ಯಮಯಾತನೆ ನೀಡುವ ಕುರದ ನೋವಿಗೆ ಪರಿಹಾರ ನೀಡುವ ಮನೆಮದ್ದು

ಕುರದ ನೋವು ಅನ್ನೋದು ಸಾಮಾನ್ಯವಾಗಿ ಕೆಲವರಲ್ಲಿ ಕಾಣಿಸಿಕೊಳ್ಳುವಂತ ನೋವಾಗಿದೆ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳದೆ ಇದ್ರೆ ಯಮಯಾತನೆ ನೀಡುತ್ತದೆ, ಅಷ್ಟೊಂದು ನೋವು ಉಂಟ್ ಮಾಡುವಂತ ಈ ಕುರದ ನೋವಿಗೆ ಒಂದಿಷ್ಟು ಸೂಕ್ತ ಪರಿಹಾರ ನೀಡುವಂತ ಮನೆಮದ್ದುಗಳನ್ನು ಈ ಮೂಲಕ ತಿಳಿದುಕೊಳ್ಳೋಣ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

ಕುರ ಅಂದ್ರೆ ಸಾಮಾನ್ಯವಾಗಿ ಗೊತ್ತಿರುತ್ತದೆ ಅನಿಸುತ್ತದೆ ಇದಕ್ಕೆ ಪರಿಹಾರ ಮಾರ್ಗ ಯಾವುದು ಅನ್ನೋದಾದರೆ ಎರಡು ಮೂರೂ ದಿವಸ ಪ್ರತಿ ದಿನ ಖಾಲಿ ಹೊಟ್ಟೆಗೆ ತುಪ್ಪ ಮತ್ತು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ತಿಂದರೆ ಕುರ ಕಡಿಮೆ ಆಗುತ್ತೆ. ಇನ್ನು ಆಹಾರ ಕ್ರಮಗಳಲ್ಲಿ ಬಲೇ ದಿಂಡಿನ ಪಲ್ಯ ಮಾಡಿ ತಿನ್ನಬೇಕು ಇದರಿಂದ ಕುರ ಬೇಗನೆ ಶಮವಾಗುತ್ತದೆ.

ಅಷ್ಟೇ ಅಲ್ದೆ ವಿಳ್ಳೇದೆಲೆ ಅನ್ನೋದು ನೂರೆಂಟು ಸಮಸ್ಯೆಗಳಿಗೆ ಪರಿಹಾರ ನೀಡುವ ಅದ್ಬುತ ಔಷಧಿ ಗುಣಗಳನ್ನು ಹೊಂದಿರುವಂತ ಎಲೆಯಾಗಿದೆ ಇದರಲ್ಲಿ ಕುರದ ನೋವಿಗೆ ಪರಿಹಾರವಿದೆ. ಹೌದು ವೀಳ್ಯದೆಲೆಯನ್ನು ಸ್ವಲ್ಪ ಬಿಸಿ ಮಾಡಿ ಕುರ ಎದ್ದಿರುವಂತ ಜಾಗಕ್ಕೆ ಕಟ್ಟಿದರೆ ಕುರ ಕಡಿಮೆಯಾಗಿತ್ತದೆ.

ಬೇವಿನ ಎಲೆಯ ರಸ ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ, ನಂತರ ಅದನ್ನು ಕುರ ಇರುವಂತ ಜಾಗಕ್ಕೆ ಲೇಪಿಸಿದರೆ ಕುರ ಇಲ್ಲದಂತೆ ಆಗುವುದು. ನೀರನ್ನು ಒಲೆಯ ಮೇಲಿಟ್ಟು ಅದು ಕುದಿಯುವಾಗ ಅದಕ್ಕೆ ರಾಗಿಹಿಟ್ಟು, ಮೆಂತೆಯ ಕಾಳಿನ ಹಿಟ್ಟು ಮತ್ತು ಅರಿಶಿನ ಸೇರಿಸಿ ಕಲೆಸಿ ಅದು ಗಟ್ಟಿಯಾದ ಕೂಡಲೇ ಅದನ್ನು ಬಟ್ಟೆಯ ಮೇಲೆ ಸವರಿ ಸ್ವಲ್ಪ ಬಿಸಿಯಾಗಿರುವಾಗ ಕುರ ಎದ್ದಿರುವಂತ ಜಾಗಕ್ಕೆ ಹಚ್ಚಿದರೆ ಕುರ ನಿವಾರಣೆಯಾಗುವುದು.

Leave a Comment

error: Content is protected !!