ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಈ ಪ್ರಾಣಿ ಕಂಡರೆ ಏನಾಗುತ್ತೆ ಗೊತ್ತೇ? ಓದಿ..

ನಿದ್ರೆ ಮಾಡುವಾಗ ಕನಸುಗಳು ಬೀಳುವುದು ಸಹಜ. ಕನಸಿನಲ್ಲಿ ಪ್ರಾಣಿ ಪಕ್ಷಿಗಳು ಯಾವುದಾದರೂ ಬಂದು ಮನುಷ್ಯನಿಗೆ ಯಾವುದೋ ಒಂದು ಸೂಚನೆಯನ್ನು ನೀಡುತ್ತವೆ. ಅದರಲ್ಲಿ ಮುಖ್ಯವಾಗಿ ಕನಸಲ್ಲಿ ನಾಯಿಗಳು ಕಾಣಿಸಿಕೊಂಡರೆ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು, ನಾಯಿಗಳು ಕನಸಲ್ಲಿ ಬಂದರೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಅನ್ನೋದನ್ನ ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.

ಕನಸಲ್ಲಿ ನಾಯಿಗಳು ಕಾಣಿಸಿಕೊಂಡರೆ ಜೀವನದಲ್ಲಿ ನಿಮಗೆ ಯಾವುದೋ ಹೊಸ ವ್ಯಕ್ತಿಗಳ ಪರಿಚಯ ಆಗತ್ತೆ ಅನ್ನೋದನ್ನ ಸೂಚಿಸುತ್ತದೆ. ಆ ವ್ಯಕ್ತಿಯ ಪರಿಚಯದಿಂದ ನಿಮಗೆ ಒಳ್ಳೆಯ ಲಾಭ ಆಗತ್ತೆ ಅಂತ ಶಾಸ್ತ್ರ ಹೇಳತ್ತೆ. ನಿಮ್ಮ ಕನಸಲ್ಲಿ ನಾಯಿಗಳು ಬಂದರೆ ಜೀವನದಲ್ಲಿ ಹಲವಾರು ವಿಶೇಷವಾದ ಬದಲಾವಣೆಗಳು ಉಂಟಾಗುತ್ತವೆ. ಇನ್ನೂ ಎರಡನೆಯದಾಗಿ ನಿಮ್ಮ ಕನಸಲ್ಲಿ ನಾಯಿಯ ಜೊತೆ ನೀವು ನಡೆದುಕೊಂಡು ಹೋಗುವ ಹಾಗೆ ಕಂಡರೆ, ನಿಮಗೆ ಎಷ್ಟೇ ಕಷ್ಟ ಇದ್ದರೂ ಸಹ ಆ ಎಲ್ಲಾ ಕಷ್ಟಗಳಿಂದ ಪಾರು ಮಾಡಲು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿ ಒಬ್ಬರು ನಿಮ್ಮೆಲ್ಲ ಕಷ್ಟಗಳನ್ನು ದೂರ ಮಾಡಲು ಬರುತ್ತಾರೆ ಎಂದು ಅರ್ಥ. ಜೀವನದಲ್ಲಿ ವಿಶೇಷ ಬದಲಾವಣೆ ಆಗತ್ತೆ ನಿಮ್ಮ ಎಲ್ಲಾ ಕಷ್ಟಗಳೂ ನಿಮ್ಮ ಸ್ನೇಹಿತನಿಂದಾಗಿ ದೂರ ಆಗತ್ತೆ.

ಮೂರನೆಯದಾಗಿ, ನಾಯಿ ಕಚ್ಛಿದಂತೆ ಅಥವಾ ನಾಯಿ ಜೋರಾಗಿ ಕೂಗಿದಂತೆ ಹೆದರಿಕೆ ಆಗುವ ಹಾಗೆ ಕನಸು ಬಿದ್ದರೆ, ಮಿತ್ರರು ಶತ್ರುಗಳು ಆಗುತ್ತಾರೆ ಅನ್ನುವ ಎಚ್ಚರಿಕೆಯನ್ನು ಈ ಕನಸು ಹೆಳತ್ತೆ. ನಿಮ್ಮ ಸಮಸ್ಯೆಗಳು ಹೆಚ್ಚು ಆಗತ್ತೆ ಹಾಗಾಗಿ ಮಿತ್ರರಿಂದ ದೂರ ಇರಬೇಕು. ಈ ರೀತಿಯ ಕನಸು ಬಿದ್ದರೆ ನಿಮಗೆ ಹಲವಾರು ಕಷ್ಟಗಳೂ ಬರತ್ತೆ ಹಾಗೂ ನಿಮ್ಮ ಹತ್ತಿರದ ಮಿತ್ರರೇ ಶತ್ರುಗಳು ಆಗುತ್ತಾರೆ ಅನ್ನೋ ಸೂಚನೆ. ಹಾಗಾಗಿ ನಿಮ್ಮ ಮಿತ್ರರಿಂದಲೆ ನಿಮಗೆ ಜೀವನಕ್ಕೆ ಸಂಕಷ್ಟ ಇರುವುದರಿಂದ ಎಚ್ಚರಿಕೆಯಿಂದ ಇರಬೇಕು.ಹೀಗೆ ನಾಯಿ ಕಚ್ಚಿದಂತೆ ಕನಸು ಬಿದ್ದರೆ ಅದಕ್ಕೆ ಪರಿಹಾರವಾಗಿ ಶನಿವಾರದ ದಿನ ಕಾಲ ಭೈರವ ಸ್ವಾಮಿಯ ದರ್ಶನ ಪಡೆಯಬೇಕು. ಸಮಸ್ಯೆಗಳು ಸ್ವಲ್ಪ ಆದರೂ ಕಡಿಮೆ ಆಗತ್ತೆ.

ಇನ್ನೂ ಕನಸಲ್ಲಿ ಬಿಳಿ ಬಣ್ಣದ ನಾಯಿಗಳು ಕಂಡು ಬಂದರೆ, ನಿಮಗೆ ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಂದ ಅತೀ ಹೆಚ್ಚು ಧನ ಆಗಮನ ಆಗತ್ತೆ ಎಂದು ಅರ್ಥ. ನಿಮ್ಮ ಬಂಧುಗಳು, ಮಿತ್ರರು ಹಣಕಾಸಿನ ವಿಚಾರದಲ್ಲಿ ನಿಮ್ಮ ಜೀವನದಲ್ಲಿ ಅತೀ ಮುಖ್ಯವಾದ ಬದಲಾವಣೆಯನ್ನು ತರುತ್ತಾರೆ ಎಂಬ ಸೂಚನೆಯನ್ನು ಈ ಕನಸು ನೀಡತ್ತೆ. ಬಿಳಿ ನಾಯಿ ಕನಸಲ್ಲಿ ಬಂದರೆ ಅದು ಒಳ್ಳೆಯದು ಎಂದು ಸ್ವಪ್ನ ಸಿದ್ಧಾಂತ ಹೇಳುತ್ತದೆ.

ಇನ್ನೂ ಕೊನೆಯದಾಗಿ ಕಪ್ಪು ಬಣ್ಣದ ನಾಯಿ ಏನಾದರೂ ಕನಸಲ್ಲಿ ಬಂದರೆ, ನೀವು ಅತಿಯಾಗಿ ನಂಬಿದವರೆ ನಿಮಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಾರೆ ಎಂದು ಅರ್ಥ. ಯಾರನ್ನ ಅತಿಯಾಗಿ ನಂಬಿರುತ್ತೀರ ಅವರಿಂದ ಮೋಸ ಆಗತ್ತೆ ಅದು ಪ್ರೀತಿ ಪ್ರೇಮದ ವಿಶಯದಲ್ಲಿಯೂ ಆಗಿರಬಹುದು ಅಥವಾ ಸ್ನೇಹಿತರಿಂದಲು ಆಗಿರಬಹುದು. ಜೀವನದಲ್ಲಿ ಅತಿ ದೊಡ್ಡ ಹೊಡೆತ ಬೀಳತ್ತೆ. ಕಪ್ಪು ಬಣ್ಣದ ನಾಯಿ ಕನಸಲ್ಲಿ ಬಂದಾಗ ನೀವು ತುಂಬಾ ಹುಷಾರಾಗಿ ಜೀವನ ನಡೆಸಬೇಕು. ಸ್ವಪ್ನ ಶಾಸ್ತ್ರದ ಪ್ರಕಾರ, ಯಾವ ರೀತಿಯ ನಾಯಿ ಹೇಗೆ ಕನಸಲ್ಲಿ ಬಂದರೆ ಏನಾಗಬಹುದು ಎಂಬುದರ ಬಗ್ಗೆ ಇದು ಸಣ್ಣ ಮಾಹಿತಿ

Leave a Comment

error: Content is protected !!