ಪವಿತ್ರ ಲೋಕೇಶ್ ಗೆ ಶಾಕ್! ಇದ್ದಕ್ಕಿದ್ದಂತೆ ತೆಲುಗು ಸಿನೆಮಾಗಳಿಂದ ಗೇಟ್ ಪಾಸ್

ಕಳೆದ ಹಲವು ದಿನಗಳಿಂದ ಸುದ್ದಿ ಮಾಡುತ್ತಿರುವ ಬಹುಭಾಷಾ ನಟಿ ಪವಿತ್ರಾ ಲೋಕೇಶ್‌, ಸುಚೇಂದ್ರ ಪ್ರಸಾದ್ ಮತ್ತು ತೆಲುಗು ನಟ ನರೇಶ್‌ ವಿಚಾರ ದಿನೇದಿನೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಸುರಿಯುತ್ತಿದೆ. ಪವಿತ್ರಾ ಮತ್ತು ನರೇಶ್‌ ಮದುವೆಯಾಗಿದ್ದಾರೆ ಎಂಬ ವಿಚಾರವೇ ಇದೆಲ್ಲದಕ್ಕೂ ಕಾರಣ ಎಂಬುದು ಈಗಾಗಲೇ ಗೊತ್ತಿರುವ ವಿಚಾರ. ಆ ವಿಚಾರವೇ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಹಾಗೇನೂ ಇಲ್ಲ ಎನ್ನುತ್ತಲೇ ಕರ್ನಾಟಕದಲ್ಲಿ ಮಾಧ್ಯಮಗಳ ಮುಂದೆ ಬಂದಿದ್ದ ಪವಿತ್ರಾ ಸುಚೇಂದ್ರ ಪ್ರಸಾದ್‌ ಬಗ್ಗೆ ಮಾತನಾಡಿದರೆ, ನರೇಶ್‌ ತಮ್ಮ ಪತ್ನಿ ರಮ್ಯಾ ರಘುಪತಿ ಬಗ್ಗೆ ಮಾತನಾಡಿದ್ದರು. ಇದೀಗ ಇದೇ ಜೋಡಿ ಒಂದೇ ಹೊಟೇಲ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಭಾನುವಾರ ಮೈಸೂರಿನ ಹುಣಸೂರು ಬಳಿ ಇರುವ ಹೋಟೆಲ್​​​​​ನ ಒಂದೇ​​ ರೂಮ್​​​​ನಿಂದ ನರೇಶ್ ಜೊತೆ ಪವಿತ್ರಾ ಹೊರಗೆ ಬಂದಿದ್ದಾರೆ.

ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿರುವ ರಮ್ಯಾ ರಘುಪತಿ. ಇವರಿಬ್ಬರು ಮೈಸೂರಿನಲ್ಲಿದ್ದಾರೆ ಎಂದು ನನಗೆ ರಾತ್ರಿ 12 ಗಂಟೆಗೆ ಗೊತ್ತಾಯಿತು. 1 ಗಂಟೆಗೆ ಬೆಂಗಳೂರಿನಿಂದ ಹೊರಟೆ. ಇಲ್ಲಿಗೆ ಬಂದು ಡಿಸ್ಟರ್ಬ್ ಮಾಡುವುದು ಬೇಡ ಎಂದು ಬೆಳಗ್ಗೆವರೆಗೂ ಕಾದಿದ್ದೇನೆ. ಬೆಸ್ಟ್ ಫ್ರೆಂಡ್ಸ್ , ಬೆಸ್ಟ್ ಫ್ರೆಂಡ್ಸ್ ಎಂದುಕೊಂಡು ರಾತ್ರಿಯೆಲ್ಲ ಒಂದೇ ರೂಮ್‌ನಲ್ಲಿದ್ದಾರೆ. ನಾನು ಎದುರಿಗೆ ಬರುತ್ತಿದ್ದಂತೆ ನರೇಶ್‌ ನಗುತ್ತ ಹೋದರಲ್ಲ, ಅದೇ ನನ್ನ ಜಯ. ಕೆಳಗೆ ಬಿದ್ರು ಮೀಸೆ ಮಣ್ಣಾಗಲಿಲ್ಲ ಎನ್ನುತ್ತಾರಲ್ಲ ಹಾಗೆ ವರ್ತಿಸುತ್ತಿದ್ದಾರೆ. ನನ್ನ ಮಗ ಅಳುತ್ತಿದ್ದಾನೆ. ನರೇಶ್‌ಗೆ ಮೂರು ಮಕ್ಕಳಿದ್ದಾರೆ. ಮೂರು ಮದುವೆಯಿಂದಲೂ ಒಂದೊಂದು ಮಗು ಆಗಿದೆ ಎಂದಿದ್ದಾರೆ ರಮ್ಯಾ ರಘುಪತಿ.

ಮನೆಯಲ್ಲಿ ನಮ್ಮ ಅತ್ತೆ ಇಲ್ಲದಿರುವಾಗ ನೋಟಿಸ್‌ ಕಳುಹಿಸಿದ್ದಾರೆ. ಅಷ್ಟಕ್ಕೂ ನಾನು ಏನಕ್ಕೆ ಡಿವೋರ್ಸ್‌ ಕೊಡಬೇಕು. ನಾನು ಹಿಂದೂ ಧರ್ಮದಲ್ಲಿ ಹುಟ್ಟಿದವಳು. ನನಗೆ ಈ ಡಿವೋರ್ಸ್‌ನಲ್ಲಿ ನಂಬಿಕೆ ಇಲ್ಲ. ಏನೇ ಇದ್ದರೂ ನಾನು ಕಾನೂನು ಹೋರಾಟ ಮಾಡುತ್ತೇನೆ. ಅಲ್ಲಿಯೇ ಅದಕ್ಕೆ ಉತ್ತರ ಕೊಡುತ್ತೇನೆ. ಮದುವೆ ಆದಾಗಿನಿಂದ ಇದೇ ಕರ್ಮ. ಸಂಸಾರದಲ್ಲಿ ಈ ರೀತಿ ಇದ್ದಿದ್ದೇ. ಬಿರುಕು ಹೊರಗಿನಿಂದಲೇ ಬರಬೇಕು. ಅವರು ಹೇಗೆ ಎಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ. ಮನೆಯಲ್ಲಿ ನನ್ನ ಮಗ ಅಳುತ್ತ ಕೂತಿದ್ದಾನೆ. ಈ ನಡುವೆ ನನ್ನ ಶೀಲದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಆ ಬಗ್ಗೆ ಮಾತನಾಡಲು ಅವರ್ಯಾರೂ ಎಂದೂ ರಮ್ಯಾ ಪ್ರಶ್ನಿಸಿದ್ದಾರೆ.

ಮೈಸೂರಿನ ಹೊಟೇಲ್‌ನಲ್ಲಿ ಒಟ್ಟಿಗೆ ಇರುವ ವಿಚಾರ ತಿಳಿದು ನೇರವಾಗಿ ಭಾನುವಾರ ಬೆಳಗ್ಗೆ ಹೊಟೇಲ್‌ಗೆ ಬಂದ ರಮ್ಯಾ, ನರೇಶ್‌ ರೂಮ್‌ ಪ್ರವೇಶಕ್ಕೆ ಮುಂದಾದರು. ಆದರೆ, ಪೊಲೀಸ್‌ ಮತ್ತು ಕೆಲವು ಅಂಗ ರಕ್ಷಕರು ಅವರಿಂದ ಅದು ಸಾಧ್ಯವಾಗಲಿಲ್ಲ. ಗಲಾಟೆ ಜೋರಾಗುತ್ತಿದ್ದಂತೆ, ಕೋಣೆಯಲ್ಲಿದ್ದ ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ಹೊರಬಂದರು. ಈ ವೇಳೆ ಶಿಳ್ಳೆ ಹೊಡೆಯುತ್ತ ನರೇಶ್‌ ಹೊರಟರೆ, ಇತ್ತ ಆತನಿಗೆ ಥಳಿಸಲು ಕಾಲಲ್ಲಿನ ಚಪ್ಪಲಿ ಕೈಗೆ ತೆಗೆದುಕೊಂಡು ಹೊಡೆಯಲು ಮುಂದಾದರು. ಅದಾದ ಬಳಿಕ ಈ ಮೇಲಿನ ಮಾತುಗಳನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡರು.

ಇಬ್ಬರು ಬೆಸ್ಟ್ ಫ್ರೆಂಡ್ಸ್ ಎನ್ನುತ್ತಿದ್ದರು. ಆದರೆ ಒಟ್ಟಿಗೆ ಹೋಟೆಲ್ ರೂಂನಲ್ಲಿ ತಂಗಿದ್ದಾರೆ. ಇದಕ್ಕೆ ಏನು ಹೇಳಬೇಕು ಎಂದು ನರೇಶ್ ಪತ್ನಿ ರಮ್ಯಾ ಕಿಡಿ ಕಾರಿದ್ದರು. ಈ ಎಲ್ಲಾ ಪ್ರಕರಣಗಳ ಬಳಿಕ ಇದೀಗ ಪವಿತ್ರಾ ಲೋಕೇಶ್ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ನರೇಶ್ ಜೊತೆಗಿನ ಮದುವೆ ವಿವಾದದ ಬಳಿಕ ಪವಿತ್ರಾ ಲೋಕೇಶ್ ಅವರಿಗೆ ಸಿನಿಮಾಗಳ ಆಫರ್ ಬರುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ವಿವಾದದ ಬೆನ್ನಲ್ಲೇ ಅನೇಕ ಸಿನಿಮಾಗಳ ಆಫರ್ ಕಳೆದುಕೊಂಡಿದ್ದಾರಂತೆ. ಈಗಾಗಲೇ ಪವಿತ್ರಾ ಲೋಕೋಶ್ ಸಹಿ ಮಾಡಿದ್ದ ಸಿನಿಮಾಗಳಿಂದನೂ ಸಹ ಅವರನ್ನು ದೂರ ಇಟ್ಟು ಬೇರೆ ನಟಿಯರನ್ನು ಆಯ್ಕೆ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.

ವಿವಾದಗಳ ಬಳಿಕ ನಟಿಮಣಿಯರಿಗೆ ಸಿನಿಮಾ ಆಫರ್ ಕಡಿಮೆಯಾಗುವುದು ಸಹಜ. ಇದೀಗ ಪವಿತ್ರಾ ಲೋಕೇಶ್‌ಗೂ ಅದೇ ಪರಿಸ್ಥಿತಿ ಎದುರಾಗಿದ್ದು ಸಿನಿಮಾ ಮೇಲೆ ಪರಿಣಾಮ ಬೀರಿದೆ. ಸದ್ಯ ಟಾಲಿವುಡ್‌ನಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ತೆಲುಗಿನ ಎರಡು ದೊಡ್ಡ ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಅವರನ್ನು ಹೊರಗಿಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಆದರೆ ಯಾವ ಸಿನಿಮಾ ಎನ್ನುವುದನ್ನು ರಿವೀಲ್ ಮಾಡಿಲ್ಲ. ಅಂದಹಾಗೆ ಪವಿತ್ರಾ ಲೋಕೇಶ್ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ಪೋಷಕ ನಟಿ. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಪವಿತ್ರಾ ಲೋಕೇಶ್ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗಿನಲ್ಲಿ ಫೇಮಸ್. ಆದರೀಗ ವಿವಾದದ ಬಳಿಕ ಪವಿತ್ರಾ ಲೋಕೇಶ್ ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ.

Leave a Comment

error: Content is protected !!