ಭಕ್ತರ ಕಷ್ಟಗಳನ್ನು ನಿವಾರಿಸಿ ವರ ನೀಡುವ ಬನಶಂಕರಿ ದೇವಿಯ ಮಹಿಮೆ

ಲಕ್ಷಾಂತರ ಭಕ್ತರ ಆರಾಧ್ಯ ದೈವ, ಕರ್ನಾಟಕ, ಮಹಾರಾಷ್ಟ, ಆಂದ್ರಪ್ರದೇಶ ರಾಜ್ಯದ ಭಕ್ತರ ಮನೆ ದೇವರು ಬಾಗಲಕೋಟೆಯ ಬನಶಂಕರಿ ದೇವಾಲಯ ಎಲ್ಲರಿಗೂ ಚಿರಪರಿಚಿತ. ಬನಶಂಕರಿ ದೇವಿಯ ಬಗ್ಗೆ, ಆ ದೇವಿಯ ಮಹಿಮೆಯ ಬಗ್ಗೆ ತಿಳಿದುಕೊಳ್ಳೋಣ. ಪ್ರತೀ ವರ್ಷ ಜನವರಿ ತಿಂಗಳಿನಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ ಆ ಜಾತ್ರೆಗೆ ಹಲವಾರು ದೂರದ ಊರುಗಳಿಂದ ಸಾಗರೋಪಾದಿಯಲ್ಲಿ ಹರಿದು ಬರುವ ಲಕ್ಷಾಂತರ ಭಕ್ತರು. ಬನಶಂಕರೀ ದೇವಿ ಚಾಲುಕ್ಯ ಸಾಮ್ರಾಜ್ಯದ ಕುಲ ದೈವವಾಗಿರುವುದರಿಂದ ವಿಶೇಷವಾಗಿದೆ.

ಬನಶಂಕರೀ ದೇವಿ ಯಾರು ಈ ಹೆಸರು ಬರಲು ಕಾರಣವೇನು ಎಂಬುದನ್ನು ಒಂದು ಕಥೆಯ ಮೂಲಕ ತಿಳಿಯೋಣ. ತಿಲಕಾರಣ್ಯದಲ್ಲಿ ದುರ್ಗದತ್ತ ಮತ್ತು ಧೂಮದತ್ತ ಎಂಬ ಹೆಸರಿನ ರಾಕ್ಷಸರಿದ್ದು, ಎಲ್ಲಾ ಜನರಿಗೆ ಋಷಿಮುನಿಗಳಿಗೆ ತೊಂದರೆ ಮಾಡುತ್ತಿದ್ದರು. ಭೂಲೋಕ ಮಾತ್ರವಲ್ಲದೇ ದೇವಲೋಕ್ಕೂ ಧಾಳಿಯಿಟ್ಟು ದೇವರ ಮೇಲೂ ಧಾಳಿ ಮಾಡಿ ತಮ್ಮ ಕ್ರೂರತನ ಮೆರೆಯುತ್ತಾರೆ. ಕೊನೆಗೆ ಇವರ ಧಾಳಿ ತಡೆಯದೇ ದೇವತೆಗಳೆಲ್ಲ ಪಾರ್ವತಿಯ ಮೊರೆ ಹೋಗುತ್ತಾರೆ ಆಗ ಪಾರ್ವತಿ ದೇವಿ ಉಗ್ರ ರೂಪ ತಾಳಿ ತಿಲಕಾರಣ್ಯಕ್ಕೆ ಬಂದು ಆ ಇಬ್ಬರು ರಾಖ್ಷಸರನ್ನೂ ಸಂಹರಿಸಿ, ಅದೇ ಉಗ್ರ ರೂಪದಲ್ಲಿ ಅಲ್ಲಿಯೇ ನೆಲೆ ನಿಲ್ಲುತ್ತಾಳೆ. ದೇವಿಯ ಉಗ್ರ ರೂಪ ಕಂಡ ದೇವತೆಗಳು ದೇವಿಯನ್ನು ಶಾಂತಗೊಳಿಸುವಂತೆ ತ್ರಿದಂಡ ಮುನಿಗೆ ಶರಣು ಹೋಗುತ್ತಾರೆ.

ಆ ಮುನಿಯ ಭಕ್ತಿಗೆ ಮೆಚ್ಚಿ ದೇವಿ ಶಾಂತಳಾಗಿ ಆ ಅರಣ್ಯದಲ್ಲೇ ನೆಲೆ ನಿಂತು ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾ, ಬನದಲ್ಲಿ ನಿಂತ ಬನಶಂಕರಿ, ಶಾಕಾಂಬರಿ ಎಂದೂ ಜನಪ್ರಿಯಳಾಗುತ್ತಾಳೆ. ಬರ ಬಂದಾಗ ತನ್ನ ದೇಹದಿಂದ ಶಾಖ ಉತ್ಪಾದಿಸಿ ಅದರಿಂದ ಬಂದ ಬೆವರ ಹನಿಯಿಂದ ಮಳೆ ಸುರಿಸಿ, ಆ ಬನವನ್ನು ಹಸಿರಾಗಿಸಿದಳು ಎಂಬ ಪ್ರತೀತಿ ಇದೆ. ಇಂತಹ ಸ್ಥಳದಲ್ಲಿ ತನ್ನ ವಾಸಸ್ಥಾನವನ್ನು ನೆಲೆಗೊಳಿಸಿಕೊಂಡು ಜನರಿಗೆ ವರಗಳನ್ನು ಕರುಣಿಸಿ ಶಾಂತಿ ನೆಮ್ಮದಿ ನೀಡಿದಳು.

ಚಾಲುಕ್ಯರ ಕಾಲದಲ್ಲಿ ಈ ದೇವಾಲಯದ ಜೀರ್ಣೋಧ್ಧಾರ ಮಾಡಲಾಗಿತ್ತು. ಸುಮಾರು ಆರನೇ ಶತಮಾನದಲ್ಲಿ ಈ ದೇವಿ ಇಲ್ಲಿ ಬಂದು ನೆಲೆಯೂರಿ ಬನಶಂಕರಿಯಾಗಿ ನೆಲೆಸಿದಳು. ಬಾದಾಮಿ ಬನಶಂಕರೀ ದೇವಿಯ ಜಾತ್ರೆ ಉತ್ತರ ಕರ್ನಾಟಕದಲ್ಲಿ ಅತ್ಯಂತ ಪ್ರಸಿಧ್ಧ ಜಾತ್ರೆ ಆಗಿದ್ದು ಹಲವಾರು ಧಾರ್ಮಿಕ ವಿಧಿ ವಿಧಾನಗಳು, ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುತ್ತವೆ. ೩೦ ದಿನಗಳ ಕಾಲ ಈ ಜಾತ್ರೆ ನಡೆಯುತ್ತದೆ ಮತ್ತು ಮಹಾ ರಥೋತ್ಸವ ಕೂಡ ನಡೆಯುತ್ತದೆ. 30 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಎಲ್ಲ ರೀತಿಯ ವಸ್ತುಗಳೂ ಇರುತ್ತವೆ ಒಂದು ರೀತಿಯ ಶಾಪಿಂಗ ಮಾಲ್ ಹಾಗೇ

ರಾಜ್ಯ, ನೆರೆ ರಾಜ್ಯಗಳಿಂದ ಬರುವ ಭಕ್ತರು ವಾರಗಟ್ಟಲೆ ದಿನ ಇಲ್ಲಿ ಬೀಡು ಬಿಡುತ್ತಾರೆ. ರೊಟ್ಟಿ, ಎಣಗಾಯಿ ಹಾಗೂ ವಿವಿಧ ಬಗೆಯ ಚಟ್ನಿಗಳು ವಿಶೇಷವಾಗಿ ದೊರೆಯುತ್ತವೆ. ರಾತ್ರಿಯಿಡೀ ನಡೆಯುವ ನಾಟಕಗಳು, ಟೂರಿಂಗ್ ಟಾಕೀಸ್ಗಳು ಇಲ್ಲಿನ ಪ್ರಮುಖ ಮನರಂಜನೆಗಳು. ರೈತಾಪಿ ಜನರು ಅತೀ ಹೆಚ್ಚು ಈ ದೇವಿಯ ಆರಾಧನೆ ಮಾಡುತ್ತಾರೆ. ಇದು ಕೇವಲ ಒಂದು ಜಾತ್ರೆ ಮಾತ್ರ ಆಗಿರದೇ ಸಾಂಸ್ಕ್ರತಿಕ ಶ್ರೀಮಂತಿಕೆಯ ಹಬ್ಬವೇ ಆಗಿದೆ

Leave a Comment

error: Content is protected !!