500 ನೇ ಪೋಸ್ಟ್ ನಲ್ಲಿ ಎಲ್ಲರಿಗೂ ಸರ್ ಪ್ರೈಸ್ ನ್ಯೂಸ್ ಕೊಟ್ಟ ರಾಧಿಕಾ ಪಂಡಿತ್

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ನಟ ನಟಿಯರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆ ಆಗುವುದು ಸರ್ವೇ ಸಾಮಾನ್ಯ ಆಗಿದೆ.ಅದರಲ್ಲಿ ಕೆಲವೊಬ್ಬರು ಜನರ ಕಣ್ಣಲ್ಲಿ ಮುದ್ದಾದ ಜೋಡಿ ಹಕ್ಕಿಗಳಾಗಿ ಕಾಣಿಸುತ್ತಾರೆ.ಆ ಜೋಡಿಗಳಲ್ಲಿ ಒಂದು ಮುದ್ದಾದ ಜೋಡಿ ರಾಧಿಕಾ ಪಂಡಿತ್ ಮತ್ತು ಯಶ್ ಅವರ ಜೋಡಿ ನೋಡಲು ತುಂಬಾ ಮುದ್ದಾಗಿದ್ದು ಇವರಿಬ್ಬರೂ ಕೂಡ ಚಿತ್ರರಂಗದಲ್ಲಿ ತನ್ನದೇ ಅದ ಛಾಪನ್ನು ಮೂಡಿಸಿದ್ದಾರೆ.

ಇವರಿಬ್ಬರು ಒಟ್ಟಿಗೆ ಅಭಿನಯಿಸಿದ ಮೊದಲ ಸಿನಿಮಾ ಮೊಗ್ಗಿನ ಮನಸ್ಸು ಸೂಪರ್ ಹಿಟ್ ಆಗಿ ಅಂದಿನಿಂದಲೇ ಎಲ್ಲೋ ಒಂದು ಕಡೆ ಸೂಪರ್ ಜೋಡಿಗಳಾಗಿ ಮಿಂಚಲು ಶುರುಮಾಡಿದ್ದರು. ತದ ನಂತರದಲ್ಲಿ ಡ್ರಾಮಾ ,ಅಂಡ್ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಸಿನಿಮಾದಲ್ಲಿ ಇವರಿಬ್ಬರ ಜೋಡಿ ನೋಡುಗರಿಗೆ ಮೋಡಿ ಮಾಡಿದ್ದರಲ್ಲಿ ಎರಡು ಮಾತಿಲ್ಲ. ಇವರಿಬ್ಬರ ನಟನೆಗೆ ಇವರದ್ದೇ ಆದ ಅಭಿಮಾನಿಗಳ ಬಳಗವನ್ನು ಸಹ ಹೊಂದಿದ್ದಾರೆ.

ಸಿನಿಮಾ ರಂಗದಲ್ಲಿ ಎಲ್ಲೂ ಕೂಡ ಒಂದು ಚಿಕ್ಕ ಕಪ್ಪು ಚುಕ್ಕೆ ಇರದ ಜೋಡಿ ಇವರದ್ದು ಕೊನೆಗೆ 2016 ರಲ್ಲಿ ಸತಿಪತಿ ಆಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು .ಮದುವೆಯ ನಂತರ ರಾಧಿಕಾ ಪಂಡಿತ್ ಅವರು ಒಂದು ಸಿನಿಮಾ ಅಲ್ಲಿ ನಟನೆ ಮಾಡಿದ್ದು ಅದು ಅಷ್ಟೊಂದು ಹಿಟ್ ಆಗಿಲ್ಲ ಇತ್ತೀಚಿಗೆ ರಾಧಿಕಾ ಪಂಡಿತ್ ಮತ್ತು ಯಶ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಮದುವೆಯ ನಂತರದ ಜೀವನವನ್ನು ಸಂಪೂರ್ಣವಾಗಿ ತಮ್ಮ ಸಂಸಾರದ ಜವಾಬ್ದಾರಿ ನಿರ್ವಹಿಸಲು ತೊಡಗಿಸಿಕೊಂಡಿದ್ದಾರೆ. ಇದರಿಂದ ರಾಧಿಕಾ ಪಂಡಿತ್ ಅವರ ಗುಣ ನಡತೆಯ ಬಗ್ಗೆ ನಮಗೆ ತಿಳಿಯುವುದು ಹಾಗೂ ತನ್ನ ಎರಡು ಮಕ್ಕಳ ಲಾಲನೆ ಪೋಷಣೆ ಅಲ್ಲಿ ತನ್ನನು ತೊಡಗಿಸಿಕೊಂಡಿದ್ದಾರೆ. ಹಾಗೂ ತಾನೊಬ್ಬ ಅಪ್ಪಟ ಗೃಹಿಣಿ ಅನ್ನುವುದನ್ನು ನಿರೂಪಿಸುವಲ್ಲಿ ಯಶಸ್ಸು ಪಡೆದಿದ್ದಾರೆ.

ಇತ್ತೀಚೆಗೆ ತನ್ನ ಫ್ಯಾಮಿಲಿ ಫೋಟೋ ಅನ್ನು ತನ್ನ ಖಾಸಗಿ ಖಾತೆ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ತನ್ನ ಫ್ಯಾಮಿಲಿ ಜೊತೆ ಸಂತೋಷದದಿಂದ ಕಳೆಯುತ್ತಿರುವ ಫೋಟೋವನ್ನು ಹಾಕಿದ್ದು ಅದಕ್ಕೆ ಅವರ ಅಭಿಮಾನಿಗಳು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದರು. ಹೀಗೆ ಸದಾ ಕಾಲ ಸಂತೋಷದಿಂದ ಇರಿ ಎಂದು ಮನೋಪೂರ್ವಕವಾಗಿ ಹಾರೈಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ತನ್ನ ಮಗಳು ಐರ ಮತ್ತು ಮಗ ಅಥರ್ವ ಜೊತೆ ಕಳೆದಿದ್ದ ಹಲವಾರು ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

ಹೀಗೆ ಸಿನಿಮಾ ರಂಗದಿಂದ ದೂರ ಆದರೂ ಕೂಡ ಅಭಿಮಾನಿಗಳ ಜೊತೆಗೆ ಯಾವಾಗಲೂ ಸಂಪರ್ಕದಲ್ಲಿ ಇದ್ದಾರೆ. ಗೋವಾದಲ್ಲಿ ತನ್ನ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಲೇ ತಮ್ಮ ಫ್ಯಾಮಿಲಿ ಫೋಟೋ ಅನ್ನು ಇನ್ಸ್ಟಗ್ರಾಮ್ ಅಲ್ಲಿ ಅಪ್ಲೋಡ್ ಮಾಡಿ ಇದು ನನ್ನ 500 ಚಿತ್ರ ಆಗಿದ್ದು ಅದರ ಜೊತೆ ತಮ್ಮ ಇನ್ನೊಂದು ಖುಷಿಯ ವಿಚಾರವನ್ನು ಸಹ ಹಂಚಿಕೊಂಡಿದ್ದಾರೆ. ಅದೇನೆಂದರೆ ತಾನು ಮತ್ತು ಯಶ್ ಅವರು ಸಿನಿಮಾ ಒಂದರಲ್ಲಿ ಒಟ್ಟಾಗಿ ನಟಿಸುತಲಿದ್ದು ಅದರ ಸಂಪೂರ್ಣ ಮಾಹಿತಿಯನ್ನು ಸದ್ಯದಲ್ಲೇ ತಿಳಿಸುವೆ ಎಂದು ಹೇಳಿಕೊಂಡಿದ್ದಾರೆ. ಹಾಗೂ ಅವರ ಅಭಿಮಾನಿಗಳು ಕೂಡ ಅವರನ್ನು ಬಹಳ ವರ್ಷಗಳ ಬಳಿಕ ಇವರಿಬ್ಬರ ಜೋಡಿ ಒಟ್ಟಿಗೆ ನೋಡಲು ಹಾತೊರೆಯುತ್ತಿದ್ದಾರೆ ಇವರ ಈ ಸಿನಿಮಾ ಭರ್ಜರಿ ಗೆಲುವು ಪಡೆಯಲಿ ಎಂದು ಹಾರೈಸೋಣ.

Leave A Reply

Your email address will not be published.

error: Content is protected !!