ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ನೀವು ತಿಳಿಯದ ಸತ್ಯ ಸತ್ಯತೆಗಳು

ಈ ಧರ್ಮಸ್ಥಳ ಕ್ಷೇತ್ರ ಸತ್ಯ, ನಿಷ್ಠೆ, ಧರ್ಮಕ್ಕೆ ಹೆಸರುವಾಸಿ. ಇದು ಕರ್ನಾಟಕದ ಎರಡನೇ ಅತಿ ದೊಡ್ಡ ದೇವಾಲಯ. ಇಲ್ಲಿ ಹರಿಯುವ ನದಿಯ ಸ್ನಾನ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಕೊಡುತ್ತದೆ ಇದು ಧರ್ಮದ ನೆಲೆಯ ಪುಣ್ಯ ಸ್ಥಳ ದಕ್ಷಿಣ ಭಾರತದ ಪುಣ್ಯ ಕ್ಷೇತ್ರ ಧರ್ಮಸ್ಥಳ. ಧರ್ಮ ಸ್ಥಳ ಕರ್ನಾಟಕದ ಅತ್ಯಂತ ಪುಣ್ಯ ಸ್ಥಳವಾಗಿದ್ದು ಈ ಕ್ಷೇತ್ರಕ್ಕೆ ಸುಮಾರು 700-800 ವರ್ಷಗಳ ಇತಿಹಾಸವಿದೆ ಇಲ್ಲಿ ಶ್ರೀ ಮಂಜುನಾಸ್ವಾಮಿ ನೆಲೆಸಿದ್ದಾನೆ. ಸೆಪ್ಟೆಂಬರ್ ನಿಂದ ಮಾರ್ಚ್ ಈ ಅವಧಿಯಲ್ಲಿ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಧರ್ಮಸ್ಥಳದ ಅಕ್ಕಪಕ್ಕ ಹಲವಾರು ಪ್ರವಾಸಿ ತಾಣಗಳು ಇದ್ದು ಅವುಗಳನ್ನು ವೀಕ್ಷಿಸಲು 2/3 ದಿನಗಳು ಬೇಕು.

ನಿಗಧಿತ ಸಮಯವನ್ನು ಹೊರತುಪಡಿಸಿ ಪ್ರತಿದಿನ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಬಹುದು. ಇಲ್ಲಿ ತಂಗಲು ದೇವಸ್ಥಾನದ ಆಡಳಿತ ಮಂಡಳಿಯಿಂದ ಕೋಣೆಗಳು ದೊರೆಯುತ್ತವೆ ರಜಾತಾದ್ರಿ, ವೈಶಾಲಿ, ಶ್ರೀ ಸನ್ನಿಧಿ, ಗಾಯತ್ರಿ, ಸಾಕೇತ, ಗಂಗೋತ್ರಿ ಎಂಬ ಹೆಸರಿನ ಇನ್ನೂ ಹಲವಾರು ತಂಗುದಾನಗಳು ದೊರೆಯುತ್ತವೆ. ಇಷ್ಟೆ ಅಲ್ಲದೆ ಖಾಸಗಿ ತಂಗುದಾಣಗಳು ಸಹ ಇವೆ. ಇಲ್ಲಿ ಮೊದಲೇ ಕಾಯ್ದಿರಿಸಿದ್ದರೆ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.

ಧರ್ಮಸ್ಥಳಕ್ಕೆ ಬರುವ ಯಾತ್ರಿಕರಿಗೆ ಉಚಿತವಾಗಿ ಸುಸಜ್ಜಿತವಾದ ಅನ್ನಪೂರ್ಣ ಎಂಬ ವಿಶಾಲವಾದ ಊಟದ ಗೃಹವಿದೆ. ಧರ್ಮಸ್ಥಳ ದಕ್ಷಿಣ ಕನ್ನಡದ ಮಲೆನಾಡು ಪ್ರದೇಶದಲ್ಲಿದೆ ಇದು ಬೆಂಗಳೂರಿನಿಂದ ಸುಮಾರು 300 ಕಿ. ಮೀ ದೂರದಲ್ಲಿದೆ, ಮಂಗಳೂರಿನಿಂದ ಸುಮಾರು 76ಕಿ.ಮೀ ಹಾಗೂ ಹುಬ್ಬಳ್ಳಿಯಿಂದ356ಕಿ.ಮೀ ದೂರದಲ್ಲಿದೆ. ರೈಲಿನಲ್ಲಿ ಪ್ರಾಯಾಣ ಮಾಡುವುದಾದರೆ ಬೆಂಗಳೂರು ಅಥವಾ ಮಂಗಳೂರಿನಿಂದ ಸುಬ್ರಹ್ಮಣ್ಯ ರೈಲ್ವೆ ಸ್ಟೇಷನ್ ಅಲ್ಲಿ ಇಳಿದು ಅಲ್ಲಿಂದ ಬಸ್ ಮೂಲಕ ಧರ್ಮಸ್ಥಳ ತಲುಪಬಹುದು.

ಧರ್ಮಸ್ಥಳ ಸುತ್ತಮುತ್ತಲಿನ ಇನ್ನಿತರೆ ಪ್ರವಾಸಿ ತಾಣಗಳು ಯಾವುದು ಅಂತ ನೋಡೋಣ.
ಮಂಜುನಾಥ ಸ್ವಾಮಿಯ ದೇವಾಲಯ ಧರ್ಮಸ್ಥಳ ನೇತ್ರಾವತಿ ನದಿಯ ದಡದಲ್ಲಿರುವ ಈ ದೇವಾಲಯ ಸುಮಾರು 800 ವರ್ಷಗಳ ಇತಿಹಾಸ ಹೊಂದಿದೆ. ಇಲ್ಲಿರುವ ಮಂಜುನಾಥ ಸ್ವಾಮಿಯ ವಿಗ್ರಹವನ್ನು ಮಂಗಳೂರಿನ ಖದ್ರಿ ಇಂದ ಉಡುಪಿಯ ವಾದಿರಾಜರು ತಂದು ಪ್ರತಿಷ್ಠಾಪಿಸಿದರು ಎಂದು ಪುರಾಣಗಳು ಹೇಳುತ್ತವೆ. ಧರ್ಮಸ್ಥಳ ದೇವಾಲಯವು ದಾನ ಧರ್ಮಗಳಿಗೆ ಹೆಸರುವಾಸಿ ಆಗಿದೆ. ಇಲ್ಲಿ ಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಗರ್ಭ ಗುಡಿಯಲ್ಲಿ ಮಹಾ ಗಣಪತಿ, ಪಾರ್ವತಿ ವಿಗೆಹಗಳು ಕೂಡ ಇವೆ. ಈ ದೇವಾಲಯವನ್ನು ಕೇರಳದ ದೇವಾಲಯಗಳ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ಮೊದಲಿನಿಂದಲೂ ಜೈನ ಧರ್ಮೀಯರು ಈ ದೇವಾಲಯವನ್ನು ನಡೆಸಿಕೊಂಡು ಬರುತ್ತಿದ್ದು ಪ್ರಸ್ತುತ ಶ್ರೀ ವೀರೇಂದ್ರ ಹೆಗ್ಗಡೆ ಅವರು ಧರ್ಮದರ್ಶಿ ಆಗಿ ಆಡಳಿತ ನಡೆಸುತ್ತಿದ್ದಾರೆ.

ಮ್ಯೂಸಿಯಂ: ಧರ್ಮಸ್ಥಳದ ಇತಿಹಾಸವನ್ನು ತಿಳಿಯಬೇಕಾದರೆ, ಮಂಜುಶಾ ಮ್ಯೂಸಿಯಂ ಗೆ ಭೇಟಿ ನೀಡಬೇಕು. ಇಲ್ಲಿ ಅದ್ಭುತ ವಸ್ತು ಸಂಗ್ರಹಾಲಯಗಳು ಇವೆ ಅದರಲ್ಲಿ ವಿಂಟೇಜ್ ಕಾರುಗಳು, ಲೋಹದ ವಸ್ತು, ಆಭರಣಗಳು, ಮೈಸೂರು ವರ್ಣ ಚಿತ್ರಗಳಿಂದ ಹಿಡಿದು ಪುರಾತನ ವಸ್ತು ಸಂಗ್ರಹಗಳು ಇವೆ. ಇದು ದಕ್ಷಿಣ ಭಾರತದ ಅತ್ಯದ್ಬುತ ಮ್ಯೂಸಿಯಂ ಆಗಿದೆ.

ಬಾಹುಬಲಿ ದೇವಾಲಯ: ಬಾಹುಬಲಿ ಎಂದ ಕೂಡಲೇ ನೆನಪಾಗುವುದು ಶ್ರವಣ ಬೆಳಗೊಳ. ಆದರೆ ಧರ್ಮಸ್ಥಳದಲ್ಲಿ ಕೂಡ 39 ಮೀಟರ್ ನ ಒಂದು ಬಾಹುಬಲಿಯ ಮೂರ್ತಿ ಇದೆ. ಇದನ್ನು ಜೈನ ಧರ್ಮದಲ್ಲಿ ತ್ಯಾಗ ಮತ್ತು ಅಹಿಂಸೆಯ ಒಂದು ಸಂಕೇತವಾಗಿ ಬಿಂಬಿಸಲಾಗುತ್ತದೆ.

ರಾಮ ಮಂದಿರ: ಇದು ಧರ್ಮಸ್ಥಳದ ಬಹು ಆಕರ್ಷಕ ದೇವಸ್ಥಾನ ಆಗಿದ್ದು ಬೆಳ್ತಂಗಡಿಗೆ ಹೋಗುವ ಮಾರ್ಗದಲ್ಲಿ ಇದು ದೊರೆಯುತ್ತದೆ. ಇಲ್ಲಿ ಅಮೃತ ಶಿಲೆಯಿಂದ ಕೆತ್ತಿದ ರಾಮ ಸೀತೆ ಲಕ್ಷ್ಮಣರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದನ್ನು 2003ರಲ್ಲಿ ನಿರ್ಮಿಸಲಾಗಿದ್ದು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

ನೇತ್ರಾವತಿ ನದಿ: ಕರ್ನಾಟಕದ ಪವಿತ್ರವಾದ ನದಿಯಾಗಿದೆ. ಧರ್ಮಸ್ಥಳದಿಂದ ಕೇವಲ ಒಂದೂವರೆ ಕಿ.ಮಿ ದೂರದಲ್ಲಿ ಹರಿಯುವ ನದಿ ಇದಕ್ಕೆ ಒಂದ್ ಚಿಕ್ಕದಾದ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಭಕ್ತರು ಮಂಜುನಾಥ ಸ್ವಾಮಿಯ ದರ್ಶನಕ್ಕೆ ಹೋಗುವ ಮೊದಲು ಈ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಹೋಗುತ್ತಾರೆ. ನಂತರ ದೇವರ ದರ್ಶನ ಮಾಡಿ ತಮ್ಮ ಮನದ ದುಗುಡ ಕಳೆದುಕೊಂಡು ಮಾನಸಿಕ ನಿಮ್ಮದೇ ಶಾಂತಿ ಪಡೆಯುತ್ತಾರೆ. ಇವಿಷ್ಟು ಮಾಹಿತಿಗಳು ಧರ್ಮಸ್ಥಳ ಮತ್ತು ಅದರ ಸುತ್ತ ಮುತ್ತಲು ಇರುವ ಪ್ರವಾಸಿ ತಾಣಗಳ ಕುರುತಾಗಿತ್ತು.

Leave A Reply

Your email address will not be published.

error: Content is protected !!