ನರೇಶ್ ಬಾಬು ಪತ್ನಿ ರಮ್ಯಾ ರಘುಪತಿ ಮತ್ತು ಪ್ರಶಾಂತ್ ನೀಲ್ ಇಬ್ಬರು ಸಂಬಂಧಿಕರು. ಹೇಗೆ ಎಂಬ ಸತ್ಯ ಇಲ್ಲಿದೆ ನೋಡಿ

ನರೇಶ್ ಬಾಬು ಪತ್ನಿ ರಮ್ಯಾ ರಘುಪತಿ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸಂಬಂಧಿಕರೇ; ಇಲ್ಲಿದೆ ಉತ್ತರ. ಹಿರಿಯ ಪೋಷಕ ನಟಿಯಾಗಿರುವ ಪವಿತ್ರ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಬಾಬು ಇಬ್ಬರೂ ಸಂಬಂಧ ಹೊಂದಿದ್ದಾರೆ ಸದ್ಯದಲ್ಲೇ ಮದುವೆಯಾಗುತ್ತಾರೆ ಎನ್ನುವ ವಿಷಯ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಈ ನಡುವೆ ಇಂದು ಮೈಸೂರಿನಲ್ಲಿ ರಮ್ಯಾ ರಘುಪತಿ ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ.

ತೆಲುಗು ನಟ ನರೇಶ್ ಬಾಬು ಹಾಗೂ ಪವಿತ್ರ ಲೋಕೇಶ್ ಇಬ್ಬರು ತಾವು ಉತ್ತಮ ಸ್ನೇಹಿತರು ಎಂದೇ ಹೇಳಿಕೊಂಡು ಬಂದಿದ್ದಾರೆ. ತನ್ನ ಮಾನಸಿಕ ಸ್ಥಿತಿ ಹದಕ್ಕೆಟ್ಟಾಗ ಪವಿತ್ರ ಲೋಕೇಶ್ ತನಗೆ ಗೈಡ್ ಆಗಿದ್ದರು ಎಂದು ನರೇಶ್ ಹೇಳಿದರು. ನರೇಶ್ ಹಾಗೂ ಪವಿತ್ರ ಲೋಕೇಶ್ ಕಳೆದ ಐದಾರು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಾ ಇದ್ದವರು. ಇದೀಗ ನರೇಶ್ ಇದ್ದಕ್ಕಿದ್ದ ಹಾಗೆ ತನ್ನ ಮೂರನೆಯ ಪತ್ನಿ ರಮ್ಯಾ ರಘುಪತಿ ಅವರಿಗೆ ಡೈವೋರ್ಸ್ ನೋಟಿಸ್ ಕಳಿಸಿದ್ದಾರೆ. ರಮ್ಯಾ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ನರೇಶ್ ಬಾಬು ಹಾಗೂ ಪವಿತ್ರ ಲೋಕೇಶ್ ಮೇಲೆ ಕಿಡಿಕಾರ್ ಇದ್ದಾರೆ.

ಮೀಡಿಯಾದ ಎದುರು ನರೇಶ್ ಅವರು ಹತ್ತು ವರ್ಷ ಗಳಿಂದ ಹೀಗೆ ಬೇರೆ ಬೇರೆ ಹೆಂಗಸರ ಜೊತೆ ಸಂಬಂಧ ಇಟ್ಟುಕೊಂಡಿದ್ದರು. ಆದರೆ ನಾನು ನನ್ನ ಸಂಸಾರ ಸರಿ ಹೋಗುತ್ತೆ ಎಂದು ಸುಮ್ಮನಿದ್ದೆ ಆದರೆ ಈಗ ಪವಿತ್ರ ಲೋಕೇಶ್ ತನ್ನ ಜೀವನದಲ್ಲಿ ಅಡ್ಡಗಾಲಾಗಿದ್ದಾರೆ ಎಂದು ರಮ್ಯಾ ಹೇಳಿಕೊಂಡಿದ್ದರು. ಅಲ್ಲದೆ ತಾನು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇನೆ, ನರೇಶ್ ಅವರ ಅಧಿಕೃತ ಪತ್ನಿ ಆಗಿರುವ ನಾನು ಯಾವುದೇ ಕಾರಣಕ್ಕೂ ಈ ವಿಚ್ಛೇದನವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಮೀಡಿಯಾ ಮುಂದೆ ಬಂದು ಇಷ್ಟೆಲ್ಲಾ, ವಿರೋಧಗಳನ್ನು ಆಕ್ರೋಶವನ್ನು ಹೊರ ಹಾಕಿರುವ ಈ ರಮ್ಯಾ ನಿಜವಾಗಿ ಯಾರು ಗೊತ್ತಾ? ರಮ್ಯಾ ರಘುಪತಿ ಕೂಡ ಪ್ರತಿಷ್ಠಿತ ಕುಟುಂಬದಿಂದ ಬಂದಿರುವವರು. ಮಾಜಿ ಸಚಿವ ರಘುವೀರ್ ರೆಡ್ಡಿ ಅವರ ಸಹೋದರನ ಮಗಳು ರಮ್ಯಾ ರಘುಪತಿ. 2010ರಲ್ಲಿ ರಮ್ಯಾ ರಘುಪತಿ ನರೇಶ್ ಅವರ ಮೂರನೇ ಪತ್ನಿಯಾಗಿ ವಿವಾಹವಾಗಿದ್ದಾರೆ.

ಇನ್ನು ಖ್ಯಾತ ನಾಯಕ ರಘುವೀರ್ ರೆಡ್ಡಿ ಹಾಗೂ ರಮ್ಯಾ ಅವರ ತಂದೆ ರಘುಪತಿ ಸಹೋದರರು. ಈ ನಡುವೆ ರಮ್ಯಾ ರಘುಪತಿ ಪ್ರಶಾಂತ್ ನೀಲ್ ಅವರ ಸಂಬಂಧಿ ಎಂದು ಕೂಡ ಹೇಳಲಾಗುತ್ತಿದೆ. ಕೆಜಿಎಫ್ ನಂತಹ ಹಿಟ್ ಸಿನಿಮಾವನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಪ್ರಶಾಂತ ರಮ್ಯಾ ರಘುಪತಿ ಅವರ ಅಣ್ಣನಾಗಬೇಕಂತೆ. ರಮ್ಯಾ ರಘುಪತಿ ಕೂಡ ಅನುಕೂಲಸ್ಥ ಕುಟುಂಬದಿಂದ ಬಂದವರಾಗಿದ್ದು, ಆಗರ್ಭ ಶ್ರೀಮಂತರಾದ ನಟ ನರೇಶ್ ಬಾಬು ಅವರನ್ನ ಮದುವೆಯಾಗಿದ್ದರು. ಆದರೆ ಇವರ ನಡುವೆ ಪವಿತ್ರ ಲೋಕೇಶ್ ಅವರ ಆಗಮನದಿಂದ ಸಂಸಾರದಲ್ಲಿ ಕಲಹ ಏರ್ಪಟ್ಟಿದೆ ಎಂದು ಹೇಳಲಾಗುತ್ತಿದೆ.

Leave a Comment

error: Content is protected !!