
ಶ್ರೀ ಕುಕ್ಕೆ ಸುಬ್ರಮಣ್ಯನ ಸನ್ನಿಧಿಗೆ ಹೋದಾಗ ಈ ಕೆಲಸ ಮಾಡಿದ್ರೆ ಜೀವನ ಪಾವನ
ಯಾವುದೇ ರೀತಿಯ ಸರ್ಪ ದೋಷ ಅಥವಾ ಬೇರೆ ಯಾವುದೇ ಕಷ್ಟಗಳಿದ್ದರು ಕೂಡ ಈ ದೇವಸ್ಥಾನಕ್ಕೆ ಬರುವುದರಿಂದ ನಿವಾರಿಸಿಕೊಳ್ಳಬಹುದು. ದೇವರ ದರ್ಶನದಿಂದ ಎಲ್ಲ ದೋಷಗಳು ನಶಿಸಿ ಜೀವನ ಪಾವನ ಆಗುತ್ತದೆ. ಇಲ್ಲಿ ಸುಬ್ರಹ್ಮಣ್ಯ ಸ್ವಾಮಿ ೫ ಹೆಡೆಯ ಸರ್ಪದ ರೂಪದಲ್ಲಿ ನೆಲೆ ನಿಂತು ಭಕ್ತರನ್ನು ಉದ್ಧರಿಸುತ್ತಿದ್ದಾನೆ.
ಧರ್ಮಸ್ಥಳದಿಂದ ಸ್ವಲ್ಪ ದೂರದಲ್ಲಿ ಇರುವುದು ಈ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಇದು ಬಹಳ ಶಕ್ತಿಶಾಲಿ ದೇವಸ್ಥಾನ. ನಾವು ದೇವಸ್ಥಾನಕ್ಕೆ ಹೋದಾಗ ಹೇಗೋ ಗಡಿಬಿಡಿಯಲ್ಲಿ ದೇವರ ದರ್ಶನವನ್ನು ಮಾಡಿಕೊಂಡು ಬರುತ್ತೇವೆ ಆದರೆ ಅಲ್ಲಿನ ಸ್ಥಳದ ಮಹಿಮೆ ದೇವರ ಶಕ್ತಿಯ ಬಗ್ಗೆ ತಿಳಿಯದೆ ಬರುತ್ತೇವೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗ ಅಲ್ಲಿ ಸರ್ಪ ದೋಷಗಳು ಏನಾದರೂ ಇದ್ದಲ್ಲಿ ಅಲ್ಲಿ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಬೇಕು. ಈ ನೀರಿನಲ್ಲಿ ವಿಶೇಷವಾದ ಶಕ್ತಿ ಇದೆ ಆ ನದಿಯ ನೀರಿನಿಂದಲೇ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಗೆ ದಿನನಿತ್ಯದ ಅಭಿಷೇಕ ನಡೆಯುವುದು. ಈ ನೀರಿನಲ್ಲಿ ಸ್ನಾನ ಮಾಡಿ ದೇವಾಲಯವನ್ನು ಪ್ರವೇಶಿಸಬೇಕು ಆದರೆ ಅಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಅವುಗಳೆಂದರೆ,
ಗರ್ಭ ಗುಡಿಯ ಬಳಿ ಹೋಗುವ ಮೊದಲು ನನಗೆ ಹೊರಗೆ ಗರುದಾಗಂಬ ಅಥವಾ ಗರುಡ ಧ್ವಜ ಸಿಗುತ್ತೆ ಮೊದಲು ಸ ಗರುಡ ಧ್ವಜಕ್ಕೆ ನಮಿಸಿ ಹೋಗಬೇಕು. ಅಲ್ಲಿ ನಿಂತು ನಮ್ಮೆಲ್ಲ ಪಾಪ ಕರ್ಮಗಳು, ಸರ್ಪ ದೋಷಗಳು ನಿವಾರಣೆ ಆಗ್ಲಿ ಅಂತ ಬೇಡಕೊಂಡರೆ ನಮಗೆ ಸುಬ್ರಹಮಣ್ಯಸ್ವಾಮಿ ಯ ಅನುಗ್ರಹ ಆಗುತ್ತದೆ. ನಂತರ ಸುಬ್ರಹಮಣ್ಯಸ್ವಾಮಿಯ ದರ್ಶನ ಪಡೆದು ಸಂಪೂರ್ಣ ದೇವರ ದರ್ಶನ ಪಡೆಯಬೇಕು.
ಇಲ್ಲಿ ವಿಶೇಷವಾಗಿ ಕೆಲವರು ಸರ್ಪ ಸಂಸ್ಕಾರವನ್ನು ಮಾಡಿಸುತ್ತಾರೆ. ಸರ್ಪ ಸಂಸ್ಕಾರವನ್ನು ಮಾಡಿಸಲು ಇಚ್ಛಿಸುವವರು ಎರಡು ದಿನ ಮೊದಲೇ ಹೋಗಿ ಅಲ್ಲಿ ಉಳಿಯಬೇಕು. ಸಂಸ್ಕಾರ ಮುಗಿದ ನಂತರ ಅಲ್ಲಿ ಬ್ರಾಹ್ಮಣರು ತಮ್ಮ ಕೈಯ್ಯಾರೆ ಊಟ ಬಡಿಸುತ್ತಾರೆ ಅಲ್ಲಿಗೆ ಸರ್ಪ ಸಂಸ್ಕಾರದ ವಿಧಿ ವಿಧಾನಗಳು ಸಂಪೂರ್ಣಗೊಂಡು ಅಲ್ಲಿಗೆ ನಮ್ಮೆಲ್ಲ ಸರ್ಪ ದೋಷಗಳು ನಿವಾರಣೆಯಾಗುತ್ತವೆ.
ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಇಲ್ಲಿ ಕುಮಾರಧಾರ ನದಿಯ ನೀರಿನಿಂದ ದೇವರಿಗೆ ಅಭಿಷೇಕ ಮಾಡುತ್ತಾರೆ ಆ ಅಭಿಷೇಕದ ನೀರು ನಮಗೆ ದೊರೆತರೆ, ಕೆಳಿಯಾದರು ಅಭಿಷೇಕದ ನೀರನ್ನು ಪಡೆದು ಅದನ್ನು ಸೇವಿಸಿದರೆ ಬೇರೆಲ್ಲ ದೋಷಗಳು ನಿವಾರಣೆ ಯಾಗುತ್ತದೆ. ಇವುಗಳನ್ನು ಮಾಡುವುದರಿಂದ ಸಂಪೂರ್ಣ ದೇವರ ಅನುಗ್ರಹ ಪ್ರಾಪ್ತಿ ಆಗುತ್ತದೆ.
