ನಟ ದರ್ಶನ್ ಗೆ ಇನ್ನೊಂದು ಮುಖವಿದೆ; ಡಿ ಬಾಸ್ ಬಗ್ಗೆ ನೀನಾಸಂ ಸತೀಶ್ ಬಿಚ್ಚಿಟ್ಟ ಸತ್ಯ

ಕನ್ನಡ ಸಿನಿಮಾದಲ್ಲಿ ನಟಿಸುವ ಸ್ಟಾರ್ ನಟರುಗಳಲ್ಲಿ ದರ್ಶನ್ ಅಂದ್ರೆ ಲಕ್ಷಾಂತರ ಜನರಿಗೆ ಅಚ್ಚುಮೆಚ್ಚು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದುವರೆಗೆ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಅದ್ಭುತ ನಟ ಎನಿಸಿಕೊಂಡಿದ್ದಾರೆ. ಇನ್ನು ದರ್ಶನ್ ಅವರು ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುವುದು ವಿಶೇಷ. ಕನ್ನಡದಲ್ಲಿ ಬಹುಶಃ ದಾಸನಿಗೆ ಇರುವಷ್ಟು ಅಭಿಮಾನಿ ಬಳಗ ಬೇರೆ ಯಾವ ನಟರಿಗೂ ಇರಲು ಸಾಧ್ಯವೇ ಇಲ್ಲ.

ನಟ ದರ್ಶನ್ ಅವರ ದಾಸ ಇರಬಹುದು, ಮೆಜೆಸ್ಟಿಕ್ ಇರಬಹುದು, ಯಜಮಾನ ಇರಬಹುದು, ರಾಬರ್ಟ್ ಇರಬಹುದು ಒಟ್ಟಿನಲ್ಲಿ ಅವರ ನಟಿಸಿರುವ ಯಾವುದೇ ಸಿನಿಮ ನೋಡಿದ್ರು ದರ್ಶನ್ ಒಬ್ಬ ವಿಭಿನ್ನ ನಟನಾಗಿ ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಅವರ ನಟನೆಯ ಸಿನಿಮಾಗಳೆಲ್ಲವೂ ಸೂಪರ್ ಡೂಪರ್ ಹಿಟ್ ಆಗುತ್ತದೆ. ಇತ್ತೀಚಿಗೆ ತೆರೆಕಂಡ ಅವರ ರಾಬರ್ಟ್ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲ ದೇಶಾದ್ಯಂತ ಸೂಪರ್ ಹಿಟ್ ಫಿಲಂ ಎನಿಸಿಕೊಂಡಿದೆ.

ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಹೊಸ ಕ್ರಾಂತಿಯನ್ನು ಮೂಡಿಸಲು ತೆರೆ ಮೇಲೆ ಬರುವುದಕ್ಕೆ ಸಜ್ಜಾಗಿದೆ. ಈಗಾಗಲೇ ಫಾರಿನ್ ಗಳಲ್ಲಿ ಕೂಡ ಶೂಟಿಂಗ್ ಮಾಡಲಾಗಿದ್ದು ನವೆಂಬರ್ ಹೊತ್ತಿಗೆ ಕ್ರಾಂತಿ ಸಿನಿಮಾ ಅಭಿಮಾನಿಗಳಿಗೆ ರಸದೌತನ ನೀಡುವುದರಲ್ಲಿ ನೋ ಡೌಟ್. ಅದರಲ್ಲೂ ಈ ಬಾರಿ ಮಾಧ್ಯಮಗಳು ದರ್ಶನ್ ಅವರ ಸಿನಿಮಾನ ಪ್ರಚಾರ ಮಾಡುವುದನ್ನು ಬ್ಯಾನ್ ಮಾಡಿರುವ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳೆ ಕ್ರಾಂತಿ ಸಿನಿಮಾದ ಪ್ರಮೋಶನ್ ಗೆ ರೆಡಿಯಾಗಿದ್ದಾರೆ. ಹಾಗಾಗಿ ದರ್ಶನ್ ಅವರ ಕ್ರಾಂತಿ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುವುದು ಗ್ಯಾರಂಟಿ.

ಇವಿಷ್ಟು ಒಬ್ಬ ನಟನಾಗಿ ದರ್ಶನ್ ಬಗ್ಗೆ ನಿಮಗೂ ಗೊತ್ತಿರುವ ವಿಷಯ. ಆದರೆ ದರ್ಶನ ಅವರು ತೆರೆಯ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿಯೂ ಒಬ್ಬ ರಿಯಲ್ ಹೀರೋ ಎನಿಸಿಕೊಂಡವರು. ಇದುವರೆಗೆ ಸಾಕಷ್ಟು ಜನರಿಗೆ ಸಹಾಯ ಮಾಡಿರುವ ನಟ ದರ್ಶನ್ ಅವರು ಒಬ್ಬ ಮಾನವೀಯತೆ ಉಳ್ಳ ವ್ಯಕ್ತಿ. ಹಾಗಾಗಿ ದರ್ಶನ್ ಅವರಿಗೆ ಸಾಕಷ್ಟು ಸೆಲೆಬ್ರೆಟಿಗಳು ಕೂಡ ಅಭಿಮಾನಿಗಳಾಗಿದ್ದಾರೆ. ‘ದರ್ಶನ್ ಒಬ್ಬ ನಟ ಮಾತ್ರವಲ್ಲ, ಅವರಲ್ಲಿ ಇನ್ನೊಂದು ಮುಖವಿದೆ. ಅದೇನೆಂದರೆ ಎಲ್ಲರಿಗೂ ಒಳ್ಳೆಯದಾಗಬೇಕು ಎಲ್ಲರೂ ಒಂದೇ ಏನು ಅಂತ ಮನಸ್ಥಿತಿ ಇರುವ ವ್ಯಕ್ತಿ ಅವರು’. ಈ ಮಾತನ್ನು ಹೇಳಿದ್ದು ಕನ್ನಡ ಚಿತ್ರರಂಗದ ಮತ್ತೋರ್ವ ಸ್ಟಾರ್ ನಟ ಸತೀಶ್ ನೀನಾಸಂ.

ಹೌದು ನಟ ದರ್ಶನ್ ಅವರ ಬಗ್ಗೆ ಮಾತನಾಡಿದ ಸತೀಶ್ ನೀನಾಸಂ, ನಾನು ಕೂಡ ದರ್ಶನ್ ಸರ್ ಅವರ ಅಭಿಮಾನಿ ನನಗೆ ಅವರ ಜೊತೆಗೆ ಸಿನಿಮಾ ಮಾಡೋದಕ್ಕೆ ಬಹಳ ದೊಡ್ಡ ಆಸೆ ಇದೆ ಖಂಡಿತವಾಗಿಯೂ ಆ ರೀತಿ ಸಿನಿಮಾವನ್ನು ಮಾಡುತ್ತೇವೆ. ದರ್ಶನ್ ಒಬ್ಬ ನಟ ಮಾತ್ರವಲ್ಲದೆ ಅವರಲ್ಲಿ ಅತ್ಯುತ್ತಮ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಎಂದು ನಟ ಸತೀಶ್ ನೀನಾಸಂ ಹೇಳಿದ್ದಾರೆ. ಅಲ್ಲದೆ ಹೋಟೆಲೊಂದರಲ್ಲಿ ದರ್ಶನ್ ಅವರು ಸೆರೆಹಿಡಿದಂತ ಪ್ರಾಣಿಗಳ ಚಿತ್ರಗಳನ್ನ ಪ್ರದರ್ಶನಕ್ಕೆ ಇಡಲಾಗಿದ್ದು ಅದನ್ನು ನೋಡಿ ಸತೀಶ್ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ. ನಟ ನೀನಾಸಂ ಸತೀಶ್ ಕನ್ನಡದಲ್ಲಿ ಒಬ್ಬ ಪ್ರತಿಭಾನ್ವಿತ ನಟ ಎನಿಸಿಕೊಂಡವರು. ಲೂಸಿಯಾ ಚಿತ್ರದ ಮೂಲಕ ಗುರುತಿಸಿಕೊಂಡ ಸತೀಶ್ ನೀನಾಸಂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಹಲವಾರು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಇರುವ ಸತೀಶ್ ನೀನಾಸ ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಅಭಿನಯಿಸಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ.

Leave a Comment

error: Content is protected !!