ಸೋನಿಯಾ ಗಾಂಧಿಯವರ ಬಗ್ಗೆ ನಿಮಗೆ ತಿಳಿಯದ ವಿಷಯ ಇಲ್ಲಿದೆ ನೋಡಿ

ಸೋನಿಯಾ ಗಾಂಧಿಯವರು ಇಟಾಲಿಯನ್. ಭಾರತೀಯ ರಾಜಕಾರಣಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರಾಗಿದ್ದಾರೆ. ಅವರು ನೆಹರು-ಗಾಂಧಿ ಕುಟುಂಬದ ಮೂರನೇ ಪೀಳಿಗೆಗೆ ಸೇರಿದವರು. ಅವರು ಇಟಲಿಯಲ್ಲಿ ಜನಿಸಿದರು. ಸೋನಿಯಾ ಗಾಂಧಿಯವರು ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಪತ್ನಿಯಾಗಿದ್ದಾರೆ. 1991 ರ ಪತಿ ರಾಜೀವ್ ಗಾಂಧಿಯವರ ಮರಣದ ನಂತರ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ನಿರಂತರ ವಿನಂತಿಗಳನ್ನು ಅವರು ಪಾಲಿಟಿಸಿಕ್ಸ್ಗೆ ಸೇರಿದರು. ಸೋನಿಯಾ ಅವರ ವಿದೇಶಿ ಮೂಲವು ಭಾರತೀಯ ರಾಜಕೀಯದಲ್ಲಿ ವಿವಾದ ಮತ್ತು ಚರ್ಚೆಯ ವಿಷಯವಾಗಿದೆ. ಸ್ವಾತಂತ್ರ್ಯದಿಂದ ರಾಷ್ಟ್ರೀಯ ಪಕ್ಷವನ್ನು ಮುನ್ನಡೆಸುವ ಮೊದಲ ವಿದೇಶಿ ಮಹಿಳೆ ಇವರಾಗಿದ್ದರೆ. ಭಾರತೀಯ ರಾಜಕೀಯದಲ್ಲಿ ಅತ್ಯಂತ ಹಳೆಯ ಮತ್ತು ಅತ್ಯಂತ ಶಕ್ತಿಯುತ ಪಕ್ಷಗಳಲ್ಲಿ ಒಂದಾಗಿದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಅವರು ಯುನೈಟೆಡ್ ಪ್ರಗತಿಪರ ಅಲೈಯನ್ಸ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ಇದು ಸತತ ಎರಡು ಪದಗಳಿಗಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅತೀ ಧಿರ್ಘಾವಧಿಯ ಅಧ್ಯಕ್ಷರಾಗಿದ್ದಾರೆ.

ಸೋನಿಯಾ ಗಾಂಧಿಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುನೈಟೆಡ್ ಪ್ರೊಗ್ರೆಸಿವ್ ಅಲಯನ್ಸ್ (ಯುಪಿಎ) ಇದರ ಸಮನ್ವಯ ಸಮಿತಿಯ ಅಧ್ಯಕ್ಷೆಯಾಗಿದ್ದರು. ಸೋನಿಯಾ 1946ರ ಡಿಸೆಂಬರ್ 9 ರಂದು ಇಟಲಿಯಲ್ಲಿ ಜನಿಸಿದರು. ತಮ್ಮ ಮೂಲ ಶಿಕ್ಷಣದ ನಂತರ ಇವರು ವಿದೇಶಿ ಭಾಷೆಗಳ ಶಿಕ್ಷಣ ಸಂಸ್ಥೆಗೆ ಸೇರಿ ಇಂಗ್ಲಿಷ್, ಫ್ರೆಂಚ್ ಹಾಗೂ ರಶಿಯನ್ ಭಾಷೆಗಳನ್ನು ಕಲಿತರು. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಕೋರ್ಸ್ ಕಲಿಯುತ್ತಿರುವಾಗ ಇವರು ರಾಜೀವ ಗಾಂಧಿಯವರನ್ನು ಭೇಟಿಯಾದರು. ನಂತರ ಇವರಿಬ್ಬರೂ 1968 ರಲ್ಲಿ ಹೊಸದಿಲ್ಲಿಯಲ್ಲಿ ವಿವಾಹವಾದರು. ಇವರಿಗೆ ರಾಹುಲ ಹಾಗೂ ಪ್ರಿಯಾಂಕಾ ಎಂಬ ಮಕ್ಕಳು ಹಾಗೂ ಇಬ್ಬರು ಮೊಮ್ಮಕ್ಕಳು ಇದ್ದಾರೆ. ಸೋನಿಯಾ ತಮ್ಮ ಬಹುತೇಕ ವೈವಾಹಿಕ ಜೀವನವನ್ನು ಮನೆಯ ವ್ಯವಹಾರ ನೋಡಿಕೊಳ್ಳುತ್ತ ಒಬ್ಬ ಸಾಮಾನ್ಯ ಗೃಹಿಣಿಯಾಗಿಯೇ ಕಳೆದರು. ಆಗ ಪ್ರಧಾನಿಯಾಗಿದ್ದ ತಮ್ಮ ಅತ್ತೆ ಇಂದಿರಾ ಗಾಂಧಿಯವರ ಅನೇಕ ಕಚೇರಿ ಕೆಲಸಗಳಲ್ಲಿ ಇವರು ಸಹಾಯ ಮಾಡುತ್ತ ಅವರಿಗೆ ಬೆಂಬಲವಾಗಿದ್ದರು. 1984 ರಿಂದ 1991 ರ ಅವಧಿಯಲ್ಲಿ ಪತಿ ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದಾಗ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದಾಗ ಯಾವಾಗಲಾದರೊಮ್ಮೆ ಇವರು ಪತಿಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ವಿರಳವಾಗಿ ಅವರೊಂದಿಗೆ ವಿದೇಶಗಳಿಗೆ ಹೋಗುತ್ತಿದ್ದರು. ಇದೇ ಸಮಯದಲ್ಲಿ ಪತಿಯ ಅಮೇಥಿ ಕ್ಷೇತ್ರದಲ್ಲಿ ನಡೆಯುತ್ತಿದ್ದ ಆರೋಗ್ಯ ಶಿಬಿರಗಳು ಹಾಗೂ ಇನ್ನಿತರ ಸಮಾಜ ಕಲ್ಯಾಣ ಕೆಲಸಗಳ ಉಸ್ತುವಾರಿಯನ್ನು ಸಹ ಇವರು ನೋಡಿಕೊಳ್ಳುತ್ತಿದ್ದರು.
1991 ರ ಮೇ ತಿಂಗಳಲ್ಲಿ ಪತಿ ರಾಜೀವ ಗಾಂಧಿಯವರ ಹತ್ಯೆಯ ನಂತರ ಲಾಭರಹಿತ ರಹಿತ ರಾಜೀವ ಗಾಂಧಿ ಫೌಂಡೇಶನ್ ಹಾಗೂ ಇದಕ್ಕೆ ಸಂಬಂಧಿಸಿದಂತೆ ಬುದ್ಧಿಜೀವಿಗಳ ರಾಜೀವ ಗಾಂಧಿ ಇನಸ್ಟಿಟ್ಯೂಟ್ ಆಫ್ ಕಂಟೆಂಪೊರರಿ ಸ್ಟಡೀಸ್ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಂಘಟನೆಗಳ ಮುಖ್ಯಸ್ಥೆಯಾಗಿ ಪತಿ ರಾಜೀವ ಗಾಂಧಿಯವರು ಆದರ್ಶಗಳನ್ನು ಸಮಾಜದಲ್ಲಿ ಜಾರಿಗೆ ತರಲು ಪ್ರಯತ್ನಿಸಿದರು.

ಸೋನಿಯಾ ಇನ್ನೂ ಹಲವಾರು ಎನ್ಜಿಓ ಸಂಸ್ಥೆಗಳನ್ನು ನಡೆಸುತ್ತಾರೆ.
1998ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಇವರು ಸಾರ್ವಜನಿಕ ಜೀವನ ಪ್ರವೇಶಿಸಿದರು. ನಂತರ ಪಕ್ಷಕ್ಕಾಗಿ ಹಗಲಿರುಳು ಚುನಾವಣಾ ಪ್ರಚಾರ ನಡೆಸಿ ಇವರು 1998ರ ಏಪ್ರಿಲ್ನಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು.
1999ರಲ್ಲಿ ಅಮೇಥಿ ವಿಧಾನಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಜಯಶಾಲಿಯಾದ ಸೋನಿಯಾ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. 2004 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಇವರು ನಡೆಸಿದ ಪ್ರಚಾರದಿಂದ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಹೀಗಾಗಿ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಯುಪಿಎ ಸರಕಾರ ರಚಿಸಲು ಸಾಧ್ಯವಾಯಿತು. ಈ ಚುನಾವಣೆಯಲ್ಲಿ ಸೋನಿಯಾ ರಾಯಬರೇಲಿ ಕ್ಷೇತ್ರದಿಂದ ಸಂಸದೆಯಾಗಿ ಚುನಾಯಿತರಾಗಿದ್ದರು.
ಕಾಂಗ್ರೆಸ್ ಪಕ್ಷವು ಲೋಕಸಭೆಯಲ್ಲಿ ಅವರನ್ನು ಒಮ್ಮತದಿಂದ ಲೋಕಸಭಾ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದರಿಂದ ಇವರೇ ಪ್ರಧಾನಿಯಾಗಬೇಕೆಂಬ ಬೇಡಿಕೆ ಇತ್ತು. ಆದರೆ ಈ ಬೇಡಿಕೆಯನ್ನು ಒಪ್ಪದ ಸೋನಿಯಾ ಮನಮೋಹನ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡಿದರು. ಯುಪಿಎ ಅಧ್ಯಕ್ಷೆಯಾಗಿ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿಯಾಗಿ ಅವರು ಕೆಲಸ ಮಾಡಿದರು.
ಸಾಮಾಜಿಕ ಹಾಗೂ ಆರ್ಥಿಕ ನೀತಿ ನಿಯಮಾವಳಿಗಳನ್ನು ರೂಪಿಸುವಲ್ಲಿ ಸರಕಾರಕ್ಕೆ ಮಹತ್ವದ ನಿರ್ದೇಶನಗಳನ್ನು ನೀಡುವ ನ್ಯಾಷನಲ್ ಅಡ್ವೈಸರಿ ಕೌನ್ಸಿಲ್ ಅಧ್ಯಕ್ಷೆಯಾಗಿ ಮೇ 2006 ರವರೆಗೆ ಕಾರ್ಯನಿರ್ವಹಿಸಿದರು. ಇವರ ಕಾರ್ಯಾವಧಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ, ರಾಷ್ಟ್ರೀಯ ಗ್ರಾಮೀನ ಆರೋಗ್ಯ ಮಿಷನ್, ಮಧ್ಯಾಹ್ನ ಆಹಾರ ಯೋಜನೆ, ಜವಾಹರಲಾಲ ನೆಹರು ಅರ್ಬನ್ ರಿನೀವಲ್ ಮಿಷನ್ ಮತ್ತು ನ್ಯಾಷನಲ್ ರಿಹ್ಯಾಬಿಲಿಟೇಷನ್ ಪಾಲಿಸಿ ಮುಂತಾದ ಅತಿ ಪ್ರಮುಖ ಯೋಜನೆಗಳ ಕುರಿತಾಗಿ ನ್ಯಾಷನಲ್ ಅಡ್ವೈಸರಿ ಕೌನ್ಸಿಲ್ ನೀಡಿತ್ತು. ಸೋನಿಯಾ ಗಾಂಧಿ ಅವರ ಕುರಿತಾದ ಕೆಲವು ಆಸಕ್ತಿಕರ ಅಂಶಗಳು ಇಂತಿವೆ. ಬಾಲ್ಯದಲ್ಲಿ ಇವರಿಗೆ ಫುಟಬಾಲ್ ಅತಿ ಮೆಚ್ಚಿನ ಕ್ರೀಡೆಯಾಗಿತ್ತು ಹಾಗೂ ನೆರೆಹೊರೆಯ ಮಕ್ಕಳೊಂದಿಗೆ ಫುಟಬಾಲ್ ಆಡುತ್ತ ಕಾಲ ಕಳೆಯುತ್ತಿದ್ದರು. ಮದುವೆಗೂ ಮುನ್ನ ಇವರು ಅಮಿತಾಭ ಬಚ್ಚನ್ ಅವರ ವೆಲ್ಲಿಂಗ್ಟನ್ ಕ್ರೆಸೆಂಟ್ ಹೌಸನಲ್ಲಿ ಕೆಲ ಕಾಲ ವಾಸ ಮಾಡಿದ್ದರು.

1968ರ ಜನೆವರಿ 26 ರಂದು ಸೋನಿಯಾ ಹಾಗೂ ರಾಜೀವ ಗಾಂಧಿ ಅವರ ನಿಶ್ಚಿತಾರ್ಥ ನಡೆಯಿತು. ನಂತರ 1968ರ ಫೆಬ್ರವರಿ 25 ರ ವಸಂತ ಪಂಚಮಿಯಂದು ಇಬ್ಬರೂ ವಿವಾಹವಾದರು. ಇದಕ್ಕೆ ದಶಕಗಳ ಮುನ್ನ ಇದೇ ದಿನಾಂಕದಂದು ಇಂದಿರಾ ಹಾಗೂ ಫಿರೋಜ ಗಾಂಧಿ ಅವರ ವಿವಾಹ ನಡೆದಿತ್ತು. ಇವರ ಮದುವೆಯ ಮೆಹಂದಿ ಸಮಾರಂಭವು ಮದುವೆಯ ಮುನ್ನಾ ದಿನ ಬಚ್ಚನ್ ಅವರ ನಿವಾಸದಲ್ಲಿ ನಡೆದಿತ್ತು. ವಿವಾಹ ಪೂರ್ವ ಇವರು ಫ್ರೆಂಚ್ ಭಾಷೆಯನ್ನು ಚೆನ್ನಾಗಿ ಕಲಿತಿದ್ದರು. ವಿವಾಹವಾದ ಮೇಲೆ ಒಬ್ಬ ಶಿಕ್ಷಕರಿಂದ ಹಾಗೂ ನಂತರ ತರಬೇತಿ ಸಂಸ್ಥೆಯೊಂದರ ಮೂಲಕ ಹಿಂದಿ ಕಲಿತುಕೊಂಡರು. ರಾಜೀವ ಮತ್ತು ರಾಜೀವ್ಸ್ ವರ್ಲ್ಡ್ ಎಂಬ ಎರಡು ಕೃತಿಗಳನ್ನು ರಚಿಸಿದ್ದಾರೆ. 1992 ರಿಂದ 1964 ರ ಅವಧಿಯಲ್ಲಿ ಪಂಡಿತ ಜವಾಹರಲಾಲ ನೆಹರು ಹಾಗೂ ಮಗಳು ಇಂದಿರಾ ಅವರ ನಡುವಿನ ಪತ್ರ ವ್ಯವಹಾರ ಆಧರಿಸಿದ ಎರಡು ಕೃತಿಗಳಾದ ಫ್ರೀಡಂಸ್ ಡಾಟರ್’ ಹಾಗೂ ಟು ಅಲೋನ್, ಟು ಟುಗೆದರ್ ಎಂಬ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಪರಿಸರ, ಹಿಂದುಳಿದವರ ಅಭ್ಯುದಯ, ಮಹಿಳಾ ಸಬಲೀಕರಣ, ಮಕ್ಕಳ ಹಕ್ಕುಗಳ ವಿಷಯದಲ್ಲಿ ಸೋನಿಯಾ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ.
ಭಾರತೀಯ ಸಮಕಾಲೀನ ವಿಷಯಗಳು, ಶಾಸ್ತ್ರೀಯ ಹಾಗೂ ಬುಡಕಟ್ಟು ಕಲೆಗಳು, ಭಾರತೀಯ ಕೈಮಗ್ಗ ಹಾಗೂ ಕರಕುಶಲ ಕಲೆ, ಜಾನಪದ ಹಾಗೂ ಶಾಸ್ತ್ರೀಯ ಸಂಗೀತ ಮುಂತಾದುವುಗಳಲ್ಲಿ ಸಹ ಸೋನಿಯಾ ವಿಶೇಷ ಆಸಕ್ತಿ ಹೊಂದಿದ್ದಾರೆ. ತೈಲವರ್ಣ ಚಿತ್ರಕಲೆಗಳನ್ನು ಸಂರಕ್ಷಿಸುವ ಕುರಿತಂತೆ ದೆಹಲಿಯ ನ್ಯಾಷನಲ್ ಮ್ಯೂಸಿಯಂನಿಂದ ಡಿಪ್ಲೊಮಾ ಪಡೆದುಕೊಂಡಿದ್ದಾರೆ.

Leave A Reply

Your email address will not be published.

error: Content is protected !!