ಗರ್ಭಿಣಿ ಅಥವಾ ಬಾಣಂತಿಯರು ತಿನ್ನಬಾರದ ತರಕಾರಿಗಳಿವು

ಗರ್ಭಿಣಿಯಾದ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಯಾವ ಆಹಾರ ಸೇವಸಿ ಬೇಕು, ಯಾವ ಆಹಾರ ಸೇವಿಸಬಾರದು ಎಂಬುದರ ಬಗ್ಗೆ ತಿಳಿದು ಕೊಂಡಿರಬೇಕು. ಇಲ್ಲವಾದಲ್ಲಿ ಗರ್ಭ ದಲ್ಲಿರುವ ಶಿಶುವಿಗೂ ತೊಂದರೆ ಉಂಟಾಗುತ್ತದೆ

ಹಾಗಾದರೆ ಗರ್ಭಿಣಿ ಮಹಿಳೆಯರು ಸೇವಿಸಬಾರದ ತರಕಾರಿಗಳ ಬಗ್ಗೆ ತಿಳಿಯೋಣ.
ಬೀದರ ಕಡ್ಲೆ: ಮಹಿಳೆಯರು ಗರ್ಭಿಣಿಯಾದ ಸಮಯದಲ್ಲಿ ಈ ಬೀದರ ಕಡ್ಲೆಯಂತಹ ತರಕಾರಿ ಸೇವನೆ ಒಳ್ಳೆಯದಲ್ಲ.ಈ ಪದಾರ್ಥದಲ್ಲಿ ಹೆಚ್ಚು ಉಷ್ಣತೆ ಅಂಶವಿದ್ದು ಗರ್ಭಪಾತ ಆಗುವ ಸಂಭವವಿರುತ್ತದೆ.
ಇನ್ನು ಬದನೆಕಾಯಿ ಬದನೆಕಾಯಿಯನ್ನು ಗರ್ಭಿಣಿ ಮಹಿಳೆಯರು ತಿನ್ನಲೇಬಾರದು. ಬದನೆಕಾಯಿಯಿಂದ ಹಲ್ಲು ಹುಳುಕಾಗುವುದು , ಮೈಯಲ್ಲಿ ಕೆರೆತ ಉಂಟುಮಾಡುತ್ತದೆ ಹಾಗಾಗಿ ಬದನೆಕಾಯಿ ಗರ್ಭಿಣಿಯರು ಸೇವಿಸುವುದು ಒಳ್ಳೆಯದಲ್ಲ.

ಹಾಗಲಕಾಯಿ: ಹಾಗಲಕಾಯಿ ತುಂಬಾ ಕಹಿ ಇರುವ ಪದಾರ್ಥವಾಗಿದ್ದು, ಈ ತರಕಾರಿಯನ್ನು ಗರ್ಭಿಣಿ ಮಹಿಳೆಯರು ಸೇವಿಸಬಾರದು.ಇದರಿಂದ ಮಗುವಿನ ಬೆಳವಣಿಗೆಯ ಮೇಲೆ ಕೆಟ್ಪರಿಣಾಮ ಬೀರುತ್ತದೆ.
ಆಲೂಗಡ್ಡೆ : ಆಲೂಗಡ್ಡೆ ವಾಯು ಪದಾರ್ಥವಾಗಿದ್ದು, ಗರ್ಭಿಣಿ ಮಹಿಳೆಯರು ಇದರ ಹೆಚ್ಚಿನ ಸೇವನೆ ಮಾಡಬಾರದು.ಇದರಿಂದ ಗರ್ಭದಲ್ಲಿನ ಮಗುವಿನ ಚಲನ ವಲನ ಕುಂಠಿತ ವಾಗುತ್ತದೆ.

ಅವರೆಕಾಯಿ ಅವರೆಕಾಯಿ ಗ್ಯಾಸ್ಟ್ರಿಕ್ ಪದಾರ್ಥವಾಗಿದ್ದು. ಗರ್ಭಿಣಿ ಮಹಿಳೆಯರು ಇದರ ಹೆಚ್ಚಿನ ಸೇವನೆ ಒಳಿತಲ್ಲ.ತಿಂಗಳಿಗೊಮ್ಮೆ ತಿಂದರೆ ಸೂಕ್ತ. ಬಾಳೆದಿಂಡು, ಬಾಳೆಕಾಯಿಯಲ್ಲಿ ಹೆಚ್ಚು ಉಷ್ಣತೆ ಇದ್ದು ಇದನ್ನು ಗರ್ಭಿಣಿ ಯರು ಸೇವಿಸಲೇಬಾರದು.ಅಲ್ಲದೆ ಬಾಳೆಎಲೆಯಲ್ಲಿ ಬಾಣಂತಿಯರು ಊಟ ಮಾಡಬಾರದು. ನುಗ್ಗೆಕಾಯಿಯಲ್ಲಿ ಹೆಚ್ಚಿನ ಕಬ್ಬಿಣಾಂಶವಿದ್ದು, ಆದರೆ ಇದನ್ನು ಗರ್ಭಿಣಿ ಮಹಿಳೆಯರು ಹೆಚ್ಚು ಸೇವಿಸದೆ ಕಡಿಮೆ ಸೇವಿಸಬೇಕು

ಮೆಣಸಿನಕಾಯಿ ಮೆಣಸಿನ ಕಾಯಿ ಖಾರವಾದ ಪದಾರ್ಥವಾಗಿದ್ದು.ಗರ್ಭಿಣಿ ಮಹಿಳೆಯರು ಖಾರವಾದ ಪದಾರ್ಥ ತಿನ್ನಬಾರದು. ಇದರಿಂದ ಮೂಲವ್ಯಾಧಿ ಹಾಗೂ ಅಲ್ಸರ್ ಸಮಸ್ಯೆ ಬರುತ್ತದೆ.
ಎಲೆಕೋಸು ಉಷ್ಣತೆ ಇರುವ ತರಕಾರಿ ಯಾಗಿದ್ದು ಮಹಿಳೆಯರರು ಗರ್ಭಿಣಿಯಾದ ಸಮಯದಲ್ಲಿ ಇದನ್ನು ಸೇವಿಸಬಾರದು. ತದ ನಂತರ ಬೇಕಾದರೆ ಸೇವಿಸಬಹುದು.

ಕ್ಯಾಪ್ಸಿಕಂ: ಕ್ಯಾಪ್ಸಿಕಂ ಹೆಚ್ಚು ಸ್ಪೇಸಿ ಇರುವ ತರಕಾರಿ ಯಾಗಿದ್ದು.ಗರ್ಭಿಣಿಯರು ಇದನ್ನು ಸೇವಿಸಬಾರದು. ಈ ತರಕಾರಿಯಿಂದ ಹೆಚ್ಚು ಎದೆಉರಿ ಬರುವ ಸಂಭವವಿರುತ್ತದೆ. ಕುಂಬಳಕಾಯಿ ಹೆಚ್ಚಿನ ವಿಟಮಿನ್ಸ್ ಇದ್ದು ಕೆಲವೊಂದು ಸಂದರ್ಭಗಳಲ್ಲಿ ಇದರ ಸೇವನೆ ಒಳಿತಲ್ಲ.ಗರ್ಭಿಣಿಯರು ಕುಂಬಳಕಾಯಿ ಸೇವಿಸಬಾರದು.ಇದರಿಂದಲೂ ಮಗುವಿನ ಚಲನ ವಲನ ಕುಂಠಿತ ವಾಗುತ್ತದೆ.

ಬಾಳೆಕಾಯಿ: ಬಾಳೆಕಾಯಿಯಿಂದ ಗರ್ಭೀಣಿಯರಿಗೆ ತೊಂದರೆಯಿದ್ದು, ಬಾಣಂತಿಯರ ಭ್ರೂಣದ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಬಾಳೆಕಾಯಿ ಯನ್ನು ಬಾಣಂತಿಯರು ಸೇವಿಸಬಾರದು.
ಈ 12 ತರಕಾರಿಗಳನ್ನು ಮಹಿಳೆಯರು ಬಾಣಂತಿ ಇರುವ ಸಮಯದಲ್ಲಿ ಸೇವಿಸಬಾರದು.

Leave A Reply

Your email address will not be published.

error: Content is protected !!