ನಟಿ ರಾಧಿಕಾ ಅವರ ಡಾನ್ಸ್ ನೋಡಿ ಅಭಿಮಾನಿಗಳು ಫುಲ್ ಫಿದಾ? ಹೇಗಿದೆ ನೋಡಿ ಸಕತ್ ಡಾನ್ಸ್

ಸ್ಯಾಂಡಲ್ ವುಡ್ ಅಲ್ಲಿ ಅನೇಕ ನಟ ನಟಿಯರು ತಮ್ಮ ನೃತ್ಯ ಹಾಗೂ ಅಭಿನಯ ಮೂಲಕ ಜನರ ಮನದಲ್ಲಿ ಹಾಗೆ ನೆಲೆಸಿದ್ದಾರೆ. ಅವರು ಚಿತ್ರರಂಗದಿಂದ ದೂರ ಇದ್ದರೂ ಕೂಡ ಅವರ ಅಭಿನಯವನ್ನು ಮರೆಯದೆ ಸದಾ ನೆನಪಲ್ಲಿ ಇಟ್ಟುಕೊಂಡು ಇರುವರು ಅವರಲ್ಲಿ ಇವರು ಕೂಡ ಒಬ್ಬರು ಇವರ ಡಾನ್ಸ್ ಅನ್ನು ನೋಡಲು ಜನರು ಸಿನಿಮಾ ಮಂದಿರಕ್ಕೆ ಮುಗಿ ಬೀಳುತ್ತಿದ್ದರು. ತವರಿಗೆ ಬಾ ತಂಗಿ , ಅಣ್ಣ ತಂಗಿ ಸಿನಿಮಾ ಅಲ್ಲಿ ಶಿವರಾಜ್ ಕುಮಾರ್ ಅವರ ಜೊತೆ ತಂಗಿಯ ಪಾತ್ರವನ್ನು ಇಂದಿಗೂ ಯಾರು ಮರೆಯಲು ಅಸಾದ್ಯ ಅವರ ಆ ಅತ್ಯದ್ಬುತ ನಟನೆ ನೆನೆಸಿಕೊಂಡರೆ ಇಂದಿಗೂ ಮೈ ನವಿರೇಳಿಸುವುದು ಸತ್ಯ ಅವರು ಬೇರೆ ಯಾರೂ ಅಲ್ಲ ಚಂದನವನದ ಬೆಡಗಿ ರಾಧಿಕಾ ಕುಮಾರಸ್ವಾಮಿ.

1986 ನವೆಂಬರ್ 1 ರಂದು ಮಂಗಳೂರಿನಲ್ಲಿ ಬಿಲ್ಲವ (ಪೂಜಾರಿ) ಕುಟುಂಬದಲ್ಲಿ ಜನಿಸಿದರು.
ಹದಿನಾಲ್ಕನೇ ವಯಸ್ಸಿನಲ್ಲಿ ರತನ್ ಕುಮಾರ್ ಎಂಬುವವರ ಜೊತೆ ಕಟೀಲಿನ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬಾಲ್ಯ ವಿವಾಹವಾಯಿತು.ಇವರು 2002 ಆಗಸ್ಟ್ ‍ ನಲ್ಲಿ ಹೃದಯಾಘಾತದಿಂದ ನಿಧನರಾದರು. 2006 ರಲ್ಲಿ ಕುಮಾರಸ್ವಾಮಿಯವರೊಂದಿಗೆ ವಿವಾಹವಾದ ರಾಧಿಕಾರಿಗೆ ಶಮಿಕಾ ಎಂಬ ಪುತ್ರಿಯಿದ್ದಾಳೆ. 2010 ರಲ್ಲಿ ಈ ವಿಷಯವನ್ನು ಸಾರ್ವಜನಿಕಗೊಳಿಸಿದರು.

ರಾಧಿಕಾ ಅವರು ತನ್ನ ಒಂಬತ್ತನೆಯ ತರಗತಿಯ ಬಳಿಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ನೀಲಾ ಮೇಘ ಶ್ಯಾಮ ಸಿನಿಮಾ ಇವರ ಚೊಚ್ಚಲ ಸಿನಿಮಾ ಆಗಿದೆ. ತದನಂತರ ವಿಜಯ ರಾಘವೇಂದ್ರ ಅವರ ಜೊತೆಗೆ ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ.ಒಂದು ಕಾಲದ ಸಿನಿಮಾ ರಂಗದ ಬೆಸ್ಟ್ ಜೋಡಿಗಳಲ್ಲಿ ಇವರು ಕೂಡ ಒಬ್ಬರು. ನಿನಗಾಗಿ ಚಿತ್ರಕ್ಕೆ ನಟನೆ ಮಾಡಿದ್ದು ಆಮೇಲೆ ಓಹ್ ,ಲಾ ಲಾ ಲಾ, ಮಣಿ, ಹುಡುಗಿಗಾಗಿ, ತಾಯಿ ಇಲ್ಲದ ತಬ್ಬಲಿ, ಮನೆ ಮಗಳು, ಆಟೋ ಶಂಕರ, ಹಠವಾದಿ, ಅನಾಥರು, ಸ್ವೀಟಿ ನನ್ನ ಜೋಡಿ, ರಿಷಿ, ಮಂಡ್ಯ ಹೀಗೆ ಹಲವಾರು ಸಿನಿಮಾ ಅಲ್ಲಿ ಸ್ಟಾರ್ ನಟರ ಜೊತೆ ನಟನೆ ಮಾಡಿದ್ದ ಪ್ರಖ್ಯಾತಿ ಇವ್ರದ್ದು ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ತೆಲುಗು ಸಿನಿಮಾ ರಂಗದಲ್ಲಿ ಕೂಡ ತಮ್ಮ ನಟನೆಯನ್ನು ವಿಸ್ತರಿಸಿದರು.

ಕುಮಾರ ಸ್ವಾಮಿ ಅವರ ಎರಡನೆಯ ಪತ್ನಿ ಇವರು ನಿರ್ಮಾಪಕಿ ಕೂಡ ಆಗಿದ್ದಾರೆ. ೨೦೦೦ ದಶಕದ ಆರಂಭದಲ್ಲಿ ಇವರು ಖ್ಯಾತ ನಟಿ ಆಗಿದ್ದರು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಿದ ಡಾನ್ಸಿಂಗ್ ಶೋ ಒಂದರ ತೀರ್ಪುಗಾರರು ಕೂಡ ಆಗಿದ್ದಾರೆ. ಶಮಿಕಾ ಎನ್ನುವ ಮುದ್ದಾದ ಹೆಣ್ಣು ಮಗುವಿನ ತಾಯಿ ಆಗಿದ್ದು ತನ್ನ ಮಗಳ ಹೆಸರಿನಲ್ಲಿ ಒಂದು ಸ್ಟುಡಿಯೋವನ್ನು ಪ್ರಾರಂಭ ಮಾಡಿದ್ದು ಲಕ್ಕಿ ಎನ್ನುವ ಚಿತ್ರದ ನಿರ್ಮಾಪಕಿ ಆಗಿದ್ದರು.

ಆದರೆ ಇತ್ತೀಚಿಗೆ ಸಿನಿಮಾ ರಂಗದಿಂದ ದೂರ ಇದ್ದು ತಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವೊಂದು ಪೋಸ್ಟ್ ಅನ್ನು ಹಾಕುತ್ತಾ ಇರುವುದು ಸಾಮಾನ್ಯ ವಿಷಯ ಇತ್ತೀಚೆಗೆ ರಾಧಿಕಾ ಕುಮಾರಸ್ವಾಮಿ ಅವರ ಪೋಸ್ಟ್ ಒಂದು ತುಂಬಾನೇ ವೈರಲ್ ಆಗಿದೆ. ಹಿಂದಿ ಸಿನಿಮಾ ಹಾಡಿಗೆ ರಾಧಿಕಾ ಅವರು ಸೇಕ್ಸಿ ಮತ್ತು ತುಂಬಾನೇ ಹಾಟ್ ಆಗಿ ನೃತ್ಯ ಮಾಡಿದ್ದು ಹಲವಾರು ಅಭಿಮಾನಿಗಳ ಮನಸನ್ನು ಕದ್ದಿದ್ದಾರೆ ಇದೆ ರೀತಿ ಸದಾ ಖುಷಿಯಾಗಿ ತಮ್ಮ ಜೀವನವನ್ನು ಸಾಗಿಸಲಿ ಎಂದು ನೆಟ್ಟಿಗರು ಹಾರೈಸಿದರು.

Leave A Reply

Your email address will not be published.

error: Content is protected !!