ರಿಯಲ್ ಲೈಫ್ ನಲ್ಲೂ ಒಟ್ಟಾಗಿ ಸೇರಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಸತ್ಯಾ ಸೀರಿಯಲ್ನ ಭಾವ-ಭಾಮೈದ!

Satya Sirial Actors Kannada ಸ್ನೇಹಿತರೆ, ಈ ಬಾರಿಯ ವರಮಹಾಲಕ್ಷ್ಮಿ(Varamahalakshmi Habba) ಹಬ್ಬವನ್ನು ನಮ್ಮ ಕನ್ನಡ ಸಿನಿಮಾರಂಗದ ಸ್ಟಾರ್ ನಟ ನಟಿಯರ ಜೊತೆಗೆ ಕಿರುತೆರೆ ಸೆಲೆಬ್ರಿಟಿಗಳು ಕೂಡ ಬಹಳನೇ ಅದ್ದೂರಿಯಾಗಿ ತಮ್ಮ ತಮ್ಮ ಕುಟುಂಬದವರೊಂದಿಗೆ ಸೇರಿ ಮನೆಯಲ್ಲಿ ಲಕ್ಷ್ಮಿ ದೇವತೆಯನ್ನು ಪ್ರತಿಷ್ಠಾಪಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ದೇವರ ಪೂಜೆಯಲ್ಲಿ ಭಾಗಿಯಾಗಿ ಅದರ ಕೆಲ ಫೋಟೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಕೋರಿದರು.

ಸದ್ಯ ಈ ಎಲ್ಲಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಹೀಗಿರುವಾಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸತ್ಯ ಸಿರಿಯಲ್ನ ನಾಯಕ ನಟ ಸಾಗರ್ (Sagar) ಮತ್ತು ಸಹ ‌ನಟನ ಪಾತ್ರದಲ್ಲಿ ಅಭಿನಯಿಸುತ್ತಿರುವ ಸಿರುಂಡೆ ರಘು(Sirunde Raghu) ಅವರ ಫೋಟೋ ನೆಟ್ಟಿಗರ ಆಕರ್ಷಣೆಗೆ ಒಳಗಾಗುತ್ತಿದೆ. ಹೌದು ಗೆಳೆಯರೇ ಸತ್ಯ ಸೀರಿಯಲ್ ನಲ್ಲಿ ಬಾವ ಭಾಮೈದ ಎಂದು ಬಹಳ ಅನ್ಯೋನ್ಯವಾಗಿ ಕಾಣಿಸಿಕೊಳ್ಳುವಂತಹ

ಸಾಗರ್ ಮತ್ತು ರಘು ರಿಯಲ್ ಲೈಫ್ ನಲ್ಲಿಯೂ ಅಷ್ಟೇ ಅದ್ಭುತವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದು, ಇಬ್ಬರ ಮನೆಯವರು ಒಟ್ಟಾಗಿ ಸೇರಿ ಲಕ್ಷ್ಮಿ ದೇವಿಯನ್ನು ಕೂರಿಸಿ ಹಬ್ಬ ಆಚರಣೆ ಮಾಡಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಹೌದು ಗೆಳೆಯರೇ ನಟ್ ಸಾಗರ ಬಿಳಿ ಗೌಡ(Sagar Bili Gowda) ತಮ್ಮ ಕಾಲೇಜು ದಿನಗಳಿಂದಲೂ ಸಿರಿ ರಾಜು (Siri Raju) ಎಂಬುವರನ್ನು ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಮನೆಯವರೆಲ್ಲರ ಒಪ್ಪಿಗೆ ದೊರೆತ ನಂತರ ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡಿದರು.

ಅದರಂತೆ ರಘು (Raghu)ಕೂಡ ತಮ್ಮ ಬಹುಕಾಲದ ಗೆಳತಿ ರಂಜಿತ(Ranjitha) ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದರು. ಒಟ್ಟಿಗೆ ಒಂದೇ ಮನೆಯಲ್ಲಿ ಲಕ್ಷ್ಮಿ ದೇವಿಯನ್ನು (Goddess Lakshmi) ಸಿಂಗರಿಸಿ ಹೂವು ಹಾಗೂ ಹಣ್ಣುಗಳಿಂದ ಅಲಂಕಾರ ಮಾಡಿ ಹಬ್ಬವನ್ನು ಆಚರಿಸಿರುವುದು ವಿಶೇಷವಾಗಿ ಕಂಡುಬಂದಿದೆ. ತೆರೆಯ ಮೇಲೆ ಮಾತ್ರವಲ್ಲದೆ ತೆರೆ ಹಿಂದೆಯೂ ಕೂಡ ಈ ಗೆಳೆಯರು ಅಷ್ಟೇ ಅನ್ಯೋನ್ಯವಾಗಿರುವುದಕ್ಕೆ ಕಿರುತೆರೆ ಪ್ರೇಕ್ಷಕರು ಮನಸೋತು ಹೋಗಿದ್ದಾರೆ.

Leave A Reply

Your email address will not be published.

error: Content is protected !!