ಹಳ್ಳಿ ಜನರೊಂದಿಗೆ ಅಡುಗೆ ಮಾಡಿ ಮಶ್ರೂಮ್ ಬಿರಿಯಾನಿ ಸವಿದ ರಾಹುಲ್ ಗಾಂಧಿ!

ಟಿವಿ ಚಾನೆಲ್, ಯೂಟ್ಯೂಬ್ ಚಾನೆಲ್​ಗಳಲ್ಲಿ ಅಡುಗೆ ಕಾರ್ಯಕ್ರಮಗಳಿಗೇನೂ ಬರವಿಲ್ಲ. ಯಾವ ಅಡುಗೆ ಬೇಕೆಂದು ಟೈಪ್ ಮಾಡಿದರೆ ಸಾವಿರಾರು ವಿಡಿಯೋಗಳು ಬರುತ್ತವೆ. ಹಾಗೇ, ಕುಕಿಂಗ್ ಶೋನಲ್ಲಿ ನಾನಾ ಕ್ಷೇತ್ರದ ಅತಿಥಿಗಳನ್ನು ಕರೆಸಿ, ಅಡುಗೆ ಮಾಡಿಸುವ ಟ್ರೆಂಡ್ ಶುರುವಾಗಿದೆ. ಆದರೆ ತಮಿಳುನಾಡಿನ ಪ್ರಸಿದ್ಧ ಯೂಟ್ಯೂಬ್ ಅಡುಗೆ ಚಾನೆಲ್ ವಿಲೇಜ್ ಕುಕಿಂಗ್ ಚಾನೆಲ್​ಗೆ ವಿಶೇಷ ಅತಿಥಿಯೊಬ್ಬರು ಬಂದಿದ್ದರು. ಅವರೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ರಾಹುಲ್ ಗಾಂಧಿ ವಿಲೇಜ್ ಕುಕಿಂಗ್ ಚಾನೆಲ್ ನ ಅಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿನ ಜನರೊಂದಿಗೆ ಮಶ್ರೂಮ್ ಬಿರಿಯಾನಿಯನ್ನು ಸವಿದ ವಿಡಿಯೋ ಈಗ ವೈರಲ್ ಆಗಿದೆ.

ತಮಿಳಿನ ವಿಲೇಜ್ ಕುಕ್ಕಿಂಗ್ ಚಾನೆಲ್ ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಯುಟ್ಯೂಬ್ ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ ತಮಿಳಿನ ವಿಲೇಜ್ ಕುಕ್ಕಿಂಗ್ ಚಾನೆಲ್ ಕಾಡಿನ ಮೂಲೆಯೊಂದರಲ್ಲಿ ಅಡುಗೆ ಮಾಡಿ ಈ ಶೋ ಜನರ ಗಮನ ಸೆಳೆಯುತ್ತದೆ. 71 ಲಕ್ಷಕ್ಕೂ ಹೆಚ್ಚು ಸಬ್​ಸ್ಕ್ರೈಬರ್​ಗಳನ್ನು ಈ ಚಾನೆಲ್​ ಹೊಂದಿದೆ ಆದರೆ ಸುದ್ದಿ ಅದಲ್ಲ ಈ ಬಾರಿ ಇಂತಹಾ ಅಡುಗೆ ಶೋ ಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದರು. ಅವರೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಅಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಅಲ್ಲಿನ ಜನರ ಜೊತೆ ಕೆಲಕಾಲ ಮಾತುಕತೆಯನ್ನೂ ನಡೆಸಿದ್ದಾರೆ. ಅಲ್ಲದೆ, ತಾವೇ ಖುದ್ದಾಗಿ ಆ ಬಿರಿಯಾನಿಗೆ ರಾಯ್ತಾ ಸಿದ್ಧಪಡಿಸಿದ್ದಾರೆ. ಕಾಡಿನ ಮಧ್ಯೆ ಸೌದೆ ಒಲೆಯಲ್ಲಿ ಸಿದ್ಧವಾದ ಬಿರಿಯಾನಿಯನ್ನು ಬಾಳೆ ಎಲೆಯಲ್ಲಿ ಬಡಿಸಿಕೊಂಡು ಸವಿದ ರಾಹುಲ್ ಗಾಂಧಿ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ರಾಹುಲ್ ಗಾಂಧಿ “ವಿಲೇಜ್ ಕುಕ್ಕಿಂಗ್” ಅಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಶ್ರೂಮ್ ಬಿರಿಯಾನಿಯನ್ನು ಸವಿದಿದ್ದಾರೆ. ಅಷ್ಟೇ ಅಲ್ಲದೆ ರಾಹುಲ್ ಗಾಂಧಿ ಸ್ವತಃ ಬಿರಿಯಾನಿಗಾಗಿ ರಾಯತ ಸಿದ್ದಪಡಿಸಿದ್ದಾರೆ. ಬಿರಿಯಾನಿ ಸವಿಯುಂಡ ರಾಹುಲ್ ಗಾಂಧಿ ತಮಿಳಿನಲ್ಲಿ ನಲ್ಲ ಇರುಕು (ಇದು ಚೆನ್ನಾಗಿದೆ) ಎಂದು ಹೇಳಿದ್ದಾರೆ. ಅಗಲವಾದ ಸೌದೆ ಒಲೆಯಲ್ಲಿ ದೊಡ್ಡದಾದ ಬಾಣಲಿಯಲ್ಲಿ ತಯಾರಾದ ಮಶ್ರೂಮ್ ಬಿರಿಯಾನಿಯನ್ನು ಮೆಚ್ಚಿದ ರಾಹುಲ್ ಗಾಂಧಿ ಅದನ್ನು ಹೇಗೆ ಸಿದ್ಧಪಡಿಸಲಾಗುವುದು ಎಂಬುದನ್ನು ಕೂಡ ಕೇಳಿ ತಿಳಿದುಕೊಂಡರು. ಅಲ್ಲದೆ, ತಾವು ಕೂಡ ವಿಲೇಜ್ ಕುಕಿಂಗ್ ಚಾನೆಲ್ ನೋಡುವುದಾಗಿಯೂ ಹೇಳಿದರು. ನೀಲಿ ಟಿ-ಶರ್ಟ್​, ಪ್ಯಾಂಟ್ ಧರಿಸಿ ಸಿಂಪಲ್ ಆಗಿ ಬಂದಿದ್ದ ರಾಹುಲ್ ಗಾಂಧಿ ತಮಿಳುನಾಡಿನ ದೇಸಿ ಅಡುಗೆಯ ಬಗ್ಗೆಯೂ ಮಾಹಿತಿ ಪಡೆದರು. ಅವರ ಜೊತೆಗೆ ತಮಿಳುನಾಡಿನ ಕರೂರ್ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಭಾಗವಹಿಸಿ, ಇಂಗ್ಲಿಷ್​ನಲ್ಲಿ ಮಾಹಿತಿ ನೀಡಿದರು.

ರಾಯ್ತಾ ಮಾಡುವಾಗ ಅದಕ್ಕೆ ಹಾಕುವ ಸಾಮಗ್ರಿಗಳ ತಮಿಳು ಹೆಸರುಗಳನ್ನು ಕೇಳಿ ತಿಳಿದುಕೊಂಡ ರಾಹುಲ್ ಗಾಂಧಿ ವಿಲೇಜ್ ಕುಕಿಂಗ್ ಚಾನೆಲ್ನ ಶೆಫ್ ರೀತಿಯಲ್ಲೇ ಆ ಹೆಸರುಗಳನ್ನು ಹೇಳುತ್ತಾ ಅಡುಗೆ ಮಾಡಿದ್ದು ವಿಶೇಷವಾಗಿತ್ತು. ಅಡುಗೆಯ ನಂತರ ಚಾಪೆ ಮೇಲೆ ಕುಳಿತು, ಆ ಯೂಟ್ಯೂಬ್ ಚಾನೆಲ್ನವರೊಂದಿಗೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ ನಿಮಗೆ ಬೇರೆ ದೇಶಕ್ಕೆ ಹೋಗಿ ಅಡುಗೆ ಮಾಡಬೇಕೆಂಬ ಕನಸಿಲ್ಲವೇ? ಎಂದು ಕೇಳಿದರು. ಹಾಗೇ, ನನ್ನ ಆತ್ಮೀಯ ಸ್ನೇಹಿತನೊಬ್ಬ ಅಮೆರಿಕದಲ್ಲಿದ್ದಾನೆ. ಆತನಿಗೆ ನಾನು ಹೇಳಿ ನಿಮ್ಮ ಅಡುಗೆ ಶೋ ನಡೆಸಲು ವ್ಯವಸ್ಥೆ ಮಾಡಿಸುತ್ತೇನೆ. ಅಮೆರಿಕಕ್ಕೂ ಹೋಗಿ ಭಾರತೀಯ ಅಡುಗೆ ಮಾಡಿಬನ್ನಿ. ಹಾಗೇ, ಕರ್ನಾಟಕ, ಕೇರಳ ಸೇರಿದಂತೆ ಭಾರತದ ಬೇರೆ ರಾಜ್ಯಗಳಿಗೂ ಹೋಗಿ ಅಡುಗೆ ಮಾಡುವಂತೆ ಸಲಹೆ ನೀಡಿದ್ದಾರೆ. ರಾಹುಲ್ ಗಾಂಧಿ ಬಂದಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ವಿಲೇಜ್ ಕುಕಿಂಗ್ ಚಾನೆಲ್ ಟೀಂನವರು ತಮ್ಮ ಚಾನೆಲ್​ನ ಸಬ್​ಸ್ಕ್ರೈಬರ್​ಗಳಿಗೆ ಒಂದು ದಿನ ಔತಣಕೂಟ ಆಯೋಜಿಸಬೇಕೆಂಬ ಕನಸಿದೆ ಎಂದು ಹೇಳಿದರು. ನೀವು ಊಟ ಆಯೋಜಿಸಿದಾಗ ನನ್ನನ್ನೂ ಕರೆಯಿಸಿ, ನಾನೂ ಬರುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು. ಮಶ್ರೂಮ್ ಬಿರಿಯಾನಿಯನ್ನು ಸವಿದ ರಾಹುಲ್ ಗಾಂಧಿ ತಮಿಳಿನಲ್ಲೇ ನಲ್ಲ ಇರುಕು (ತುಂಬ ಚೆನ್ನಾಗಿದೆ) ಎಂದು ಹೇಳಿ ಮೆಚ್ಚುಗೆ ಸೂಚಿಸಿದರು. ರಾಹುಲ್ ಗಾಂಧಿ ಅವರ ಈ ಅಡುಗೆ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ತಮಿಳುನಾಡು ಪ್ರವಾಸದಲ್ಲಿದ್ದ ವೇಳೆ ಅವರು ಕೊಯಮತ್ತೂರು ಮತ್ತು ತಿರುಪ್ಪೂರಿಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಕೈಗಾರಿಕೆ ಹಾಗೂ ಕೃಷಿ ವಲಯದ ಅಭಿವೃದ್ಧಿ ಮತ್ತು ಕೇಂದ್ರ ಸರ್ಕಾರವು ಅಂಗೀಕರಿಸಿದ ಹೊಸ ಕೃಷಿ ಕಾನೂನುಗಳ ಬಗ್ಗೆ ಸಂವಹನ ನಡೆಸಿದ್ದರು.

Leave A Reply

Your email address will not be published.

error: Content is protected !!