ಹೊಸ ಅವತಾರದಲ್ಲಿ ಬಿಗ್ ಬಾಸ್ ಸುದೀಪ್

ಕನ್ನಡ ಕಿರುತೆರೆ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿರುವ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟಕ್ಕೆ ದಿನಗಣನೆ ಪ್ರಾರಂಭವಾಗಿದೆ. ಇದೇ ತಿಂಗಳ ಕೊನೆಯಲ್ಲಿ ಅಂದರೆ ಫೆಬ್ರವರಿ ಇಪ್ಪತ್ತೆಂಟಕ್ಕೆ ಬಿಗ್ ಬಾಸ್ ಕನ್ನಡ ಗ್ರ್ಯಾಂಡ್ ಓಪನ್ ಆಗಲಿದೆ. ಈಗಾಗಲೇ ಬಿಗ್ ಬಾಸ್ ಗೆ ಯಾರೆಲ್ಲ ಹೋಗ್ತಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ನಡುವೆ ದುಬೈನಿಂದ ಬೆಂಗಳೂರಿಗೆ ಬರ್ತಿದ್ದಂತೆ ಕಿಚ್ಚ ಸುದೀಪ್ ತಮ್ಮ ಗೆಟಪ್ ಬದಲಾಯಿಸಿಕೊಂಡು ಸ್ವಾಮೀಜಿ ಅವತಾರ ತಾಳಿ ಭವಿಷ್ಯ ಹೇಳಲು ಕೂತಿದ್ದಾರೆ. ಯಾರ ಭವಿಷ್ಯ ಹೇಳ್ತಾರೋ ಇಲ್ವೋ ಸದ್ಯಕ್ಕೆ ಬಿಗ್ ಬಾಸ್ ಭವಿಷ್ಯ ಮಾತ್ರ ಹೇಳಲಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಸುದೀಪ್ ಅವರ ಹೊಸ ಫೋಟೋ ಒಂದನ್ನು ಹಂಚಿಕೊಂಡಿದೆ. ಈ ಫೋಟೋದಲ್ಲಿ ಸುದೀಪ್ ಅವರು ಜ್ಯೋತಿಷಿಗಳಂತೆ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿನಯ ಚಕ್ರವರ್ತಿಯ ಸ್ವಾಮೀಜಿ ಗೆಟಪ್‌ನ ಫೋಟೋ ಶೇರ್ ಮಾಡಿರುವ ಕಲರ್ಸ್ ಕನ್ನಡ ಲಾಕ್ ಡೌನ್ 8.0ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಗೆಸ್ ಮಾಡಿ ಎಂದು ಪೋಸ್ಟ್ ಹಾಕಿದೆ. ಅಂದ ಹಾಗೆ ಬಿಗ್ ಬಾಸ್ ಹೊಸ ಆವೃತ್ತಿ ಯಾವಾಗ ಆರಂಭವಾಗುತ್ತದೆ ಎಂಬುದರ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡದ ವಾಹಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇನ್ನು ಬಿಗ್ ಬಾಸ್ ಮನೆಗೆ ಹೋಗುವವರ ಸಂಭಾವ್ಯರ ಪಟ್ಟಿ ದೊಡ್ಡದಾಗಿ ಇದೆ. ಈಗಾಗಲೇ ಸಾಕಷ್ಟು ಕಲಾವಿದರ ಹೆಸರುಗಳು ವೈರಲ್ ಆಗಿದೆ. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಿರುತೆರೆ ಮತ್ತು ಸಿನಿಮಾ ಕಲಾವಿದರ ಹೆಸರಿನ ಜೊತೆಗೆ ಬೇರೆ ಬೇರೆ ಕ್ಷೇತ್ರದ ಗಣ್ಯರ ಹೆಸರುಗಳು ಕೇಳಿಬರುತ್ತಿದೆ. ಇದೀಗ ಈ ಪಟ್ಟಿಯಲ್ಲಿ ನಟ ಸುಮಂತ್ ಶೈಲೇಂದ್ರ ಮತ್ತು ಮಜಾ ಟಾಕೀಸ್ ತರಂಗ ವಿಶ್ವ ಹೆಸರು ಕೇಳಿ ಬರುತ್ತಿದೆ. ನಟ ಸುಮಂತ್ ಶೈಲೇಂದ್ರ ಅವರನ್ನು ಬಿಗ್ ಬಾಸ್ ಈಗಾಗಲೇ ಸಂಪರ್ಕ ಮಾಡಿದ್ದು, ಈ ಬಾರಿಯ ಬಿಗ್ ಬಾಸ್ ನಲ್ಲಿ ಸುಮಂತ್ ಇರಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಕೇಳಿಬರುತ್ತಿದೆ.

ಸದ್ಯದ ಮಾಹಿತಿಯ ಪ್ರಕಾರ ಬಿಗ್ ಬಾಸ್ ಕನ್ನಡ ಎಂಟನೇ ಆವೃತ್ತಿ ಫೆಬ್ರವರಿ ಇಪ್ಪತ್ತೆಂಟರಂದು ಆರಂಭವಾಗಲಿದೆ. ಈಗಾಗಲೇ ಎಲ್ಲಾ ಸ್ಪರ್ಧಿಗಳ ಆಯ್ಕೆ ಸಹ ಮುಗಿದಿದ್ದು ಸ್ಪರ್ಧಿಗಳು ಸಹ ಬಿಗ್ ಬಾಸ್ ಜೊತೆ ಸಂಪರ್ಕ ಕೂಡಾ ಹೊಂದಿದ್ದು ಎಲ್ಲಾ ಮಾತುಕತೆಗಳು ಮುಗಿದಿ ಅಂತಿಮವಾಗಿ ಆಯ್ಕೆಯಾದ ಸ್ಪರ್ಧಿಗಳನ್ನು ಕೆಲವು ದಿನ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಆ ಬಳಿಕ ದೊಡ್ಮನೆಗೆ ಪ್ರವೇಶ ನೀಡಲಾಗುವುದು ಎಂದು ವಾಹಿನಿ ತಿಳಿಸಿದೆ.

Leave a Comment

error: Content is protected !!