
ಬಡವರ ಸೇಬು ಸೀಬೆಯಲ್ಲಿದೆ ಹತ್ತಕ್ಕೂ ಹೆಚ್ಚು ಆರೋಗ್ಯಕರ ಗುಣಗಳು
ಬಡವರ ಪಾಲಿನ ಸೇಬು ಹಣ್ಣು ಎಂದೇ ಖ್ಯಾತ ಆಗಿರುವ ಸೀಬೆ ಹಣ್ಣು, ಪೇರಳೆ ಹಣ್ಣು ಇದು ಕಾಯಿಲೆಗಳಿಗೆ ರಾಮ ಬಾಣ ಇದ್ದಂತೆ. ಸೇಬಿನ ಬದಲು ದಿನಕ್ಕೊಂದು ಸೀಬೆ ಹಣ್ಣು ತಿಂದು ಆರೋಗ್ಯವಾಗಿ ಹಾಗೂ ವೈದ್ಯರಿಂದ ದೂರ ಇರಿ ಎಂದು ನಮ್ಮ ಹಿರಿಯರು ಹಿಂದೆಯೇ ಹೇಳಿದ್ದರು. ಯಾಕಂದ್ರೆ ಉತ್ತಮ ಹಣ್ಣುಗಳಲ್ಲಿ ಸೀಬೆ ಹಣ್ಣು ಕೂಡಾ ಒಂದು. ಅಗತ್ಯವಾಗಿ ಬೇಕಿರುವ ಪ್ರಮುಖ ಪೌಷ್ಟಿಕಾಂಶಗಳನ್ನು ಈ ಸೀಬೆ ಹಣ್ಣು ಹೊಂದಿರುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಡಯೆಟ್ ಲಿಸ್ಟ್ ನಲ್ಲಿ ಸೀಬೆ ಹಣ್ಣನ್ನು ಸೇರಿಸಿಕೊಳ್ಳಬಹುದು. ಕಡಿಮೆ ಕ್ಯಾಲೋರಿಯ ಈ ಹಣ್ಣು ದೇಹಕ್ಕೆ ವಿಟಮಿನ್ ಗಳ ಮಹಾ ಪೂರವನ್ನೆ ಹರಿಸುತ್ತದೆ. ಕೆಲವರು ಸೀಬೆ ಹಣ್ಣು ಕೊಬ್ಬಿನ ಪ್ರಮಾಣವನ್ನು ಕುಂಠಿತಗೊಳ್ಳುವಂತೆ ಮಾಡುತ್ತದೆ ಎನ್ನುತ್ತಾರೆ. ಕಿತ್ತಳೆ ಹಣ್ಣಿಗಿಂತ ಅತೀ ಹೆಚ್ಚು ವಿಟಮಿನ್ ಅಂಶ ಹೊಂದಿರುವ ಈ ಹಣ್ಣು ಸೇವಿಸುವುದರಿಂದ ಕಣ್ಣಿನ ಪೊರೆ, ಅಸ್ಲೇಮರ್, ಅರ್ಥಾರೆಟಿಸ್ ಇಂತಹ ಕಾಯಿಲೆಗಳನ್ನು ದೂರ ಮಾಡಿಕೊಳ್ಳಬಹುದು.
ಇನ್ನೂ ಇದರಲ್ಲಿ ಇರುವ ಫೈಬರ್ ಅಂಶ ದೇಹದ ಜೀರ್ಣ ಕ್ರಿಯೆಯನ್ನು ಹೆಚ್ಚಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲದೇ ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಗಳನ್ನು ದೂರ ಮಾಡುತ್ತದೆ. ಕೆಲವು ರೀಸರ್ಚ್ ಗಳ ಪ್ರಕಾರ ಸೀಬೆ ಹಣ್ಣು ತಿನ್ನುವಾಗ ಅದರೇಳಿನ ಹಸಿರು ಸಿಪ್ಪೆಯನ್ನು ತೆಗೆದು ಸೇವಿಸಿದರೆ ಒಳ್ಳೆಯದು. ಯಾಕೆ ಅಂದ್ರೆ ಅದರಲ್ಲಿರುವ ಅಧಿಕ ಗ್ಲೂಕೋಸ್ ಪ್ರಮಾಣ ರಕ್ತದಲ್ಲಿ ಇರುವ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ವಿಟಮಿನ್ A B C ಮತ್ತು ಪೊಟ್ಯಾಷಿಯಂ ಅಂಶವನ್ನು ಹೊಂದಿರುವ ಸೀಬೆ ಹಣ್ಣು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸೀಬೆ ಎಳೆಯ ಪೇಸ್ಟ್ ಮಾಡಿ ಅದನ್ನ ಮುಖಕ್ಕೆ ಹಚ್ಚಿದರೆ, ಮುಖದಲ್ಲಿ ಇರುವ ಎಣ್ಣೆ ಅಂಶ ಕಡಿಮೆ ಆಗಿ ಚರ್ಮ ಬಿಗಿಯಾಗಿ ಕಾಣುತ್ತೆ ಎಂದು ಕೆಲವು ಬ್ಯೂಟಿ ಎಕ್ಸ್ಪರ್ಟ್ ಗಳು ಹೇಳಿದ್ದಾರೆ.
ಇದರಲ್ಲಿರುವ B6 ನಿಂಡ ಮೆದುಳು ಚುರುಕು ಆಗುತ್ತದೆ. ಓದುವ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚುತ್ತದೆ. ಇದರಲ್ಲಿ ಇರುವ ನಾರಿನ ಅಂಶವು ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಆಗದಂತೆ ತಡೆಗಟ್ಟುತ್ತದೆ. ಕೆಲವರಿಗೆ ಸೀಬೆ ಹಣ್ಣಿನಿಂದ ಗಂಟಲಿನಲ್ಲಿ ಅಲರ್ಜಿ ಆಗುವ ಸಾಧ್ಯತೆ ಇರುತ್ತದೆ ಅಂತವರು ಹಣ್ಣಿಗೆ ಉಪ್ಪು ಬೆರೆಸಿ ಸೇವಿಸಬೇಕು. ವಯಸ್ಸಾದವರು ಮತ್ತು ಹಲ್ಲಿನ ತೊಂದರೆ ಇರುವವರು ಸೀಬೆ ಹಣ್ಣಿನ ಜ್ಯೂಸ್ ಸೇವಿಸಬಹುದು. ಸೀಬೆ ಹಣ್ಣಿನಿಂದ ಶೀತ ಮತ್ತು ನೆಗಡಿ ಉಂಟಾಗುವುದಿಲ್ಲ ಬದಲಿಗೆ ಶೀತ ನೆಗಡಿಯಿಂದ ಉಂಟಾಗುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಇದನ್ನು ಅತಿಸಾರ ಮತ್ತು ವಾಂತಿ ಇರುವವರು ಉಪಯೋಗಿಸುವುದು ತುಂಬಾ ಉಪಯುಕ್ತ. ಆದ್ದರಿಂದ ನಾವು ನೋಡಿಯೂ ನೋಡದ ಹಾಗೆ ರಸ್ತೆಯ ಬದಿಗೆ ಇರುವುದನ್ನು ಕಾಣದಂತೆ ಹಾಗೆ ಹೊರಟು ಹೋಗುತ್ತೇವೆ. ಕಡಿಮೆ ಬೆಲೆಯಲ್ಲಿ ಇರುವ ಸೀಬೆ ಹಣ್ಣು ಒಂದು ಸೇಬು ಹಣ್ಣಿನಲ್ಲಿ ಇರುವಷ್ಟೇ ಪೋಷಕಾಂಶಗಳನ್ನು ಹೊಂದಿರುತ್ತದೆ.