ಮಲಬದ್ಧತೆಯಿಂದ ಮುಕ್ತಿ ನೀಡುವ ಮನೆಮದ್ದು

ಮಲಬದ್ಧತೆ ಒಂದು ಗಂಭೀರ ಸಮಸ್ಯೆಯಾಗಿದ್ದು ಇದರಿಂದ ಇನ್ನು ಹತ್ತು ಹಲವಾರು ಸಮಸ್ಯೆಗಳು ಹುಟ್ಟಿ ಕೊಳ್ಳುತ್ತದೆ. ಮೂಲವ್ಯಾಧಿಗೆ ಮುಖ್ಯ ಕಾರಣನೇ ಈ ಮಲಬದ್ಧತೆ. ಮಲವು ವೇಸ್ಟೇಜ್ ಆಗಿರದೆ ಬ್ಯಾಕ್ಟೀರಿಯಾ ಹಾಗೂ ಟಾಕ್ಸಿನ್ ಗಳನ್ನು ಹೊಂದಿರುತ್ತದೆ.

ನಮ್ಮ ದೇಹದಲ್ಲಿನ ವಿಷಕಾರಿ ಅಂಶವು ಬೆವರಿನ ಮೂಲಕ, ಮೋಡವೆ ಮೂಲಕ ಹೊರಹೋಗುತ್ತದೆ. ಆದ್ದರಿಂದ ಪ್ರತಿದಿನ ಸರಿಯಾಗಿ ಮಲ,ಮೂರ್ತವಿಸರ್ಜನೆ ಮಾಡಲೇಬೇಕು. ಆಹಾರ ಸೇವಿಸಿದ 24 ಗಂಟೆಗಳಲ್ಲಿ ಜೀರ್ಣವಾಗಿ ಮನುಷ್ಯನ ದೇಹದಿಂದ ವೇಸ್ಟೇಜ್ ರೂಪದಲ್ಲಿ ಮಲ ಹೊರಗೆ ಬರಬೇಕು. ಒಂದು ವೇಳೆ ಅಜೀರ್ಣವಾಗಿ 2ದಿನ ವಾದರೂ ಮಲ ಬಾರದೇ ಇದ್ದರೆ ಅದನ್ನೇ ಮಲಬದ್ಧತೆ ಎಂದು ಕರೆಯಲಾಗುತ್ತದೆ.

ಮಲಬದ್ಧತೆ ಯಿರುವವರು ಒತ್ತಡ, ಹೊಟ್ಟೆನೋವು, ಉಳಿತೇಗು, ಅಲ್ಸರ್, ಅಜೀರ್ಣ ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ. ಹಾಗಾಗಿ ನಮ್ಮ ದೈನಂದಿನ ಆಹಾರ ಪದ್ಧತಿಯನ್ನ ಬದಲಾಯಿಸಿ ಕೊಳ್ಳಬೇಕು.ಹೊರಗಡೆ ಮಾಡುವ ಜಂಗ್, ಸ್ಪೖಸಿ ಫುಡ್ ಗಳನ್ನು ಆದಷ್ಟು ತ್ಯಜಿಸಿದರೆ ಒಳ್ಳೆಯದು.

ಮಲಬದ್ಧತೆ ಸಮಸ್ಯೆಯ ಪರಿಹಾರಕ್ಕೆ ಮನೆಯಲ್ಲಿನ ಪದಾರ್ಥಗಳಿಂದ ಮಾಡುವ ಮನೆಮದ್ದುಗಳಿವು
ಒಣದ್ರಾಕ್ಷಿಯನ್ನ ರಾತ್ರಿ ನೀರಿನಲ್ಲಿ ನೆನಸಿಟ್ಟು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಮ್ಮ ಹೊಟ್ಟೆಯನ್ನ ಕ್ಲೀನ್ ಮಾಡಲು ಸಹಾಯಕ.

ತುಪ್ಪದಿಂದ ಮಲಬದ್ಧತೆ ಸಮಸ್ಯೆ ದೂರಮಾಡಬಹುದು. ದೇಹದಲ್ಲಿ ನೀರಿನ ಅಂಶ ಹಾಗೂ ಜಿಡ್ಡು ಕಡಿಮೆಯಾದರೆ ಸ್ವಾಭಾವಿಕವಾಗಿ ಮಲವು ಸಣ್ಣ ಕರುಳಿಗೆ ಅಂಟಿಕೊಂಡಿರುತ್ತದೆ ಹೀಗಾಗಿ ಪ್ರತಿದಿನ ರಾತ್ರಿ ಊಟದ ನಂತರ ಬಿಸಿ ನೀರಿನಲ್ಲಿ ತುಪ್ಪ ಬೆರೆಸಿ ಕುಡಿದರೆ ಮಲಬದ್ಧತೆ ಕಡಮೆ ಆಗುತ್ತದೆ.
ಹರಳೆಣ್ಣೆಯಿಂದ ಮಲಬದ್ಧತೆ ಮಂಗಮಯ. ಪ್ರತಿದಿನ ರಾತ್ರಿಊಟದ ನಂತರ 2 ಚಮಚ ಹರಳೆಣ್ಣೆಯನ್ನು ಬಿಸಿ ನೀರಿನಲ್ಲಿ ಬೆರಸಿ ಕುಡಿಯುವುದರಿಂದ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ .

ಮಲಬದ್ಧತೆ ನಿವಾರಣೆಗೆ ಸರಳ ಟೀಪ್ಸ್
ಪ್ರತಿದಿನ ವ್ಯಾಯಾಮ ಮಾಡಿ ಹಾಗೂ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ ಅಷ್ಟೇ ಅಲ್ಲದೆ ಆಹಾರವನ್ನು ಚೆನ್ನಾಗಿ ಜಗೆದು ತಿನ್ನಿರಿ. ಇನ್ನು ಮಲ ಬಂದರೆ ತಡೆ ಹಿಡಿಯಬೇಡಿ ತಕ್ಷಣವೇ ಹೋಗಿ ಮಲವಿಸರ್ಜನೆ ಮಾಡಿ. ಆಹಾರದಲ್ಲಿ ಬದಲಾವಣೆ ಜಂಕ್ ಹಾಗೂ ಕುರುಕಲು ತಿಂಡಿಯನ್ನ ತ್ಯಜಿಸಿ.

Leave A Reply

Your email address will not be published.

error: Content is protected !!