ನಿತ್ಯಾನಂದರನ್ನು ಮದುವೆಯಾಗೋ ಆಸೆ ಇದೆ ಎಂದು ಹೇಳಿದ ರಾಜಕುಮಾರ ಚಿತ್ರದ ನಟಿ

ಸಿನಿಮಾಗಳಲ್ಲಿ ಅಭಿನಯಿಸುವ ನಾಯಕಿ ನಟಿಯರು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅವರ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಇತರ ಗಾಸಿಪ್ ಗಳಿಂದಲೇ ಸುದ್ದಿಯಲ್ಲಿರುವ ಹಲವು ನಾಯಕಿಯರು ಇದ್ದಾರೆ. ಇನ್ನು ನಟಿ ಪ್ರಿಯಾ ಆನಂದ ಅವರ ವಿಚಾರಕ್ಕೆ ಬಂದ್ರೆ ಅವರು ನೀಡಿರುವ ಒಂದು ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಬಹುಭಾಷಾ ನಟಿಯಗಿರುವ ಪ್ರಿಯ ಆನಂದ್, ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ಜೊತೆ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ದಿವಂಗತ ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಹಾಗೂ ಜೇಮ್ಸ್ ಸಿನಿಮಾದಲ್ಲಿ ಪ್ರಿಯ ಆನಂದ ಅವರು ಪುನೀತ್ ರಾಜಕುಮಾರ್ ಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಈ ಮೂಲಕ ಕನ್ನಡಿಗರು ಮನಸ್ಸು ಗೆದ್ದಿರುವ ನಟಿ ಪ್ರಿಯ ಆನಂದ್, ಇತ್ತೀಚಿಗಿನ ಸಂದರ್ಶನ ಒಂದರಲ್ಲಿ ನೀಡಿರುವ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಿಯ ಆನಂದ್ ಹೇಳಿರುವ ಹೇಳಿಕೆ ಏನು ಗೊತ್ತಾ ?

ನಟಿ ಪ್ರಿಯಾ ಆನಂದ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಇಲ್ಲದೆ ಇದ್ದರೂ ತಿಂಗಳಿಗೆ ಒಂದೆರಡು ಬಾರಿ ತನ್ನನ ತಾನು ದೇವಮಾನವ ಎಂದೇ ಕರೆದುಕೊಳ್ಳುವ ನಿತ್ಯಾನಂದರ ಮಾತುಗಳನ್ನು ಪ್ರಿಯಾ ಆನಂದ್ ಶೇರ್ ಮಾಡುತ್ತಾರೆ. ಇದನ್ನು ಈಗಾಗಲೇ ಗಮನಿಸಿರುವ ಅಭಿಮಾನಿಗಳು ಈ ಬಗ್ಗೆ ಕಮೆಂಟ್ ಕೂಡ ಮಾಡಿದ್ದರು. ಈಗ ಇದಕ್ಕೆಲ್ಲ ಅಷ್ಟೇ ಇಡುವಂತೆ ಮಾತನಾಡಿದ ಪ್ರಿಯಾ ಆನಂದ್, ನಿತ್ಯಾನಂದರನ್ನು ಅಷ್ಟು ಜನ ಫಾಲೋ ಮಾಡುತ್ತಾರೆ, ಅವರನ್ನು ಅನುಸರಿಸುತ್ತಾರೆ ಅಂದರೆ ಅವರಲ್ಲಿ ಏನೋ ಇರಬೇಕು. ನಾನು ನಿತ್ಯಾನಂದ ಅವರನ್ನ ಮದುವೆಯಾದರೆ ನನ್ನ ಹೆಸರನ್ನು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ ಯಾಕೆಂದರೆ ನನ್ನ ಹೆಸರಿನಲ್ಲಿ ಆಗಲೇ ಆನಂದ್ ಇದೆ ಎಂದು ಹಾಸ್ಯಮಯವಾಗಿ ಮಾತನಾಡಿದರು ನಟಿ ಪ್ರಿಯ ಆನಂದ.

ಪ್ರಿಯ ಆನಂದ್ ಅವರ ಈ ಹೇಳಿಕೆ ಜನರಲ್ಲಿ ದೊಡ್ಡ ಗೊಂದಲವನ್ನು ಸೃಷ್ಟಿಸಿದೆ. ಸಂದರ್ಶನದ ವೇಳೆ ಅವರು ತಮಾಷೆಯಾಗಿಯೇ ನಿತ್ಯಾನಂದರ ಬಗ್ಗೆ ಮಾತನಾಡಿದ್ದಾದರೂ ಅವರು ನಿಜಕ್ಕೂ ನಿತ್ಯಾನಂದರ ಬಗ್ಗೆ ಒಲವು ಇಟ್ಟುಕೊಂಡಿದ್ದಾರೆ ಎನ್ನುವುದು ಹಲವರ ಗುಮಾನಿ. ಪ್ರಿಯ ಆನಂದ್ ಅವರು ನೀಡಿರುವ ಈ ಒಂದು ಹೇಳಿಕೆ ವೈರಲ್ ಆಗಿದ್ದು ಮಾತ್ರವಲ್ಲದೆ ಪ್ರಿಯ ಆನಂದ್ ಟ್ರೋಲ್ ಗೆ ಗುರಿಯಾಗಿದ್ದಾರೆ.

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹಲವು ತಿಂಗಳಿನಿಂದ ಕಣ್ಮರೆಯಾಗಿದ್ದಾರೆ ಅವರ ಮೇಲೆ ಸಾಕಷ್ಟು ಕೇಸ್ ಗಳು ಇದ್ದು, ಅವರ ಹುಡುಕಾಟ ನಡೆಸಲಾಗುತ್ತಿದೆ. ಕೈಲಾಸಂ ನ್ನೂ ಪ್ರತ್ಯೇಕ ದೇಶ ಎಂದು ನಿತ್ಯಾನಂದ ಘೋಷಣೆ ಮಾಡಿಕೊಂಡಿದ್ದರು. ಇನ್ನು ಪೊಲೀಸರ ಹುಡುಕಾಟದ ಜೊತೆಗೆ ನಿತ್ಯಾನಂದರ ಆರೋಗ್ಯ ಸರಿಯಿಲ್ಲ ಎನ್ನುವ ವಿಷಯ ತಿಳಿದು ಬಂದಿದೆ. ನಿತ್ಯಾನಂದರ ಬಗ್ಗೆ ಮಾತನಾಡಿದ್ದು ಅಥವಾ ಅವರ ಆಶ್ರಮದಲ್ಲಿ ಇದ್ದಿದ್ದು ಹಲವು ನಟಿಯರು. ಹಾಗಾಗಿ ಪ್ರಿಯ ಆನಂದ್ ಅವರ ಈ ಹೇಳಿಕೆ ಸಾಕಷ್ಟು ಸುದ್ದಿ ಮಾಡಿದೆ.

Leave A Reply

Your email address will not be published.

error: Content is protected !!