ಒಂದು ಕಾಲದಲ್ಲಿ ಮಾದಕ ನಟನೆಯಿಂದಲೆ ದಕ್ಷಿಣ ಭಾರತವನ್ನೇ ಗಡಗಡನೆ ನಡುಗಿಸಿದ್ದ ನಟಿ ಸಿಲ್ಕ್ ಸ್ಮಿತಾ ಏನಾದ್ರೂ ಗೊತ್ತಾ

ಸಿಲ್ಕ್ ಸ್ಮಿತಾ ಒಂದು ಕಾಲದ ದಕ್ಷಿಣ ಭಾರತದ ಚಿತ್ರರಂಗದ ಸೆ,ಕ್ಸ್ ಬಾಂಬ್ ಎಂತಲೆ ಗುರುತಿಸಿಕೊಂಡಿದ್ದ ಮಾದಕ ನಟಿ. ಸುಮಾರು 2 ದಶಕಗಳ ಕಾಲ ದಕ್ಷಿಣ ಭಾರತೀಯ ಚಿತ್ರರಂಗವನ್ನು ಆಳಿದಳಾಕೆ. ಎಂತಹ ಕಳಪೆ ಚಿತ್ರವಾದರೂ ಅದರಲ್ಲಿ ಸ್ಮಿತಾರ ಒಂದು ನೃತ್ಯ ಅಥವಾ ಆಕೆಯ ಒಂದು ಸಣ್ಣ ದೃಶ್ಯವಿದೆ ಎಂದರೆ ಆ ಸಿನಿಮಾ ನೋಡಲು ಜನ ಮುಗಿಬೀಳುತ್ತಿದ್ದ ಕಾಲವೊಂದಿತ್ತು. ಈಕೆ ಸಹ ಕಲಾವಿದೆ ಮತ್ತು ಕ್ಯಾಬರೆ ಡ್ಯಾನ್ಸರ್ ಆಗಿದ್ದರೂ ಯುವಕರ ಡ್ರೀಮ್ ಗರ್ಲ್ ಆಗಿದ್ದಳು.

ಇವರು ಮೂಲತಃ ಆಂಧ್ರದವರು ಅಲ್ಲಿಯ ಪಶ್ಚಿಮ ಗೋದಾವರಿ ಜಿಲ್ಲೆಯ ಎಲ್ಲೂರಿನಲ್ಲಿ 1960 ಡಿಸೆಂಬರ್ 2 ರಂದು ರಾಮುಲು ಹಾಗೂ ಸರಸಮ್ಮ ಎಂಬ ದಂಪತಿಗೆ ಜನಿಸಿದ ಸಿಲ್ಕ್ ಸ್ಮಿತಾ ಬಡ ಕುಟುಂಬದಿಂದ ಬಂದಿದ್ದಾರೆ. ಕುಟುಂಬ ನಿರ್ವಹಣೆಗಾಗಿ ತಮ್ಮ ಹತ್ತನೇ ವಯಸ್ಸಿನಲ್ಲಿ ಶಾಲೆಬಿಟ್ಟ ಸ್ಮಿತಾ ಚಿಕ್ಕಪುಟ್ಟ ಕೂಲಿ ಕೆಲಸದಲ್ಲಿ ತೊಡಗಿಕೊಂಡರು. ಕಪ್ಪು ವರ್ಣದ ಬಾಲಕಿಯಾದರೂ ಮೈ,ಕೈ ತುಂಬಿಕೊಂಡು ನೋಡಲು ಆಕರ್ಷಕವಾಗಿದ್ದ ಆಕೆಯ ಮೈಮಾಟವೆ ಆಕೆಗೆ ಶಾಪದಂತೆ ಪರಿಣಮಿಸಿ ಚಿಕ್ಕ ವಯಸ್ಸಿನಲ್ಲಿ ಬಾಲ್ಯ ವಿವಾಹವನ್ನು ಮಾಡಲಾಯಿತು.

ವಿವಾಹದ ನಂತರವೂ ಸಂಕಷ್ಟ ತಪ್ಪಲಿಲ್ಲ ಆಕೆಯ ಗಂಡ ಹಾಗೂ ಅತ್ತೆ ಮನೆಯವರ ಕಿರುಕುಳವನ್ನು ಸಹಿಸಲಾರದೆ ಊರನ್ನು ಬಿಟ್ಟು ಚೆನ್ನೈಗೆ ಬರುತ್ತಾರೆ. ಮೊದ ಮೊದಲು ಟಚ್ ಅಪ್ ಕಲಾವಿದೆಯಾಗಿ ವೃತ್ತಿಗಿಳಿದ ಸಿಲ್ಕ್ ಇತರ ನಟಿಯರಿಗೆ ಮೇಕಪ್ ಮಾಡುತ್ತಾ ಕಾಲ ಕಳೆದರು. ಇವರ ಮೂಲ ಹೆಸರು ವಿಜಯಲಕ್ಷ್ಮಿ. ಚೆನ್ನೈನ ಪ್ರಖ್ಯಾತ ಎವಿಯಮ್ ಸ್ಟುಡಿಯೋದ ನಿರ್ದೇಶಕರಲ್ಲಿ ಒಬ್ಬರಾದ ವಿನು ಚಕ್ರವರ್ತಿಯವರು ಸ್ಮಿತಾರನ್ನು ಗಮನಿಸಿ ತಮ್ಮ ವಲಯದೊಳಗೆ ಬರಮಾಡಿಕೊಂಡರು. ಸ್ಮಿತಾ ಅವರಿಗೆ ಇಂಗ್ಲೀಷ್ ಜೊತೆ ನಟಿಯರಿಗೆ ಇರಬೇಕಾದ ನಡೆ, ನುಡಿ, ಹಾವ-ಭಾವ ಕಲಿಸಿದರು ಎಲ್ಲವನ್ನು ಸ್ಮಿತಾ ಶ್ರದ್ಧೆಯಿಂದ ಕಲಿತು ಪಕ್ವವಾದರು. ವಿನು ಚಕ್ರವರ್ತಿ ವಿಜಯಲಕ್ಷ್ಮಿ ಹೆಸರಿನ ಬದಲಿಗೆ ಸ್ಮಿತಾ ಎಂಬ ಹೆಸರು ಕೊಟ್ಟರು.

ಆಕೆಯ ಮಾದಕ ಮೈಮಾಟದಿಂದ ಕೆಲ ಲೋ ಬಜೆಟ್ ಸಿನಿಮಾದಲ್ಲಿ ಕ್ಯಾಬರೆ ನಟಿಯಾಗುವ ಅವಕಾಶ ಒದಗಿಬಂತು. 1979 ರಲ್ಲಿ ಆಕೆ ನಟಿಸಿದ ಮೊದಲ ತಮಿಳು ಚಿತ್ರ ಒಂಡಿ ಚಕ್ಕಾರಂ ಚಿತ್ರ ಬಿಡುಗಡೆಯಾಯಿತು. ಆ ಚಿತ್ರದಲ್ಲಿ ಆಕೆಯ ಪಾತ್ರದ ಹೆಸರು ಸಿಲ್ಕ್ ಮುಂದೆ ಆಕೆಯ ಪಾಪ್ಯುಲರ್ ನಿಕ್ ನೇಮ್ ಆಯಿತು. ಈ ಚಿತ್ರದ ಯಶಸ್ಸಿನ ನಂತರ ಸಾಲು ಸಾಲು ಸಿನಿಮಾಗಳು ಸ್ಮಿತಾ ಅವರ ಬಳಿ ಬಂದಿತು. ನಂತರದ ದಿನಗಳಲ್ಲಿ ಆಕೆ ತಮಿಳು ಮಾತ್ರವಲ್ಲದೆ ತೆಲುಗು, ಮಲೆಯಾಳಂ, ಕನ್ನಡ ಹಾಗೂ ಹಿಂದಿಯಲ್ಲಿ ನಟಿಸಿ ಯಶಸ್ವಿ ಚತುರ್ ಭಾಷಾ ಕಲಾವಿದೆಯಾದರು. 1982 ರಲ್ಲಿ ತೆರೆ ಕಂಡ ತಮಿಳಿನ ಮುಂಡ್ರು ಮೂಗನ್ ಸಿನಿಮಾ ನಟನೆ ಸ್ಮಿತಾಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರಾಧಾನ್ಯತೆ ತಂದುಕೊಟ್ಟಿತು.

ಈ ಚಿತ್ರ ನಂತರ ಕನ್ನಡದಲ್ಲೂ ಗೆದ್ದ ಮಗ ಎಂಬ ಹೆಸರಿನಲ್ಲಿ ಶಂಕರ ನಾಗ್ ಅವರ ನಾಯಕತ್ವದಲ್ಲಿ ತೆರೆ ಕಂಡಿತು. 1982-1990 ರವರೆಗೂ ಸ್ಮಿತಾ ತಮಿಳು, ತೆಲುಗು, ಮಲೆಯಾಳಂನ ಬಹು ಬೇಡಿಕೆಯ ನಟಿಯಾಗಿದ್ದರು. 1993 ರಲ್ಲಿ ಅಳಿಮಯ್ಯ ಚಿತ್ರದ ಮೂಲಕ ಕನ್ನಡಕ್ಕೆ ಪ್ರವೇಶ ಮಾಡಿದ ಸ್ಮಿತಾ ಚಿನ್ನ, ಗಣೇಶನ ಗಲಾಟೆ, ಲಾಕಪ್ ಡೆತ್, ಹಳ್ಳಿ ಮೇಷ್ಟ್ರು ಮುಂತಾದ ಚಿತ್ರಗಳಲ್ಲಿ ಮಿಂಚಿದರು. ಕನ್ನಡದಲ್ಲಿ ಹೆಚ್ಚಿನ ಅವಕಾಶ ತಂದುಕೊಟ್ಟ ಕೀರ್ತಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರದು. ಅವರ ನಟನೆ ಹಾಗೂ ನಿರ್ಮಾಣದ ಹಲವು ಚಿತ್ರಗಳಲ್ಲಿ ಸ್ಮಿತಾ ನಟಿಸಿದರು. ಸ್ಮಿತಾ ಅವರು ಯಾರನ್ನು ಪ್ರೀತಿಸಲು ಇಲ್ಲ ಮದುವೆಯೂ ಆಗಲಿಲ್ಲ. ಅವರು ನಿಜ ಜೀವನದಲ್ಲಿ ಅಂತರ್ಮುಖಿ ವ್ಯಕ್ತಿ ಯಾರೊಂದಿಗೂ ಹೆಚ್ಚು ಮಾತನಾಡದೆ ಏಕಾಂಗಿಯಾಗಿರುತ್ತಿದ್ದರು ಅವರ ಈ ಗುಣ ಅವರ ಬಗ್ಗೆ ವಿವಾದ ಏಳಲು ಕಾರಣವಾಯಿತು. ಸ್ಮಿತಾ ಅಹಂಕಾರಿ, ಕೊಬ್ಬಿನ ನಟಿ ಎಂಬ ಮೂದಲಿಕೆಗಳು ಸಾಮಾನ್ಯವಾಗಿದ್ದವು.

ಆದರೆ ವಾಸ್ತವದಲ್ಲಿ ಅವರು ನೇರ ನಡೆ ನುಡಿಯವರಾಗಿದ್ದು ಸದಾ ಮಂದಸ್ಮಿತರಾಗಿದ್ದರು. 1994 ರ ನಂತರ ಬೇಡಿಕೆಗಳು ಕಡಿಮೆಯಾಗತೊಡಗಿತು. 1995 ರ ಹೊತ್ತಿಗೆ ಅತಿಯಾದ ಖಿನ್ನತೆಗೆ ಒಳಗಾಗಿ ಚಿತ್ರರಂಗದ ತಿರಸ್ಕಾರದಿಂದ ಬೇಸತ್ತು ಮಧ್ಯವ್ಯಸನಿಯಾದರು. ಇನ್ನೊಬ್ಬ ಕ್ಯಾಬರೆ ನಟಿ ಅನುರಾಧ ಸ್ಮಿತಾರ ಆಪ್ತ ಗೆಳತಿಯಾಗಿದ್ದರು. 1996 ರ ಸಪ್ಟೆಂಬರ್ 26 ರಂದು ಸ್ಮಿತಾ ಅವರು ಗಂಭೀರ ವಿಷಯದ ಬಗ್ಗೆ ಚರ್ಚಿಸಲು ಅನುರಾಧ ಅವರಿಗೆ ಕರೆ ಮಾಡಿ ಮನೆಗೆ ಆಹ್ವಾನಿಸಿದ್ದರು. ಕೊನೆಗೆ ಕರೆಮಾಡಿದ್ದು ರವಿಚಂದ್ರನ್ ಅವರಿಗೆ ಆದರೆ ಅವರು ಶೂಟಿಂಗ್ ನಲ್ಲಿರುವುದರಿಂದ ಸಿಗಲಿಲ್ಲ. ಅನುರಾಧ ಅವರು ಸ್ಮಿತಾರ ಮನೆಗೆ ಹೋಗುವಷ್ಟರಲ್ಲಿ ಸ್ಮಿತಾ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಾವು ಹಲವು ಸಂಶಯಗಳಿಗೆ ಕಾರಣವಾಯಿತು. ಸ್ವಲ್ಪ ದಿನದವರೆಗೆ ಸಾವಿನ ಸುತ್ತ ಹಲವು ನಟರ ಹೆಸರುಗಳು ಹರಿದಾಡಿದವು. ಒಟ್ಟಿನಲ್ಲಿ ಸ್ಮಿತಾರ ಸಾವು ನಿಗೂಢವಾಗಿದೆ.

Leave A Reply

Your email address will not be published.

error: Content is protected !!