ಪಿಎಂ ಕಿಸಾನ್ ಯೋಜನೆಯ ಲಾಭವನ್ನು ಪಡೆಯಲು ರೈತರು ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ ನೋಡಿ

ರೈತರು ನಮ್ಮ ದೇಶದ ಬೆನ್ನೆಲುಬು. ರೈತ ಇಲ್ಲದಿದ್ದರೆ ಊಟದ ಕೊರತೆಯಲ್ಲಿ ದೇಶವೆ ನರಳುತ್ತಿತ್ತು. ಜನರ ಹಸಿವು ನೀಗಿಸುವ ರೈತರಿಗೆ ಸಹಾಯಕವಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಯೋಜನೆಯೊಂದನ್ನು ಜಾರಿಗೆ ತರಲಾಯಿತು. ಈಗಾಗಲೇ ಜಾರಿಯಲ್ಲಿರುವ ಈ ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯದ ರೈತರು ಯಾವ ಕೃಷಿ ಕಛೇರಿಗೆ ಹಾಗೂ ಅರ್ಜಿ ಸಲ್ಲಿಸುವ ಸೆಂಟರ್ ಗಳಿಗೆ ಭೇಟಿ ಮಾಡದೆ ಮೊಬೈಲ್ ನಲ್ಲಿಯೆ ಅರ್ಜಿ ಹಾಕಬಹುದು. ಈ ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವ ಕುರಿತು ನಾವು ತಿಳಿಯೋಣ.

ಮೊದಲಿಗೆ ಮೊಬೈಲ್ ನ ಪ್ಲೇ ಸ್ಟೋರ್ ಗೆ ಹೋಗಿ ಪಿಎಂ ಕಿಸಾನ್ ಆ್ಯಫ್ ಎಂದು ಬರೆಯಿರಿ. ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದ ಆ್ಯಫ್ ಸಿಗುತ್ತದೆ ಡೌನ್ಲೋಡ್ ಮಾಡಿಕೊಳ್ಳಿ. ನಂತರ ಓಪನ್ ಬಟನ್ ಒತ್ತಿ. ಹೀಗೆ ಒತ್ತಿದಾಗ ಒಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನ್ಯೂ ಫಾರ್ಮರ್ ರೆಜಿಸ್ಟರೇಷನ್ ಎಂದು ಬರುತ್ತದೆ ಅದನ್ನು ಆಯ್ದುಕೊಳ್ಳಬೇಕು. ನಂತರ ಅಲ್ಲಿ ಆಧಾರ್ ಕಾರ್ಡ್ ನಂಬರ್ ಕೇಳುತ್ತದೆ. ಅಲ್ಲಿ ಆಧಾರ್ ಕಾರ್ಡ್ ನಂಬರ್ ಹಾಕಿ ಗೆಟ್ ಡಿಟೇಲ್ಸ್ ಎಂದು ಇರುವ ಬಟನ್ ಒತ್ತಿ. ನಂತರ ಯೆಸ್ ಅಥವಾ ನೋ ಎನ್ನುವ ಆಯ್ಕೆ ತೋರಿಸುತ್ತದೆ. ಯೆಸ್ ಎನ್ನುವ ಬಟನ್ ಒತ್ತಿ. ನಂತರ ಓಪನ್ ಆಗುವ ಪೇಜ್ ನಲ್ಲಿ ಮೊದಲು ರಾಜ್ಯ ಆರಿಸಿಕೊಳ್ಳಬೇಕು. ಜಿಲ್ಲೆ ಆರಿಸಿ, ತಾಲೂಕು ನಮೂದಿಸಿ, ಬ್ಲಾಕ್ ಅಂದರೆ ತಾಲೂಕು ನಮೂದಿಸಿ ನಂತರ ಗ್ರಾಮ ಯಾವುದೆಂದು ನಮೂದಿಸಬೇಕು. ಯಾರು ಅರ್ಜಿ ಹಾಕುತ್ತಿದ್ದಾರೆ ಆ ರೈತನ ಹೆಸರನ್ನು ಬರೆಯಬೇಕು. ನಂತರ ಲಿಂಗ ನಮೂದಿಸಿ. ಕ್ಯಾಟಗರಿ ಯಾವುದು ಎಂದು ಆರಿಸಿಕೊಳ್ಳಿ. ನಂತರದಲ್ಲಿ ಫಾರ್ಮರ್ ಯಾವ ವಿಧ ಅತಿಸಣ್ಣ ರೈತ ಇಲ್ಲ ರೈತರ ಯಾವುದು ಎಂದು ನಮೂದಿಸಿ. ನಂತರ ಬ್ಯಾಂಕ್ ಹೆಸರು, ಐಎಫ್.ಎಸ್.ಸಿ ಕೋಡ್, ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಬ್ಯಾಂಕ್ ವಿಳಾಸ ನಮೂದಿಸಬೇಕು. ಅಕೌಂಟ್ ನಂಬರ್ ನಿಮ್ಮದೆ ಇರಲಿ. ಎಲ್ಲವೂ ಅರ್ಜಿ ಹಾಕಿದವರ ಮಾಹಿತಿಯೆ ಇರಲಿ. ನಂತರ ಅಲ್ಲೆ ಕೆಳಗೆ ಕನ್ಸೆಂಟ್ ಗೀವನ್ ಎಂಬ ಬರಹ ಕಾಣುತ್ತದೆ. ಅದನ್ನು ಒತ್ತಿದಾಗ ಬರುವ ಪೇಜ್ ನಲ್ಲಿ ಅಗ್ರಿ ಎಂದು ಆರಿಸಿ. ನಂತರ ಸಬ್ಮಿಟ್ ಬಟನ್ ಒತ್ತಿಸಿ.

ಹೀಗೆ ಸಬ್ಮಿಟ್ ಆದ ನಂತರ ರೈತರ ಉಳಿದ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ರೈತರ ನಂಬರ್, ಹಾಗೂ ತಂದೆ ಅಥವಾ ಹೆಣ್ಣುಮಕ್ಕಳಾದರೆ ಗಂಡ ಹೆಸರು ನಮೂದಿಸಬೇಕು. ಹುಟ್ಟಿದ ದಿನಾಂಕ ಬರೆಯಬೇಕು. ನಂತರ ಲ್ಯಾಂಡ್ ಡಿಟೇಲ್ಸ್ ಕೇಳುತ್ತದೆ. ಅಲ್ಲಿ ಹೊಲ ಒಬ್ಬರ ಹೆಸರಿನಲ್ಲಿ ಇದೆಯಾ ಅಥವಾ ಸಹೋದರರ ಜೊತೆ ಸೇರಿಕೊಂಡಿದೆಯಾ ಎಂದು ಆರಿಸಿಕೊಳ್ಳಬೇಕು. ನಂತರ ಸರ್ವೇ ನಂಬರ್, ಕಾಸ್ರಾ ನಂಬರ್, ಏರಿಯಾ ನಂಬರ್ ನಮೂದಿಸಬೇಕು. ಕಾಸ್ರಾ ನಂಬರ್ ಪಹಣಿ ಪತ್ರಿಕೆಯಲ್ಲಿ ಇರುತ್ತದೆ. ಇವೂ ಮೂರು ಪಹಣಿ ಪತ್ರಿಕೆಯಲ್ಲಿ ಇರುತ್ತದೆ. ಇವೆಲ್ಲ ನಮೂದಿಸಿದ ನಂತರ ಕೆಳಗಿರುವ ಆಡ್ ಬಟನ್ ಒತ್ತಿರಿ. ಅದರ ಕೆಳಗೆ ಸೆಲ್ಪ್ ಡಿಕ್ಲೆರೇಷನ್ ಫಾರ್ಮ್ ಇರುತ್ತದೆ ಅಲ್ಲಿರುವ ಸಣ್ಣ ಬಾಕ್ಸ್ ಮೇಲೆ ಒತ್ತಬೇಕು. ನಂತರ ಸಬ್ಮಿಟ್ ಬಟನ್ ಅನ್ನು ಆಯ್ದುಕೊಳ್ಳಬೇಕು. ಇಲ್ಲಿಗೆ ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಹಾಕುವುದು ಮುಗಿಯುತ್ತದೆ. ಇದರ ನಂತರ ಒಂದು ಪ್ರತಿ ನಿಮಗೆ ಸಿಗುತ್ತದೆ. ಅದನ್ನು ಪ್ರಿಂಟ್ ತೆಗೆಸಿ ಇಟ್ಟುಕೊಳ್ಳಿ ಇಲ್ಲವೆ ಅಲ್ಲಿರುವ ಅಕ್ನಾಲೆಜ್ಮೆಂಟ್ ನಂಬರ್ ಬರೆದಿಟ್ಟುಕೊಳ್ಳಿ. ಕಿಸಾನ್ ಯೋಜನೆ ಅರ್ಜಿಯ ಸ್ಟೇಟಸ್ ನೋಡಲು ಈ ಅಕ್ನಾಲೆಜ್ಮೆಂಟ್ ನಂಬರ್ ನ ಅವಶ್ಯಕತೆ ಇರುತ್ತದೆ. ಅರ್ಜಿಯ ಸ್ಟೇಟಸ್ ನೋಡಲು ಆ್ಯಪ್ ನಲ್ಲಿ ಇರುವ ಸ್ಟೇಟಸ್ ಆಫ್ ಸೆಲ್ಪ್ ರೆಜಿಸ್ಟರ್ಡ್ ಫಾರ್ಮರ್ ಆಯ್ಕೆ ಮಾಡಿಕೊಳ್ಳಿ. ನಂತರ ಅರ್ಜಿಗೆ ಕೊಟ್ಟ ಆಧಾರ್ ನಂಬರ್ ಹಾಕಿ, ಗೆಟ್ ಡಿಟೇಲ್ಸ್ ಬಟನ್ ಒತ್ತಿದರೆ ಅರ್ಜಿಯ ಸ್ಥಿತಿಯ ವಿವರ ಸಿಗುತ್ತದೆ.

ರೈತರಿಗೆ ಇದರಿಂದ ಎರಡು ಸಾವಿರದ ಒಂದೊಂದು ಕಂತಿನಂತೆ ಹಣ ಬರುತ್ತದೆ. ಯಾರಾದರೂ ಅರ್ಜಿ ಸಲ್ಲಿಸದೆ ಇದ್ದರೆ ಏಳನೆ ಕಂತಿನ ಹಣ ಬರುವ ಸಮಯ ನವೆಂಬರ್ ಕೊನೆಯ ವಾರ ಇಲ್ಲ ಡಿಸೆಂಬರ್ ಮೊದಲ ತಿಂಗಳಲ್ಲಿ ಬರುತ್ತದೆ. ಅದರ ಒಳಗಾಗಿ ಅರ್ಜಿ ಸಲ್ಲಿಸಿ. ಒಂದು ವೇಳೆ ಇದರ ಬಗ್ಗೆ ಮತ್ತಷ್ಟು ಮಾಹಿತಿ ಬೇಕಾದಲ್ಲಿ, ಗೊಂದಲ ಇದ್ದಲ್ಲಿ, ಕಿಸಾನ್ ಆ್ಯಪ್ ನಲ್ಲಿ ಕಾಂಟ್ಯಾಕ್ಟ್ ಅಸ್ ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ ಅದರಲ್ಲಿ ಸ್ಟೇಟ್ ನೊಡಲ್ ಆಫಿಸರ್ ಡಿಟೇಲ್ಸ್ ಹಾಗೂ ಪಿಎಂ ಕಿಸಾನ್ ಹೆಲ್ಪ್ ಲೈನ್ ನಂಬರ್ ಇರುತ್ತದೆ ಅವರನ್ನು ಸಂಪರ್ಕಿಸಿ.

Leave a Comment

error: Content is protected !!