ಬಿಗ್ ಬಾಸ್ ಸೀಸನ್ 16 ನಲ್ಲಿ ನಿರೂಪಣೆ ಮಾಡಲು ಬಾಲಿವುಡ್ ನಟ ಸಲ್ಮಾನ್ ಖಾನ್ ಕೇಳಿರುವ ಸಂಭಾವನೆ ಎಷ್ಟು ಗೊತ್ತಾ ನೀಡಿದರೆ ನಿಜಕ್ಕೂ ಬೆರಗಾಗ್ತೀರಾ

ಬಿಗ್ ಬಾಸ್ ರಿಯಾಲಿಟಿ ಶೋ ಕಿರುತೆರೆ ಇತಿಹಾಸದಲ್ಲಿ ಅತ್ಯಂತ ಜನಪ್ರಿಯತೆ ಹೊಂದಿರುವ ರಿಯಾಲಿಟಿ ಶೋ. ಇದು ತೆರೆಕಂಡಿರುವ ಎಲ್ಲಾ ಭಾಷೆಯಲ್ಲಿಯೂ ಕೂಡ ಸಕ್ಸಸ್ ಕಂಡಿದೆ. ಹಿಂದಿ ಕನ್ನಡ ತಮಿಳು ತೆಲುಗು ಮಲಯಾಳಂ ಹೀಗೆ ಎಲ್ಲಾ ಭಾಷೆಯಲ್ಲೂ ಕೂಡ ಬಿಗ್ ಬಾಸ್ ರಿಯಾಲಿಟಿ ಶೋ, ಪ್ರತಿ ವರ್ಷವೂ ಕೂಡ ಟೆಲಿಕಾಸ್ಟ್ ಆಗುತ್ತದೆ. ನಮ್ಮ ಕನ್ನಡದಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮ ತುಂಬಾ ಪ್ರಸಿದ್ಧಿ ಪಡೆದಿದ್ದು ಈಗಾಗಲೇ 8ಸೀಸನ್ ಗಳನ್ನು ಕಂಪ್ಲೀಟ್ ಮಾಡಿದೆ. ಹಾಗೆ ಇದೇ ವರ್ಷ 9ನೇ ಸೀಸನ್ ಕೂಡ ಶುರುವಾಗಲಿದೆ.

ಇನ್ನೇನು ಮುಂದಿನ ತಿಂಗಳು ಆಗಸ್ಟ್ ನಲ್ಲಿ ಬಿಗ್ ಬಾಸ್ ಹೊಸ ಸೀಸನ್ ಪ್ರಾರಂಭವಾಗಲಿದ್ದು ಯಾವ ಯಾವ ಸ್ಪರ್ಧಿಗಳು ಬರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಅಷ್ಟೇ ಅಲ್ಲದೆ ಹಿಂದಿ ಬಿಗ್ ಬಾಸ್ ಸೀಸನ್ 16 ಕೂಡ ಮುಂದಿನ ತಿಂಗಳು ಲಾಂಚ್ ಆಗಲಿದೆ ಎಂಬ ಸುದ್ದಿ ಇದೆ. ಇದರ ಹಿಂದೆ ಸಲ್ಮಾನ್ ಖಾನ್ ಅವರ ಬಿಗ್ ಬಾಸ್ ರಿಯಾಲಿಟಿ ಶೋನ ಸಂಭಾವನೆ ವಿಷಯ ಕೂಡ ಹರಿದಾಡುತ್ತಿದೆ. ಒಂದು ಸಿಸನ್ ಗೆ ಸಲ್ಮಾನ್ ಖಾನ್ ಅವರು ತೆಗೆದುಕೊಂಡ ಸಂಭಾವನೆ ಮೊತ್ತ ಕೇಳಿ ವೀಕ್ಷಕರೆಲ್ಲರೂ ದಂಗಾಗಿದ್ದಾರೆ.

ಸುಮಾರು ಹತ್ತು ವರ್ಷಗಳಿಂದ ಸಲ್ಮಾನ್ ಖಾನ್ ಅವರೇ ಹಿಂದಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. 2010 ರಿಂದ ಇಲ್ಲಿಯವರೆಗೆ ಸಲ್ಮಾನ್ ಖಾನ್ ಅವರೇ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರು ತಮ್ಮ ನಿರೂಪಣೆಯನ್ನು ಪ್ರಾರಂಭಿಸಿದ್ದು ಬಿಗ್ ಬಾಸ್ ಸೀಜನ್ 8 ರಿಂದ. ಬಿಗ್ ಬಾಸ್ ಸೀಸನ್ ಗೆ 5ಕೋಟಿ ರುಪಾಯಿಗಳನ್ನು ಒಂದು ಎಪಿಸೋಡ್ ಗೆ ಸಲ್ಮಾನ್ ಖಾನ್ ಪಡೆದಿದ್ದರು ಹಾಗೆ ನಂತರ ಬಿಗ್ ಬಾಸ್ ಸೀಸನ್ 9 ಕ್ಕೆ ಸಲ್ಮಾನ್ ಖಾನ್ 8ಕೋಟಿ ರುಪಾಯಿಗಳನ್ನು ಒಂದು ಎಪಿಸೋಡ್ ಗೆ ಪಡೆಯುತ್ತಿದ್ದರು.

ತದನಂತರ ಬಿಗ್ ಬಾಸ್ ಮುಂದಿನ ನಾಲ್ಕು ಸೀಸನ್ ಗಳಲ್ಲಿ ತಲಾ ಹನ್ನೊಂದು ಕೋಟಿ ರೂಪಾಯಿಗಳನ್ನು ಪ್ರತಿ ಎಪಿಸೋಡ್ ಗೆ ಸಲ್ಮಾನ್ ಖಾನ್ ಪಡೆಯುತ್ತಿದ್ದರು. ಇದೀಗ ಅಂದರೆ ಕಳೆದ ವರ್ಷವಷ್ಟೇ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ಸೀಸನ್ ಕ್ಕೆ ಪ್ರತಿ ಎಪಿಸೋಡ್ ಗೆ 25 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದರೆ ನೀವು ನಂಬಲೇಬೇಕು. ಒಟ್ಟಾರೆ ಕಂಪ್ಲೀಟ್ ಸೀಸನ್ ಗೆ ಸಲ್ಮಾನ್ ಖಾನ್ ಅವರು 350 ಕೋಟಿ ಸಂಭಾವನೆ ತೆಗೆದುಕೊಂಡಿದ್ದರು. ವರ್ಷ ವರ್ಷ ಕಳೆದಂತೆ ಸಲ್ಮಾನ್ ಖಾನ್ ಅವರ ಸಂಭಾವನೆ ಹೆಚ್ಚಾಗುತ್ತಲೇ ಇದೆ ಇದೀಗ ಈ ವರ್ಷದ ಬಿಗ್ ಬಾಸ್ ಗೆ ಸಲ್ಮಾನ್ ಖಾನ್ ಅವರು ಕೇಳಿರುವ ಸಂಭಾವನೆಯನ್ನು ಕೇಳಿ ಚಾನೆಲ್ ಸಂಸ್ಥಾಪಕರೇ ಬೆಚ್ಚಿಬಿದ್ದಿದ್ದಾರೆ.

ಹೌದು ಸ್ನೇಹಿತರೆ ಸಲ್ಮಾನ್ ಖಾನ್ ಅವರು ಕೇವಲ ಒಂದೇ ಒಂದು ಎಪಿಸೋಡ್ ಗೆ ಕೇಳಿರುವುದು ಬರೋಬ್ಬರಿ 60 ರಿಂದ 70 ಕೋಟಿ ರುಪಾಯಿಗಳು. ತಮ್ಮ ಸಂಭಾವನೆಯನ್ನು ಮೂರು ಪಟ್ಟು ಹೆಚ್ಚಳ ಮಾಡಿಕೊಂಡಿದ್ದಾರೆ ಸಲ್ಮಾನ್ ಖಾನ್. ಚಾನಲ್ ನವರು ಸಲ್ಮಾನ್ ಖಾನ್ ಅವರ ಬೇಡಿಕೆಯ ಪ್ರಕಾರ ಎಲ್ಲಾ ಎಪಿಸೋಡ್ ಗಳು ಸೇರಿ ಒಟ್ಟಾರೆ ಕಂಪ್ಲೀಟ್ ಬಿಗ್ ಬಾಸ್ ಸೀಸನ್ 16 ಗೆ ಸಲ್ಮಾನ್ ಖಾನ್ ಅವರಿಗೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಕೊಡಬೇಕಾಗುತ್ತದೆ. ಸಂಭಾವನೆಯನ್ನು ಮೂರು ಪಟ್ಟು ಹೆಚ್ಚು ಮಾಡದಿದ್ದರೆ ತಾನು ನಿರೂಪಣೆ ಮಾಡಲ್ಲ ಎಂದು ಸಲ್ಮಾನ್ ಖಾನ್ ಅವರು ಪಟ್ಟು ಹಿಡಿದಿದ್ದಾರೆ. ಸಲ್ಮಾನ್ ಖಾನ್ ಅವರ ವಿಶಿಷ್ಟ ಮತ್ತು ವಿಭಿನ್ನ ನಿರೂಪಣೆಯಿಂದಲೇ ಬಿಗ್ ಬಾಸ್ ಕಾರ್ಯಕ್ರಮ ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ ಇದೀಗ ಸಲ್ಮಾನ್ ಖಾನ್ ಅವರನ್ನು ಕೈ ಬಿಡುವ ಸಾಧ್ಯತೆಯಿಲ್ಲ ಸಲ್ಮಾನ್ ಖಾನ್ ಅವರು ಕೇಳಿರುವ ಸಂಭಾವನೆಗೆ ತಲೆತಗ್ಗಿಸಬೇಕು ಅಷ್ಟೆ.

Leave A Reply

Your email address will not be published.

error: Content is protected !!