ಯಶ್ ಅವರಿಗೆ ರಾಕಿಂಗ್ ಸ್ಟಾರ್ ಎಂದು ಟೈಟಲ್ ಕೊಟ್ಟಿದ್ದು ಯಾರು.?

ರಾಕಿಂಗ್ ಸ್ಟಾರ್ ಯಶ್ ಅವರಿಗೆ ರಾಕಿಂಗ್ ಸ್ಟಾರ್ ಎಂದು ಮೊದಲು ಕರೆದಿದ್ದು ಯಾರು ಅವರ ಸಿನಿ ಜರ್ನಿ, ನಿರ್ದೇಶಕ ನಾಗೇಂದ್ರ ಅರಸ್ ಅವರ ಜೊತೆಗೆ ರಾಕಿ ಸಿನಿಮಾ ಮಾಡಿದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ನಾಗೇಂದ್ರ ಅರಸ್ ಅವರ ನಿರ್ದೇಶನದಲ್ಲಿ ರಾಕಿ ಸಿನಿಮಾ ಕೆಲಸ ಪ್ರಾರಂಭವಾಗಿತ್ತು ಆದರೆ ಕ್ಯಾಮೆರಾಮೆನ್ ವಿಷಯವಾಗಿ ನಿರ್ದೇಶಕರಿಗೂ ನಿರ್ಮಾಪಕರಿಗೂ ಸಣ್ಣ ಜಗಳವಾಗಿ ಬೇರೆ ನಿರ್ಮಾಪಕರೊಂದಿಗೆ ರಾಕಿ ಸಿನಿಮಾ ಮಾಡುವುದು ನಿರ್ಧಾರವಾಯಿತು. ಒಮ್ಮೆ ನಾಗೇಂದ್ರ ಅರಸ್ ಅವರು ಎಪಿ ಅರ್ಜುನ್ ಅವರ ಮನೆಯಲ್ಲಿ ನಂದಗೋಕುಲ ಸೀರಿಯಲ್ ನೋಡುತ್ತಿದ್ದಾಗ ಯಶ್ ಅವರು ಕಂಡರು ನಾಗೇಂದ್ರ ಅವರಿಗೆ ಈ ಹುಡುಗನಿಗೆ ಫ್ಯೂಚರ್ ಇದೆ ಇಂಡಸ್ಟ್ರಿಯಲ್ಲಿ ಎಂದು ಅನಿಸಿತು. ನಂತರ ನಾಗೇಂದ್ರ ಅರಸ್ ಅವರು ಯಶ್ ಅವರಿಗೆ ಸಿನಿಮಾದಲ್ಲಿ ಹೀರೊ ಆಗಲು ಕರೆ ಮಾಡುತ್ತಾರೆ ಇದರಿಂದ ಯಶ್ ಅವರು ಸಂತೋಷವಾಗಿ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಾರೆ. ರಾಕಿ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಶೂಟಿಂಗ್ ನಡೆಯುವಾಗ ಯಶ್ ಅವರ ಕೈ ಮುರಿದಿತ್ತು ಅದನ್ನು ನೋಡಿದ ನಾಗೇಂದ್ರ ಅರಸ್ ಅವರು ಟೆನ್ಶನ್ ಮಾಡಿಕೊಂಡರು ಆದರೆ ಯಶ್ ಅವರು ಪರಿಸ್ಥಿತಿಯನ್ನು ಸುಧಾರಿಸಿಕೊಂಡು ಹೋದರು ಇದರಿಂದ ಅವರಿಗೆ ಸಿನಿಮಾ ಮೇಲೆ ಇರುವ ಪ್ರೀತಿ ತಿಳಿಯುತ್ತದೆ. ಈ ಸಿನಿಮಾದಲ್ಲಿ ಯಶ್ ಅವರು ರಾಕಿ ಆಗಿ ನಟಿಸಿದ್ದರು ಇದರಿಂದ ರಾಕಿಂಗ್ ಸ್ಟಾರ್, ರಾಕಿ ಬಾಯ್ ಆಗಿ ಇಂಟರ್ನ್ಯಾಷನಲ್ ವರೆಗೂ ಮಿಂಚುತ್ತಿದ್ದಾರೆ. ಯಶ್ ಅವರಿಗೆ ರಾಕಿಂಗ್ ಸ್ಟಾರ್ ಎಂದು ಮೊದಲು ಕರೆದಿದ್ದು ನಾಗೇಂದ್ರ ಅರಸ್ ಅವರು.

ನಾಗೇಂದ್ರ ಅರಸ್ ಅವರ ಪ್ರಕಾರ ಬಹಳಷ್ಟು ಜನರಿಗೆ ಕಲೆ ಇರುತ್ತದೆ ಆದರೆ ಅವರಿಗೆ ಅವಕಾಶ ಸಿಗುವುದಿಲ್ಲ ಆದ್ದರಿಂದ ಅವರ ಸಿನಿಮಾಗಳಲ್ಲಿ ಹೊಸಬರಿಗೆ ಅವಕಾಶ ಕೊಡುತ್ತಾರೆ. ನಾಗೇಂದ್ರ ಅರಸ್ ಅವರು ಆರ್ಟಿಸ್ಟ್ ಹತ್ತಿರ ಕ್ಲೋಸ್ ಆಗಿ ಮಾತನಾಡುತ್ತಾರೆ ಅವರು ಶೂಟಿಂಗನ್ನು ಎಂಜಾಯ್ ಮಾಡುತ್ತಾರೆ. ಅವರ ಪ್ರಕಾರ ಆರ್ಟಿಸ್ಟರನ್ನು ಫ್ರೀಯಾಗಿ ಬಿಡಬೇಕು ಇದರಿಂದ ಅವರಲ್ಲಿರುವ ಪ್ರತಿಭೆ ಹೊರಬರುತ್ತದೆ. ನಾಗೇಂದ್ರ ಅರಸ್ ಅವರಿಗೆ ಯಶ್ ಅವರ ಕಾನ್ಸಂಟ್ರೇಷನ್, ಡೆಡಿಕೇಷನ್ ಇಷ್ಟವಾಗುತ್ತದೆ ಮತ್ತು ಈ ಕಾರಣಗಳಿಂದಲೇ ಅವರು ಗೆಲುವು ಪಡೆದಿದ್ದಾರೆ. ಯಶ್ ಅವರು ಈ ಮಟ್ಟಕ್ಕೆ ಬೆಳೆದಿರುವುದು ನಾಗೇಂದ್ರ ಅರಸ್ ಅವರಿಗೆ ಬಹಳ ಖುಷಿಕೊಟ್ಟಿದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಯಶ್ ಅವರ ಸಿನಿಮಾ ಪ್ಯಾನ್ ಇಂಡಿಯಾ ಆಗುತ್ತಿದೆ ಎನ್ನುವುದು ನನಗೆ ಬಹಳ ಖುಷಿಕೊಟ್ಟಿದೆ ಎಂದು ನಾಗೇಂದ್ರ ಅರಸ್ ಅವರು ಹೇಳಿದ್ದಾರೆ. ಯಶ್ ಅವರು ಎಲ್ಲಿಯೇ ಸಿಕ್ಕರೂ ಚೆನ್ನಾಗಿ ಮಾತನಾಡುತ್ತಾರೆ ನಂತರದ ದಿನಗಳಲ್ಲಿ ಭೇಟಿಯಾಗುವುದು ಕಡಿಮೆಯಾಯಿತು ಎಂದು ನಾಗೇಂದ್ರ ಅರಸ್ ತಮ್ಮ ಮಾತನ್ನು ಹಂಚಿಕೊಂಡರು ಜೊತೆಗೆ ಒಳ್ಳೆಯ ಕಥೆ ಸಿಕ್ಕಿದರೆ ಯಶ್ ಅವರೊಂದಿಗೆ ಮತ್ತೆ ಸಿನಿಮಾ ಮಾಡುತ್ತೇನೆ ಎಂದು ಹೇಳಿದರು. ಯಶ್ ಅವರು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲು, ಹೊಸತನ ಕೊಡಲಿ, ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.

Leave a Comment

error: Content is protected !!