ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಸಿದ್ದಾರ್ಥ್ ಮಲ್ಹೋತ್ರಾ ಬಳಿ ಇದೆ ಐಷಾರಾಮಿ ಕಾರು, ಬೈಕ್ ಗಳು; ಬೆಲೆ ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಿ!

ಬಾಲಿವುಡ್ ನ ಮೋಸ್ಟ್ ಎಲಿಜಿಬಿಲ್ ಆಂಡ್ ವಾಂಟೆಡ್ ಬ್ಯಾಚುಲರ್ ಅಂದ್ರೆ ನಟ ಸಿದ್ಧಾರ್ಥ್ ಮಲ್ಹೋತ್ರಾ. ಇಷ್ಟು ದಿನ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಡೇಟಿಂಗ್ ನಲ್ಲಿದ್ರು. ಇವರಿಬ್ಬರೂ ಶೇರ್ಷಾ ಸಿನಿಮಾದಲ್ಲಿ ಒಂದಾದ ಬಳಿಕ ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಆದರೆ ಇದೀಗ ಕಿಯರಾ ತಾನು ಒಂಟಿಯಾಗಿರೋದನ್ನ ಘೋಷಿಸಿದ್ದಾರೆ. ಹಾಗಾಗಿ ಇಅವರಿಬ್ಬರ ಸಂಬಂಧಕೆ ಎಳ್ಳು ನೀರು ಬಿಟ್ಟಂತಾಗಿದೆ.

ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಸಿದ್ಧಾರ್ಥ್ ಮಲ್ಹೋತ್ರಾ ಕೈನಲ್ಲಿ ಕೆಲವು ವಿಶೇಷವಾದ ಹಾಗೂ ಬಹು ನಿರೀಕ್ಷಿತ ಪ್ರಾಜೆಕ್ಟ್ ಗಳಿವೆ. ಈ ನಡುವೆ ಸಿದ್ಧಾತ್ರ ಕೂಡ ಕುಬೇರ ವಂಶದವರೇ ಎಂದು ಹೇಳಲಾಗುತ್ತಿದೆ. ಯಾಕೆ ಗೊತ್ತಾ? ಇವರ ಒಟ್ಟು ಆಸ್ತಿ ಸುಮಾರು 75 ಕೋಟಿ. ಅಷ್ಟೇ ಅಲ್ಲ ಸಿದ್ಧಾರ್ಥ್‌ ಅವರ ಬಳಿ ಐಷ್ರಾಮಿ ಕಾರು, ಬಂಗಲೆ ಎಲ್ಲವೂ ಇವೆ. ಬಾಲಿವುಡ್ ನಲ್ಲಿ ಐಷಾರಾಮಿ ಜೂವನ ನಡೆಸುತ್ತಿರುವ ನಟರುಗಳಲ್ಲಿ ಒಬ್ಬರಾದ ಸಿದ್ಧಾರ್ಥ್, ದುಬಾರಿ ಬೆಲೆಯ ಬೈಕ್ ಹಾಗೂ ಕಾರುಗಳನ್ನ ಕೊಂಡುಕೊಳ್ಳುವ ಕ್ರೇಜ್ ಹೊಂದಿದ್ದಾರೆ.

2012 ರಲ್ಲಿ, ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ತರು ಸಿದ್ಧಾರ್ಥ್. ಈ ಸಿನಿಮಾದಲ್ಲಿ ನಟಿಯಾ ಆಲಿಯಾ ಭಟ್ ಮತ್ತು ವರುಣ್ ಧವನ್ ಕೂಡ ತಮಮ್ ವೃತ್ತಿ ಜೀವನವನ್ನ ಆರಂಭಿಸಿದ್ದರು. ಅಂದಹಾಗೆ ಸಿದ್ದಾರ್ಥ್ ಮಲ್ಹೊತ್ರಾ ಒಂದು ಸಿನಿಮಾ ನಟನೆಗೆ ಸುಮಾರು 5-7 ಕೋಟಿ ಸಂಭಾವನೆ ಪಡೆಯುತ್ತಾರೆ. ಕೆಲವು ವರದಿ ಪ್ರಕಾರ ಅವರ ತಿಂಗಳ ಸಂಪಾದನೆಯೇ ಸುಮಾರು 50 ಲಕ್ಷ ರೂಗಳಷ್ಟು. ಸಿದ್ಧಾರ್ಥ್ ಮುಂಬೈನ ಪಾಲಿ ಹಿಲ್ ನಲ್ಲಿ ಕೋಟಿ ಬೆಲೆ ಬಾಳುವ ಐಷಾರಾಮಿ ಅಪಾರ್ಟ್ ಮೆಂಟ್ ನ ಒಡೆಯ. ಬಾಲಿವುಡ್ ನ ಸಾಕಷ್ಟು ಸೆಲಿಬ್ರೆಟಿಗಳು ಇಲ್ಲಿ ಮನೆಯನ್ನು ಹೊಂದಿದ್ದಾರೆ. ಇನ್ನು ಈ ಮನೆಯ ಒಳಾಂಗಣವನ್ನು ಸೆಲೆಬ್ರಿಟಿ ಡಿಸೈನರ್ ಗೌರಿ ಖಾನ್ ಅವರೇ ವಿನ್ಯಾಸಗೊಳಿಸಿದ್ದಾರೆ ಎನ್ನುವುದು ವಿಶೇಷ!

ಸಿದ್ಧಾರ್ಥ್ ಮಲ್ಹೋತ್ರಾ ಸಿನಿಮಾ ಮಾತ್ರವಲ್ಲದೇ ಸಾಕಷ್ಟು ಜಾಹೀರಾತುಗಳಲ್ಲಿ ನಟಿಸುತ್ತಾರೆ. ಅವರು ಸುಮಾರು 2-3 ಕೋಟಿ ರೂ ಸಂಭಾವನೆಯನ್ನು ಜಾಹಿರಾತುಗಳಲ್ಲಿ ನಟಿಸಲು ಪಡೆಯುತ್ತಾರೆ. ಬೆಲ್ವೆಡೆರೆ ಸ್ಟುಡಿಯೋ, ಒಪ್ಪೋ 5, ಹಾಪಿಟ್ಸ್ ಚಾಕೊಲೇಟ್‌ಗಳು, ಪಾಂಡ್ಸ್, ಸ್ಪ್ರೈಟ್, ಯುರೋ ಫ್ಯಾಶನ್ ಮೊದಲಾದವು ಸಿದ್ದಾರ್ಥ್ ಕಾಣಿಸಿಕೊಳ್ಳುತ್ತಿರುವ ಪ್ರಮುಖ ಜಾಹೀರಾತುಗಳು! ಇನ್ನು ಸಿದ್ಧಾರ್ಥ್ ಮಲ್ಹೋತ್ರಾ ನ್ಯೂಜಿಲೆಂಡ್ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಕೂಡ ಹೌದು.

ಸಿದ್ಧಾರ್ಥ್ ಮಲ್ಹೋತ್ರಾ ಬಳಿ ಇರುವ ವೆಹಿಕಲ್ ಗಳನ್ನು ನೋಡುವುದಾದರೆ ಎರಡು ಎಸ್ ಯು ವಿ ಹೊಂದಿದ್ದಾರೆ – 56 ಲಕ್ಷ ಮತ್ತು 1.5 ಕೋಟಿ ರೂ.ಗಳು ಮರ್ಸಿಡಿಸ್ ಬೆಂಜ್ ಕೂದ ಅವರ ಸಂಗ್ರಹದಲ್ಲಿದೆ. ಇನ್ನು ಅವರ ಬಳಿ1.8 ಕೋಟಿ ಬೆಲೆಯ ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಕಾರು ಕೂಡ ಇದೆ. ಜೊತೆಗೆ 16 ಲಕ್ಷ ಮೌಲ್ಯದ ಹಾರ್ಲೆ ಡೇವಿಡ್ಸನ್ ಡೈನಾ ಫ್ಯಾಟ್ ಬಾಬ್ ಒಡೆಯ ಸಿದ್ಧಾರ್ಥ್!

ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು ರಶ್ಮಿಕಾ ಮಂದಣ್ಣ ಅವರೊಂದಿಗೆ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸಿದ್ದಾರೆ. ಕರಣ್ ಜೋಹರ್ ಅವರ ಯೋದ್ಧ ಮತ್ತು ‘ರಾಕುಲ್ ಪ್ರೀತ್ ಸಿಂಗ್ ಭಗವಾನ್‌ ಕಾ ಶುಕ್ರ್‌ ಹೇ’ ಸಿನಿಮಾಗಳಲ್ಲಿಯೂ ಸಿದ್ಧಾರ್ಥ್ ಬ್ಯುಸಿಯಾಗಿದ್ದಾರೆ. ಜೊತೆಗೆ ಭೂಷಣ್ ಕುಮಾರ್ ಅವರ ಥಡಮ್ ರಿಮೇಕ್ ನಲ್ಲೂ, ರೋಹಿತ್ ಶೆಟ್ಟಿಯವರ ವೆಬ್ ಸರಣಿ ಇಂಡಿಯನ್ ಪೋಲೀಸ್ ಫೋರ್ಸ್‌ಗಾಗಿಯೂ ನಟ ಸಿದ್ಧಾರ್ಥ್ ಅಭಿನಯಿಸಲಿದ್ದಾರೆ.

https://youtu.be/7tbcThxwdz0

Leave a Comment

error: Content is protected !!