ಮ್ಯಾನ್ ಆಗಿದ್ದು ಹೇಗೆ ಗೊತ್ತೇ
ನಮಗೆ ಯಾವಗ್ಲೋ ಥಟ್ ಅಂತ ಹೊಳೆಯುವ ಐಡಿಯಾ ಹೇಗೆ ನಮ್ಮ ಜೀವನವನ್ನು ಬದಲಿಸುತ್ತದೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ ಇವರು.ಅದು ಹೇಗೆ ಅಂತಾ ತಿಳಿಯೋಣ. ಕೇರಳದ ಒಂದು ಕುಗ್ರಾಮದಲ್ಲಿ ಜನಿಸಿದ ಹುಡುಗ ಮುಸ್ತಫಾ.ಅವರ ಊರಿಗೆ ಸರಿಯಾದ ನೀರು,ರಸ್ತೆ ಇರಲಿಲ್ಲ. ಇವರ ಊರಲ್ಲಿ ಕೇವಲ ಐದನೇ ತರಗತಿಯವರೆಗೆ ಶಾಲೆ ಇದ್ದ ಕಾರಣ.ಹೈಸ್ಕೂಲ್ ಓದಲು 6 ಕಿ.ಮೀ ನಡೆದುಕೊಂಡು ಹೋಗುತ್ತಿದ್ದರು.
ಮುಸ್ತಫಾ ಅವರ ತಂದೆ ತಾಯಿ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅವರ ಜೊತೆ ಕೆಲಸಕ್ಕೆ ಹೋಗುತ್ತಿದ್ದ ಮುಸ್ತಫಾ 6 ನೇ ತರಗತಿಯಲ್ಲಿ ಫೇಲ್ ಆಗಿ ಮನೆಯಲ್ಲಿ ಇದ್ದರು. ನಂತರ ಒಬ್ಬ ಒಳ್ಳೆಯ ಶಿಕ್ಷಕರ ಕಣ್ಣಿಗೆ ಬಿದ್ದ ಮುಸ್ತಫಾ. ಆ ಶಿಕ್ಷಕ ಇತನನ್ನು ಮನೆಗೆ ಕರೆಸಿಕೊಂಡು ಪಾಠ ಹೇಳಿಕೊಡುತ್ತಿದ್ದರು. ಇದರಿಂದ ಮುಸ್ತಫಾ ಹತ್ತನೆಯ ತರಗತಿಯಲ್ಲಿ ಒಳ್ಳೆಯ ಅಂಕ ಪಡೆದರು.
ನಂತರ ಹೇಗೋ ಕಷ್ಟಪಟ್ಟು ಇಂಜಿನಿಯರಿಂಗ್ ಮುಗಿಸಿದ ಮುಸ್ತಫಾಗೆ ಅಮೇರಿಕದಲ್ಲಿ ಉದ್ಯೋಗ ದೊರೆಯಿತು. ಸುಮಾರು ಐದು ವರ್ಷ ಕೆಲಸ ಮಾಡಿ ತಂದೆ ತಾಯಿಯನ್ನು ಬಿಟ್ಟಿರದೆ ಊರಿಗೆ ವಾಪಸ್ಸು ಬಂದು ಕೆಲಸಕ್ಕಾಗಿ ಹುಡುಕಾಡುತ್ತಿದ್ದರು ಆದರೆ ಎಲ್ಲೂ ಕೆಲಸ ಸಿಗಲಿಲ್ಲ.
ಕೆಲಸವಿಲ್ಲದೆ ಮನೆಯಲ್ಲಿದ್ದ ಮುಸ್ತಫಾ. ಒಂದು ದಿನ ತನ್ನ ಮಾವನ ಮನೆಗೆ ಹೋದರು. ಅವರ ಮಾವ ಪಕ್ಕದಲ್ಲಿದ್ದ ಶಾಪ್ ಗೆ ಹೋಗಿ ದೋಸೆ ಹಿಟ್ಟಿನ ಪ್ಯಾಕೆಟ್ ತಂದು ದೋಸೆ ಹಾಕಿ ಕೊಟ್ಟರು. ಆಗ ಥಟ್ ನೇ ಮುಸ್ತಫಾಗೆ ಒಂದು ಪ್ಲ್ಯಾನ್ ಹೊಳೆಯಿತು. ಆ ಪ್ಲ್ಯಾನ್ ಏನು ಅಂದ್ರೆ ನಾನ್ಯಾಕೆ ದೋಸೆ ಹಾಗೂ ಇಡ್ಲಿ ಹಿಟ್ಟನ್ನು ತಯಾರಿಸಿ ಸೇಲ್ ಮಾಡಬಾರದು ಅಂತ ಮುಸ್ತಫಾಗೆ ಅನಿಸಿದ್ದೆ ತಡ ತನ್ನ ಸಂಬಂಧಿಕರನ್ನ ಜೊತೆಗೆ ಹಾಕಿಕೊಂಡು 25,000 ಇನ್ ವೇಸ್ಟ್ ಮಾಡಿ ಐಡಿ ಅನ್ನೊ ಕಂಪನಿ ಹೆಸರಲ್ಲಿ ದೋಸೆ ಮತ್ತು ಇಡ್ಲಿ ಹಿಟ್ಟು ಮಾಡಲು ಶುರು ಮಾಡಿದರು.
ಐಡಿ(ID) ಅಂದರೆ ಇಡ್ಲಿ ಹಾಗೂ ದೋಸೆ ಎಂದು ಅರ್ಥ. ಟಾರ್ಗೆಟ್ ಇಟ್ಟುಕೊಂಡು ಅದನ್ನು ಸಾಧಿಸಲು ಕಷ್ಟಪಟ್ಟ ಮುಸ್ತಫಾ ಈಗ 10 ಸಾವಿರ ಸ್ಟೋರ್ ಗಳಿಗೆ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಸಪ್ಲೈ ಮಾಡುತ್ತಿದ್ದು, ಸುಮಾರು ಒಂದು ಸಾವಿರ ಜನರಿಗೆ ಕೆಲಸ ಕೊಟ್ಟಿದ್ದಾರೆ.

ಮೊದಲ ವರ್ಷ 100 ಕೋಟಿ ಬಿಸಿನೆಸ್ ಮಾಡಿದ ಮುಸ್ತಫಾ 2010 ರಲ್ಲಿ 400 ಕೋಟಿ ಬಿಸಿನೆಸ್ ಮಾಡಿ, ಈಗ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ. ಒಂದು ಚಿಕ್ಕ ಐಡಿಯಾವನ್ನು ಬಳಸಿಕೊಂಡು ಈಗ ದೊಡ್ಡ ಉದ್ಯಮಿಯಾಗಿ ಬೆಳೆದಿರುವ ಮುಸ್ತಫಾ ಅವರ ಪರಿಶ್ರಮ ಇತರರಿಗೆ ಮಾದರಿ.