ಅಧಿದೇವತೆ ಕೊಲ್ಲೂರು ಮೂಕಾಂಬಿಕೆ ದೇವಿಯ, ನಿಮಗೆ ತಿಳಿಯದ ಪವಾಡಗಳಿವು!

ಕೊಲ್ಲೂರು ಮೂಕಾಂಬಿಕೆ ಯಾರಿಗೆ ಗೊತ್ತಿಲ್ಲ. ಅವಳ ದರ್ಶನ ಪಡೆಯಲು ದೂರ ದೂರ ದೂರದಿಂದ ಭಕ್ತರು ಆಗಮಿಸುತ್ತಾರೆ. ಕೊಲ್ಲೂರು ಮೂಕಾಂಬಿಕೆ ಬೇಡಿದ್ದನ್ನೆಲ್ಲ ನೀಡುವ ಅಧಿದೇವತೆ. ನಾವು ಆತಾಯಿಯ ಬಗ್ಗೆ ಇರುವ ಪೌರಾಣಿಕ ಹಿನ್ನೆಲೆಯನ್ನು ತಿಳಿಯೋಣ.

ಮೂಕಾಂಬಿಕೆ ಹೆಸರು ಬಂದಿದ್ದು ಹೇಗೆ:- ಇತಿಹಾಸದ ಪ್ರಕಾರ ಇಲ್ಲಿ ತಪಸ್ಸು ಮಾಡುತ್ತಿದ್ದ ಕೋಲಮಹರ್ಷಿಗೆ ಕಮ್ಮಾಸುರ ಎಂಬ ರಾಕ್ಷಸ ತೊಂದರೆ ಕೊಡುತ್ತಿದ್ದ. ಆಗಲೇ ಆತ ಸಾವೇ ಬರದಂತಹ ವರವನ್ನು ತಪಸ್ಸು ಮಾಡಿ ಬ್ರಹ್ಮನ ಬಳಿ ಪಡೆದಿದ್ದ. ಆದರೆ ಪುರುಷ ಮತ್ತು ಅಸುರರ ಬಳಿ ಸಾವು ಬರಬಾರದು ಎಂದು ಬೇಡಿಕೊಂಡಿದ್ದ. ಸ್ತ್ರೀಯರಿಂದ ಸಾವು ಬರಬಾರದೆಂದು ಬೇಡಿಕೊಂಡಿರಲಿಲ್ಲ. ಹೀಗಾಗಿ ದೇವತೆಗಳಿಂದ ಸಾವು ಬರದಂತೆ ಅವನು ಮತ್ತೆ ಶಿವನನ್ನು ಕುರಿತು ತಪಸ್ಸಿಗೆ ಮುಂದಾದಾಗ ಮುಂದೆ ಆಗಬಹುದಾದ ತೊಂದರೆ, ಅನಾಹುತವನ್ನು ಅರಿತು ಇಂದ್ರ ದೇವನು ಕಾತ್ಯಾಯಿನಿ ದೇವಿಯ ಮೊರೆ ಹೋದಾಗ ಕಮ್ಮಾಸುರನ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷ ಆದಾಗ ಕಮ್ಮಾಸುರ ವರ ಕೇಳಬೇಕು ಅನ್ನುವಷ್ಟರಲ್ಲಿ ದೇವಿ ಕಾತ್ಯಾಯಿನಿ ಕಮ್ಮಾಸುರನ ಗಂಟಲಿನಲ್ಲಿ ಕುಳಿತು ಮೂಕನನ್ನಾಗಿ ಮಾಡುತ್ತಾಳೆ.

ಅಂದಿನಿಂದ ಆತ ಮೂಕಾಸುರ ಎಂದು ಕರೆಯಲ್ಪಡುತ್ತಾನೆ. ವರ ಸಿಗದಂತೆ ಮಾಡಿದ ಇಂದ್ರನ
ಬಗ್ಗೆ ಕುಪಿತಗೊಂಡ ಕಮ್ಮಾಸುರ ಸ್ವರ್ಗಕ್ಕೆ ಬರುತ್ತಾನೆ. ಆಗ ಕಮ್ಮಾಸುರನ ಹಿಂಸೆ ತಾಳಲಾರದೆ ಎಲ್ಲಾ
ದೇವತೆಗಳು ಕಾತ್ಯಾಯಿನಿಯಲ್ಲಿ ಶಕ್ತಿ ತುಂಬುತ್ತಾರೆ. ನಂತರ ಕಮ್ಮಾಸುರನ ಸಂಹಾರ ಮಾಡಿದ ಕಾತ್ಯಾಯಿನಿಯನ್ನು ಮೂಕಾಂಬಿಕೆ ಎಂದು ಕರೆಯುತ್ತಾರೆ.

ಆದಿ ಶಂಕರಾಚಾರ್ಯರಿಗೆ ಅಮ್ಮನ ರೌದ್ರಾವತಾರ:- ಕೊಡಚಾದ್ರಿ ಬೆಟ್ಟದ ಕಡೆ ತೆರಳುವಾಗ ಕಾಳಿ ಶಂಕರಾಚಾರ್ಯರಿಗೆ ಕಾಣಿಸಿ ಕೊಳ್ಳುತ್ತಾಳೆ. ಇವರನ್ನು ತಿನ್ನುವುದಾಗಿ ತಿಳಿಸಿದಾಗ ಇವರು “ಶಾಂತಳಾಗಿ ನಿನ್ನ ದರ್ಶನ ನೀಡು ತಾಯಿ” ಎಂದಾಗ ಶಾಂತಳಾಗಿ ದರ್ಶನ ನೀಡುತ್ತಾಳೆ. ಬಳಿಕ ಬಯಕೆಯೇನೆಂದು ಕೇಳಿದಾಗ ಕೇರಳದಲ್ಲಿನ ಸ್ಥಳ ಒಂದರಲ್ಲಿ ದೇವಿಯನ್ನು ಪ್ರತಿಷ್ಠಾಪಿಸುವ ಇಚ್ಛೆ ಹೇಳುತ್ತಾರೆ. ಇದಕ್ಕೆ ಸಮ್ಮತಿಸಿದ ದೇವಿ ಒಂದುಶರತ್ತನ್ನು ನೀಡುತ್ತಾಳೆ. ಶಂಕರರು ಅವರ ಗಮ್ಯ ಸ್ಥಾನ ತಲುಪುವವರೆಗೂ ದೇವಿಯು ಅವರನ್ನು ಅನುಸರಿಸುವುದಾಗಿಹೇಳುತ್ತಾಳೆ. ಆದರೆ ಎಲ್ಲೂ ಹಿಂದಿರುಗಿ ನೋಡಬಾರದೆಂಬ ಸವಾಲಿತ್ತು.

ದೇವಿಯ ಕಾಲಿನಗೆಜ್ಜೆಯ ಧ್ವನಿ ಕೇಳದಾದಾಗಹಿಂತಿರುಗಿ ನೋಡಿ ಬಿಟ್ಟರು. ಆ ಸ್ಥಳದಲ್ಲೇ ಕೊಲ್ಲೂರು ಪ್ರತಿಷ್ಠಾಪನೆಗೆ ಸಮ್ಮತಿ ಸೂಚಿಸುತ್ತಾರೆ. ಅದೇ ಈಗಿನಕೊಲ್ಲೂರು ಮೂಕಾಂಬಿಕಾದೇವಾಲಯ. ಆದ್ದರಿಂದ ನಾವೆಲ್ಲ ಮೂಕಾಂಬಿಕೆ ದೇವಿಯ ಆಸ್ಥಾನಕ್ಕೆ ಹೋಗಿ ತಾಯಿಯ ದರುಶನ ಪಡೆದು ಪುನೀತರಾಗೋಣ.

Leave A Reply

Your email address will not be published.

error: Content is protected !!